ತೀರಿಹೋದವರನ್ನು ಕುರಿತು ಮಾತು ಬೇಕೆ?
ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ