Advertisement

Tag: ಸಿನಿಮಾ

ನೀ ದೇಹದೊಳಗೋ, ದೇಹ ನಿನ್ನೊಳಗೋ: ರಾಮ್ ಪ್ರಕಾಶ್ ರೈ ಕೆ ಸರಣಿ

ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಬೆಂಕಿಯ ನಾಲಗೆಯೊಳಗೆ ಬೆಂದ ಸತ್ಯಗಳು: ರಾಮ್ ಪ್ರಕಾಶ್ ರೈ ಕೆ ಸರಣಿ

ಈ ಕಥಾನಕದಲ್ಲಿ ಸರಣಿ ಅವಘಡಗಳು ನಡೆದರೂ ಕೊನೆವರೆಗೂ ಅದರ ಹಿಂದಿನ ಮರ್ಮವ ತಿಳಿಸದೆ ಮಳೆಗೆ ಕಾಯುವ ರೈತನಂತೆ ನೋಡುಗನ ಬಂಧಿಸಿಡುತ್ತದೆ. ತನ್ನ ತಪ್ಪಿಲ್ಲದೇ ತನ್ನ ಒಲವನ್ನು ಕಳೆದುಕೊಳ್ಳುವ ವಿಜಯ್, ಬದುಕನ್ನು ಪ್ರೀತಿಸುವುದೊಂದನ್ನು ಬಿಟ್ಟು ಇನ್ನೇನು ತಿಳಿಯದ ಭಟ್ಟರ ಜೀವನ ಒಲೆಯಲ್ಲಿ ನರ್ತಿಸುವ ಬೆಂಕಿಯ ಶಾಖಕ್ಕೆ ಸಿಲುಕಿ ನಲುಗುವುದು ಇವೆಲ್ಲವೂ ಭಾವ ಪ್ರಚೋದಕ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ನೀನೆ ಕೊನೆ-ಮೊದಲೆಂಬ ಕಾಲಾತೀತ ಪ್ರೇಮಗಾಥೆ: ರಾಮ್ ಪ್ರಕಾಶ್ ರೈ ಕೆ ಸರಣಿ

ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಬದುಕೆಂಬ ಚಹಾಗೊಂದಿಷ್ಟು ಒಲವಿನ ಸಕ್ಕರೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ.
ರಾಮ್ ಪ್ರಕಾಶ್ ರೈ ಕೆ. ಸರಣಿ

Read More

ರಾಮ್ ಪ್ರಕಾಶ್ ರೈ ಕೆ. ಹೊಸ ಸರಣಿ “ಸಿನಿ ಪನೋರಮಾ” ಇಂದಿನಿಂದ

ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ