ಆ ಹೊಳೆವ ಕಂಗಳು…: ಸುಧಾ ಆಡುಕಳ ಅಂಕಣ
ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ