Advertisement

Tag: ಸುಧಾ ಆಡುಕಳ

ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಟ್ಯಾಗೋರರು ಮಾಡಿದ ಭಾಷಣವನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ. ವಿದ್ವಾಂಸ, ತತ್ವಜ್ಞಾನಿ ಆಗಿದ್ದ ಟ್ಯಾಗೋರರು ಈ ಭಾಷಣದಲ್ಲಿ ತಮ್ಮ ಬಗ್ಗೆ ಹಾಗೂ ಜಗತ್ತನ್ನು ತಾವು ಅರ್ಥೈಸಿಕೊಂಡ ಬಗ್ಗೆ ವಿವರಿಸಿದ್ದಾರೆ. ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿ ಕವನಗಳು ಹೇಗೆ ಒಲಿದು ಬಂದವು ಎಂಬುದನ್ನು ಹೇಳಿದ್ದಾರೆ.

Read More

ಬೃಂದಾವನಕೆ ಗೋವನು ಕಾಯಲು…

“ನಮ್ಮ ಆಟ ಒಂದು ಕಡೆಗಾದರೆ ರಾಸುಗಳ ಆಟ ಇನ್ನೊಂದು ಮೋಜಾಗಿರುತ್ತಿತ್ತು. ಒಂದೇ ಮನೆಯ ರಾಸುಗಳು ಹೊತ್ತಾಟ ಮಾಡುತ್ತಿರಲಿಲ್ಲ. ಆದರೆ ಇಲ್ಲಿ ಅನೇಕ ಮನೆಯ ಗಂಟಿಗಳು ಸೇರುತ್ತಿದುದರಿಂದ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ಕಾದಾಟ ಸದಾ ನಡೆಯುತ್ತಿತ್ತು. ದನಗಳೆಲ್ಲ ಸಾಮಾನ್ಯವಾಗಿ ಈ ಉಸಾಬರಿಗೆ ಹೋಗುತ್ತಿದ್ದುದು ಕಡಿಮೆ. ಸೊಕ್ಕಿ ಬೆಳೆದ ಗೂಳಿಗಳು ಗದ್ದೆಗಿಳಿಯುತ್ತಿದ್ದಂತೆ ಗುಟುರು ಹಾಕಿ…”

Read More

ಮರಾಠವಾಡಾದ ದಲಿತನ ಆತ್ಮಕಥನ ಕುರಿತು ಸುಧಾ ಆಡುಕಳ ಬರಹ

“ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.”
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ

Read More

ಸುಧಾ ಆಡುಕಳ ಕಥಾಸಂಕಲನಕ್ಕೆ ಡಾ. ಎಲ್.ಸಿ. ಸುಮಿತ್ರಾ ಮಾತುಗಳು

“‘ಹೊಳೆ’ ಕಥೆಯಲ್ಲಿ ಕಾಡುನಾಶದಿಂದ ಹೊಳೆ ಬತ್ತಿಹೋಗುವ ಪರಿಸರದ ಚಿಂತನೆಯಿದೆ. ‘ಸತ್ಯದ ಬದುಕು’ ವ್ಯಕ್ತಿ ಸ್ವಾತಂತ್ರ್ಯವನ್ನು ಕೌಟುಂಬಿಕ ಸಂಬಂಧಗಳು ಮೊಟಕು ಮಾಡುವ, ನಿಯಂತ್ರಿಸುವ ರೀತಿಯನ್ನು ಹೇಳುತ್ತಲೇ ಅಲಕಾ ಎಂಬ ಹುಡುಗಿ ಮನೆಯಲ್ಲೂ, ಕೆಲಸ ಮಾಡುವ ಜಾಗೆಯಲ್ಲೂ ಹೇಗೆ ಒಂದು ಪರಿಕರವಾಗಿ ಬಳಸಲ್ಪಡುತ್ತಾಳೆ… ಕೊನೆಗೆ ಹೇಗೆ ಅವಳು ಭಾವನಾತ್ಮಕ ಬಂಧಗಳಿಂದ ಹೊರಬರುವ ಬಗೆಯನ್ನು ಚಿತ್ರಿಸುತ್ತದೆ. ‘ಕಥೆಯನ್ನರಸುತ್ತಾ’ ಎಂಬ ಕಥೆ ಹೊಸಬಗೆಯ ನಿರೂಪಣೆಯನ್ನು ಹೊಂದಿದೆ.”
ಸುಧಾ ಆಡುಕಳ ಅವರ ಚೊಚ್ಚಲ ಕಥಾಸಂಕಲನ ‘ಒಂದು ಇಡಿಯ ಬಳಪʼದ ಕುರಿತು ಡಾ. ಎಲ್.ಸಿ. ಸುಮಿತ್ರಾ ಅಭಿಪ್ರಾಯ

Read More

ಜಿ. ಎಸ್ ಅವಧಾನಿಯವರ ಪುಸ್ತಕದ ಕುರಿತು ಸುಧಾ ಆಡುಕಳ ಬರೆದ ಲೇಖನ

“ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ