ಮುಳ್ಳಕ್ಕಿಯ ರೆಕ್ಕೆಪುಕ್ಕಗಳು: ಡಾ. ಚಂದ್ರಮತಿ ಸೋಂದಾ ಸರಣಿ
ಹಿಂದೆ ಕೂಲಿ ಕೆಲಸ ಮಾಡುವ ಜನರು ಬೇಸಿಗೆಯಲ್ಲಿ ಒಣಗಿಸಿಟ್ಟ ಹಲಸಿನ ಬೀಜಗಳನ್ನು ಮಳೆಗಾಲದಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಆಗ ಅಧಿಕ ಮಳೆ ಹೊಯ್ಯುತ್ತಿದ್ದುದರಿಂದ ಅವರಿಗೆ ಕೂಲಿಕೆಲಸ ಸಿಗುತ್ತಿರಲಿಲ್ಲ, ದವಸಧಾನ್ಯಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಒಂದುಹೊತ್ತು ಅನ್ನವನ್ನೋ ಗಂಜಿಯನ್ನೋ ಉಂಡರೆ ಇನ್ನೊಂದು ಹೊತ್ತಿಗೆ ಹಲಸಿನ ಬೇಳೆಯೇ ಆಹಾರವಾಗಿತ್ತು. ಹೀಗೆ ಹಲಸಿನ ಬೇಳೆ ಅವರನ್ನು ಸಲಹುತ್ತಿತ್ತು. ಇತ್ತೀಚೆಗೆ ಹಲಸಿನ ಬೇಳೆಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದೆ ಎನ್ನುವ ಸಂಗತಿ ಪ್ರಚಲಿತವಾಗಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯಲ್ಲಿ ಮೂರನೆಯ ಬರಹ