ಬೆನ್ನ ಮೇಲೆ ಇಮಾರತಿನ ಭಾರ; ಒಡಲೊಳಗೊಂದು ಪುಟ್ಟ ಝರಿ
“ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ.”
1998ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗೀಸ್ ಭಾಷೆಯ ಬರಹಗಾರ…