ಅಬ್ದುಲ್ ರಶೀದ್ ಕೃತಿಗೆ ಭಾರತಿ ಬಿ.ವಿ. ಬರೆದ ಮುನ್ನುಡಿ
“ರಶೀದ್ ಬರಹಗಳನ್ನು ಮೊದಲಲ್ಲಿ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು ‘ಅದು ಹೇಗೆ ಇವರ ಬದುಕಿನಲ್ಲಿ ನನಗೆ ಅಸಾಧ್ಯವಾದ ಏನೆಲ್ಲ ಆಗುತ್ತದಲ್ಲ’ ಎಂದು. ಅದು ಕೇವಲ ನನ್ನ ಪ್ರಶ್ನೆಯಲ್ಲದೇ ಬೆರಗು ಕೂಡಾ ಆಗಿತ್ತು! ಬದುಕನ್ನು ತುಂಬ ಕಠೋರವಾಗಿ… ಅಂದರೆ ಅಗತ್ಯಕ್ಕಿಂತ ಹೆಚ್ಚು ಕಠೋರವಾಗಿ ಬದುಕುವ ಅಗತ್ಯವಿಲ್ಲ ಮತ್ತು ಸಣ್ಣದೊಂದು ಕಾರುಣ್ಯದ ಹನಿ ಜಗತ್ತಿಗೆ ಚುಮುಕಿಸಲು ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ ಎಂದು ಅರ್ಥವಾದ ನಂತರ, ಅವರ ಕಷ್ಟಸುಖ ಕೇಳುತ್ತಲೇ ಎದೆಯಲ್ಲಿ ಕಾರುಣ್ಯ ಮೂಡಿ, ತುಸು ‘ಹೆಚ್ಚು ಮನುಷ್ಯಳಾಗುತ್ತಾ’ ಹೋದೆ ಅನ್ನಬಹುದು”
ಕತೆಗಾರ ಅಬ್ದುಲ್ ರಶೀದ್ ಅವರ ‘ಮೈಸೂರು ಪೋಸ್ಟ್’ ಕೃತಿಗೆ ಭಾರತಿ ಬಿ.ವಿ. ಬರೆದ ಮುನ್ನುಡಿ
