Advertisement

Tag: ಕೆಂಡಸಂಪಿಗೆ

ಆ ಹುಡುಗಿ ಹಾಗೆಯೇ ಮರಳಿ ಹೋಗಿದ್ದಳು

ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ.
ಇಸ್ಮಾಯಿಲ್‌ ತಳಕಲ್‌ ಬರಹ

Read More

ಶಿಕ್ಷಕಿ, ಸುಧಾರಕಿ ಸಹೋದರಿ ನಿವೇದಿತಾ…

ನಿವೇದಿತಾ ಮನೆ ಮನೆಯ ಬಾಗಿಲು ತಟ್ಟಿ ಮಹಿಳೆಯರನ್ನು ಶಿಕ್ಷಣ ಪಡೆಯುವಂತೆ ಪುಸಲಾಯಿಸಿದವರು. ಸಮಾಜದ ಮಹತ್ವಪೂರ್ಣ ಭಾಗವಾಗಿರುವ ಮಹಿಳೆಯರು ಕೂಡ ವಿದ್ಯಾಭ್ಯಾಸ ಪಡೆದಾಗ ಮಾತ್ರ ಇಡೀ ಸಮಾಜ ಮುನ್ನಡೆಯಲು ಸಾಧ್ಯ ಎಂದು ನಂಬಿದ್ದವರು. ಅಂದಿನ ಸಾಂಪ್ರದಾಯಿಕ ಸಮಾಜದ ಪ್ರತಿರೋಧ ಸಹಜವಾಗಿಯೇ ಇತ್ತು. ಸ್ನೇಹಿತರಾಗಿದ್ದ ಸುಪ್ರಸಿದ್ಧ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಹಾಗು ಪತ್ನಿ ಅಬಲ ಬೋಸ್ ಜೊತೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು, ಅವರ ಸಂಶೋಧನೆಗಳಿಗೆ ಸ್ಫೂರ್ತಿ ನೀಡುತ್ತಿದ್ದರು. ಯೋಗೀಂದ್ರ ಮರವಂತೆ ಬರಹ

Read More

ಡಾ. ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಡಾ. ಸುಭಾಷ್‌ ಪಟ್ಟಾಜೆ ಬರೆದ ಕತೆ “ಗತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!

ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”

Read More

ಟಿ20 ವಿಶ್ವ ಕಪ್ 2022 ಮತ್ತು ಅದರ ಚರಿತ್ರೆ

ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಪ್ರೇಕ್ಷಕರು ಇದನ್ನು ಎಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದರೆ, ನಮ್ಮ ಆಟಗಾರರು ಗೆದ್ದರೆ, ಅವರನ್ನು ಅಟ್ಟಕ್ಕೆ ಏರಿಸುತ್ತೇವೆ; ಹಾಗೆಯೇ ಸೋತರೆ ಅವರನ್ನು ಪಾತಾಳಕ್ಕೆ ಇಳಿಸಿ ಬಿಡುತ್ತೇವೆ! ಇದೊಂದು ದೌರ್ಭಾಗ್ಯವೇ ಸರಿ. ನಾವು ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಬೇಕು. ಯಾರಿಗೂ ಸೋಲುವುದಕ್ಕೆ ಇಷ್ಟವಿರುವುದಿಲ್ಲ. ಪಂದ್ಯದಲ್ಲಿ ಯಾರಾದರೂ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟಿ20 ವಿಶ್ವ ಕಪ್ ಕುರಿತ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ