Advertisement

Tag: ಕೆಂಡಸಂಪಿಗೆ

ಸಾಮರಸ್ಯವೇ ಇಲ್ಲಿ ಸಲ್ಲುವುದು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

Read More

ಪ್ರಸಿದ್ಧ ಫೋಟೋದ ಹಿಂದಿನ ರಹಸ್ಯ: ಶೇಷಾದ್ರಿ ಗಂಜೂರು ಸರಣಿ

ಆ ಫೋಟೊ ನೋಡಿದ ತಕ್ಷಣವೇ ಅವಳಿಗೆ ಅದು ಕಂಡಿತು. ಆ ಫೋಟೋದಲ್ಲಿನ ಸ್ಪಷ್ಟತೆ, ಅದರಲ್ಲೂ ಫ್ರಾಂಕ್ಲಿನ್‌ಳಂತಹ ಅನುಭವ-ಪಾಂಡಿತ್ಯ ಎರಡೂ ಇದ್ದ ಮೇಧಾವಿಗೆ, ಒಂದರೆ ಕ್ಷಣ ಅವಳ ಉಸಿರುಗಟ್ಟಿಸಿರಬಹುದು. ಆ ಫೋಟೋ ಮುಖಾಂತರ, ಡಿಎನ್‌ಎ ಗಟ್ಟಿದನಿಯಲ್ಲಿ, ಖಡಾಖಂಡಿತವಾಗಿ ಸಾರುತ್ತಿತ್ತು: “ನಾನೊಂದು ಸುರುಳಿ!”. ಪೈಥಾಗೊರಾಸನಿಂದ ಹಿಡಿದು, ಕೊನೆಗೂ ಡಾರ್ವಿನ್ನನವರೆಗೆ ಸಾವಿರಾರು ವರ್ಷಗಳ ಸಿದ್ಧಾಂತಗಳ, ಮೆಂಡೆಲ್-ಮಾರ್ಗನ್ ಅಂತಹವರ ಪ್ರಯೋಗಗಳ ಗುರಿಯ ಸ್ವರೂಪದ ದರ್ಶನವಾಗಿತ್ತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”ಯಲ್ಲಿ ಹೊಸ ಬರಹ

Read More

ಕರುಣಾಳು ಬಾ ಬೆಳಕೆ-ನವೋದಯ ಕನ್ನಡ ಕಾವ್ಯದಲ್ಲಿ ಪ್ರಾರ್ಥನೆ: ಸುಕನ್ಯಾ ಕನಾರಳ್ಳಿ ಅಂಕಣ

ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ

Read More

‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್.‌ ಬರಹ

ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ.
ಡಿಸೆಂಬರ್‌ ಚಳಿಯ ಕುರಿತು ಮಹಾಲಕ್ಷ್ಮೀ ಕೆ.ಎನ್.‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ