ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!: ಸೂರ್ಯಕೀರ್ತಿ ಪ್ರಬಂಧ

‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು.
ಇತ್ತೀಚೆಗೆ ಬಿಡುಗಡೆಯಾದ ಸೂರ್ಯಕೀರ್ತಿ ಅವರ ಪ್ರಬಂಧಗಳ ಸಂಕಲನ “ಮಳೆ”ಯ ಒಂದು ಪ್ರಬಂಧ ನಿಮ್ಮ ಓದಿಗೆ

Read More