Advertisement

Tag: ಬಾಲ್ಯ

ಮಕ್ಕಳ ಶಿಕ್ಷಣದಲ್ಲಿ ಕುಟುಂಬದ ಜವಾಬ್ದಾರಿ: ಅನುಸೂಯ ಯತೀಶ್ ಸರಣಿ

ನೋಡಿ ಮೇಡಮ್ ನೀವು ಮೊದಲು ಅವನಿಗೆ ಟಿವಿ ನೋಡೋದು ಬಿಡಿಸಿ. ಶಾಲೆಯಿಂದ ಬಂದಾಗ ಟಿವಿ ಮುಂದೆ ಕೂತ್ರೆ ಅರ್ಧ ರಾತ್ರಿವರೆಗೂ ಒಂದಾದ ಮೇಲೆ ಒಂದರಂತೆ ಧಾರವಾಹಿ ನೋಡ್ತಾನೆ. ಮಲಗೋದು ಸರಿ ರಾತ್ರಿ ಆಗಿರುತ್ತೆ. ಬೆಳಗ್ಗೆ ಏಳಲು ತಲೆಸುತ್ತು ಅಂತಾನೆ. ನಿದ್ದೆ ಬರುತ್ತೆ ಅಂತ ಹತ್ತು ಗಂಟೆಯಾದರೂ ಮಲಕೊಂಡವ್ನೆ. ಅದಕ್ಕೆ ನಿಮ್ಮ ಮೇಲೆ ಕೋಪ ಬಂದಿದೆ. ನಿಮ್ಮ ಮೇಲೆ ಕೂಗಾಡಿದ್ದು ಇನ್ಯಾಕೆ ಅಂದುಕೊಂಡ್ರಿ ಅಂತ ಆಕೆಯ ಕಿರುಚಾಟ, ಹಾರಾಟದ ಹಿಂದಿನ ಸತ್ಯ ಬಾಯ್ಬಿಟ್ಟಳು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಹಬ್ಬದ ಆಚರಣೆಗಳು ಹಾಗೂ ಬೆಣ್ಣೆ ಕದ್ದು ತಿಂದದ್ದು…: ಬಸವನಗೌಡ ಹೆಬ್ಬಳಗೆರೆ ಸರಣಿ

ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಅಡುಗೆ ಕೋಣೆಗೆ ಊಟ ಮಾಡೋಕೆ ಒಬ್ಬನೇ ಹೋದಾಗ ತುಪ್ಪವನ್ನು ಸುರಿದುಕೊಂಡು ತಿನ್ನುತ್ತಿದ್ದೆ. ಕೆಲವೊಮ್ಮೆ ನಮ್ಮತ್ತೆ ಬಂದಾಗ ತಕ್ಷಣ ಹಾಕಿಕೊಂಡ ತುಪ್ಪದ ಮೇಲೆ ಅನ್ನವನ್ನು ಹಾಕಿಕೊಂಡು ತುಪ್ಪವನ್ನು ಹಾಕಿಕೊಂಡಿಲ್ಲವೆಂಬಂತೆ ನಟಿಸುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಬಡತನದ ಬದುಕು ಮತ್ತು ಶಾಲೆಯ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿ

ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ

Read More

ಖರ್ಚಿಲ್ಲದ ಆಟಿಕೆಗಳು, ಸರ್ಕಸ್ ಕಂಪೆನಿ… ಆ ನೆನಪುಗಳು..: ಬಸವನಗೌಡ ಹೆಬ್ಬಳಗೆರೆ ಸರಣಿ

ಏಳನೇ ತರಗತಿಗೆ ಹೋಗುವ ವೇಳೆಗೆ ನಾನು ಓದುವುದರಲ್ಲಿ ತರಗತಿಗೇ ಮೊದಲಿಗನಾಗಿದ್ದೆ. ಅದರಲ್ಲೂ 7 ನೇ ತರಗತಿಯಲ್ಲಿ ಬುಡೇನ್ ಸಾಬ್ ಮೇಷ್ಟ್ರು ಗಣಿತ ತೆಗೆದುಕೊಂಡ ಮೇಲೆ ನನಗೆ ಗಣಿತ ತುಂಬಾ ಇಷ್ಟದ ವಿಷಯವಾಯಿತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ