Advertisement

Tag: ವಿಕಾಸ್ ನೇಗಿಲೋಣಿ

ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ

ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್‌ ನೇಗಿಲೋಣಿ ಬರೆದ ಮುನ್ನುಡಿ

Read More

ಸತೀಶ್‌ ಶೆಟ್ಟಿ ವಕ್ವಾಡಿ ಕಥಾಸಂಕಲನಕ್ಕೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ

“ಕಥನಕ್ಕಾಗಿ ಇಲ್ಲಿ ಪಾತ್ರಗಳು ದುಡಿಯುವುದಿಲ್ಲ, ಪಾತ್ರಗಳೇ ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಒಂದು ಕತೆಯಾಗಿ ಹೊರ ಹೊಮ್ಮುತ್ತವೆ. ಕೊಜೆ ಯಾನೆ ಹೇಲು ಗೋವಿಂದಪ್ಪ- ಎಂಬ ಪಾತ್ರವನ್ನು ಆ ಪಾತ್ರದ ಹೆಸರಿನ ಹಿನ್ನೆಲೆಯಲ್ಲಿ ಕಟ್ಟುವ ಕ್ರಮ, ಅದೇ ಕತೆಯಲ್ಲಿ ಓಡಿ ಹೋದ ಬಸವ ವಾಪಾಸ್ ಪ್ರತ್ಯಕ್ಷವಾದಾಗ ಅವನನ್ನು ತೋರಿಸುವ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಾಗೇ ಸುಮಂತ್- ಪ್ರಾಣೇಶ್ ಮಧ್ಯೆ ಕ್ರಿಕೆಟ್ ವಿಚಾರಕ್ಕೆ ಶುರುವಾದ ಜಗಳ ಪಡೆದುಕೊಳ್ಳುವ ತಿರುವು, ಪಾತ್ರ ಕಟ್ಟುವಿಕೆಗೆ ಬಹಳ ಒಳ್ಳೆಯ ಉದಾಹರಣೆ.”
ಸತೀಶ್‌ ಶೆಟ್ಟಿ ವಕ್ವಾಡಿ ಬರೆದ ‘ಅಜ್ಜ ನೆಟ್ಟ ಹಲಸಿನ ಮರ’ ಕಥಾಸಂಕಲನಕ್ಕೆ ವಿಕಾಸ್‌ ನೇಗಿಲೋಣಿ ಬರೆದ ಮುನ್ನುಡಿ

Read More

ಕವಿತೆಯ ಅರ್ಥವೂ ನಮ್ಮ ಕರ್ಮವೂ: ನೇಗಿಲೋಣಿ ವ್ಯಾಖ್ಯಾನ

“ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ.’

Read More

ಭಾನುವಾರದ ವಿಶೇಷ : ಪ್ರೀತಿ ಬರೀ ಮಣ್ಣು ಎಂದ ವಿಸ್ಲಾವಾ

ನಮ್ಮೂರ ಹುಡುಗಿಯೊಬ್ಬಳು ಬಡತನದಲ್ಲಿ ಬೆಳೆದು, ಸಿನಿಮಾ ಕಂಡರೆ ಬೆರಗಾಗುತ್ತಾ, ಬರಹ ಕಲಿಯಬೇಕೆಂದು ಹಂಬಲಿಸುತ್ತಾ ಅಕ್ಷರ ಕಲಿತು, ಕೆಲಸ ಹಿಡಿದು, ಕವಿತೆ ಬರೆದು ದೊಡ್ಡ ಸಾಧನೆಯ ಜೊತೆ ಪ್ರತ್ಯಕ್ಷಳಾದಂತೇ ವಿಸ್ಲಾವಾ ಕತೆಯೂ ಇದೆ.

Read More

ಲಿಯು ಶಿಯಾಬೋ: ಕೆಂಪು ಚೀನಾದ ಅಶಾಂತ ಸಂತ

ಲಿಯು ಚಿಂತನೆಗಳು, ಮಾತುಗಳು ಎಂಥವರನ್ನೂ ಮಂತ್ರಮುಗ್ಧವಾಗಿಸುತ್ತವೆ. ‘ಅಕ್ಷರ, ಪದ, ವಾಕ್ಯಗಳನ್ನು ಅಪರಾಧವೆಂದು ಭಾವಿಸುವುದನ್ನು ಮೊದಲು ನಿಲ್ಲಿಸಬೇಕು’ ಎಂದು ವಿನಂತಿಸಿಕೊಂಡಿದ್ದವನು ಲಿಯು.

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ