ಹಾರುವ ತಟ್ಟೆ…

ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? `ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು.
ಜೋಗಿ ಸಂಪಾದಿಸಿದ “ವೈಯೆನ್ಕೆ UNLIMITED ವಾಚಿಕೆ” ಕೃತಿಯ ಆಯ್ದ ಬರಹ ನಿಮ್ಮ ಓದಿಗೆ

Read More