Advertisement

Tag: ಸರಣಿ

ಬಸ್ಸಪ್ಪ ಮೇಷ್ಟ್ರ ಸೈಕಲ್ ಪಂಕ್ಚರ್ ಪ್ರಸಂಗ!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ

ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ

ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ

Read More

ಕಾಡುವ ಕಷ್ಟದ ಆ ದಿನಗಳು: ಮಾರುತಿ ಗೋಪಿಕುಂಟೆ ಸರಣಿ

ಅಂದು ಪೋಲೀಸರು ಹೋದ ಮೇಲೂ ಅಮ್ಮ ಅಳುತ್ತಲೆ ಇದ್ದಳು. ಬಡವರ ಪಾಲಿಗೆ ಕಣ್ಣೀರೇ ಅಲ್ಲವೆ ಸಾಂತ್ವನದ ಸೆಲೆಗಳು ಆಗಾಗಿ ಧಾರಾಕಾರವಾಗಿ ಹರಿಯುತ್ತಲೆ ಇತ್ತು. ಊರಿನಲ್ಲಿ ಯಾರ್ಯಾರೊ ಸಹಾಯವನ್ನು ಮಾಡಿದರು. ಅಮ್ಮನ ಒಳ್ಳೆಯ ಗುಣವೇ ಅದಕ್ಕೆ ಕಾರಣವಾಗಿತ್ತು. ಇದೆಲ್ಲ ನೋಡುತ್ತಿದ್ದಾಗ ದೇವರ ಮೇಲೆ ಕೋಪವು ಬರುತ್ತಿತ್ತು. ನನ್ನ ಓರಗೆಯವರೆಲ್ಲ ನಿಮ್ಮ ಮನೆಯ ಸಾಮಾನುಗಳನ್ನು ಪೋಲಿಸ್ನೋರು ತಗೊಂಡ್ಹೋದ್ರು ಅನ್ನುತ್ತಿದ್ದರು. ಆಗ ಇಡೀ ವ್ಯವಸ್ಥೆಯ ಮೇಲೆ ರೋಷವೇನೊ ಬರುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ: ಸುಮಾವೀಣಾ ಸರಣಿ

ಸಿಸ್ಟರ್ ಲಾರೆನ್ಸಿಯ ಅವರಿಗೆ ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ನಾಲ್ಕನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ