ಹಿಮ್ಮೇಳದಲ್ಲಿ ಮದ್ದಳೆ, ಖಂಜೀರ, ಪುಂಗಿ ಇತ್ಯಾದಿ
ಖಂಜೀರ ಪೂರ್ಣಪ್ರಮಾಣದಲ್ಲಿ ಯಕ್ಷಗಾನ ಹಿಮ್ಮೇಳದ ಭಾಗವಾಗಿತ್ತು. ಭಾಗವತರ ಹಿಂದೆ ಒತ್ತು ಮದ್ದಳೆಗಾರರು ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಹೊಸ ವಾದ್ಯಗಳು ಹಿಮ್ಮೇಳವನ್ನು ಸೇರಿಕೊಂಡ ಬಗ್ಗೆ ‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆದಿದ್ದಾರೆ.
Read More