Advertisement

Tag: Chandramathi Sonda

ಮದುವೆ ಎನ್ನುವ ಊರ ಸಂಭ್ರಮ: ಚಂದ್ರಮತಿ ಸೋಂದಾ ಸರಣಿ

ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿ

ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ನಮ್ಮನೆಯ ಅಷ್ಟೈಶ್ವರ್ಯ: ಚಂದ್ರಮತಿ ಸೋಂದಾ ಸರಣಿ

ಹೊಸ ಬಡಾವಣೆಗೆ ವಾಸಕ್ಕೆ ಬಂದವರಿಗೆ ಯಾವ್ಯಾವ ಬಗೆಯಲ್ಲಿ ಇಲಿ ಕಾಟಕೊಡುತ್ತದೆ ಅನ್ನೋ ವೈವಿಧ್ಯಗಳ ಪರಿಚಯ ಮಾಮೂಲು. ನಮ್ಮೂರುಗಳಲ್ಲಾದರೆ ಒಂದು ಬೆಕ್ಕು ಸಾಕಿದರೆ ಆಯಿತು. ಇಲಿಕಾಟ ತಪ್ಪಿತು ಅಂತನೇ ಅರ್ಥ. ಆದರೆ ನಗರದಲ್ಲಿ ಬೆಕ್ಕು ಸಾಕೋದು ಅಂದರೆ ಸಂನ್ಯಾಸಿ ಸಂಸಾರದಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೆರಡನೆಯ ಕಂತು

Read More

ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ

ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ