ಹುಡುಗಾಟಗ್ಳು: ಸುಮಾ ಸತೀಶ್ ಸರಣಿ
ಔಟೂಂದ್ರೆ ಅಂಗೇ ಕಣ್ ಬುಟ್ಟು ನೋಡಿ, ದಿಟ್ವಾಗ್ಲೂ ಔಟೇನಾ ಎಂಗೆ ಅಂಬ್ತ ತಿಳ್ಕಂಡೇ ಕಾಲು ಪಕ್ಕುಕ್ಕೆ ಮಡಗ್ಬೇಕು. ಎದುರ್ನವೇನಾರಾ ಸುಮ್ ಸುಮ್ಕೆ ಯೋಳಿ ಕಿಸೀತಾವಾ ಅಂಬ್ತ ಮೊದ್ಲು ಅವ್ರ ಮಕ ನೋಡೀವು. ಆಮ್ಯಾಕೆ ಕಾಲು ಗೆರೆ ಮ್ಯಾಗೆ ಮಡಗೈತಾ ಅಂಬ್ತ ಕಂಡ್ಕಂಡು ಆಚೀಕ್ ಬರಾದು. ಅದೆಂತದು ಅಮ್ಮಾಟೇ ಅಂದ್ರೆ ಅದು ಆಮ್ ಐ ರೈಟ್ ಅಂಬ್ತ ಇಂಗ್ಲಿಷ್ ನಾಗೆ ಕ್ಯೋಳೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಅವರ ಬಾಲ್ಯದ ಆಟಗಳನ್ನು ಕುರಿತು ಬರೆದಿದ್ದಾರೆ