ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ
ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶ ಮಾಡುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ.
ದಾದಾಪೀರ್ ಜೈಮನ್ ಬರೆಯುವ ಅಂಕಣ