ಕೂರಾಪುರಾಣ ೭: ಏನ್ರೀ ಸಂಜಮ್ಮಾ ನಿಮ್ದು ಯಾವ ಜಾತಿಯ ನಾಯಿ?
ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಏಳನೆಯ ಕಂತು