ಹಣದುಬ್ಬರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು: ವಿನತೆ ಶರ್ಮ ಅಂಕಣ
ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”