Advertisement

Tag: Emagazine

ಕಲಿತ ಬುದ್ಧಿಗಳೇ ನಮ್ಮ ನೆರಳು: ಎಸ್ ನಾಗಶ್ರೀ ಅಜಯ್ ಅಂಕಣ

ಎಷ್ಟೋ ಜನ ಸರಳತೆ, ಸಹೃದಯತೆ, ಸಹನೆ, ಕರುಣೆಯನ್ನು ನಂಬದೆ ಡಂಭಾಚಾರ, ನಾಟಕ, ಕೃತಕತೆ ಎಂಬ ಹಣೆಪಟ್ಟಿ ಕಟ್ಟಿ ಸಂಶಯದಿಂದಲೇ ಎದುರುಗೊಳ್ಳುತ್ತಾರೆ. ಹಣದೊಂದಿಗೆ ಮದ, ಅಧಿಕಾರದೊಂದಿಗೆ ದರ್ಪ, ಶ್ರೀಮಂತಿಕೆಯೊಂದಿಗೆ ಖಾಯಿಲೆ, ಬಡತನದೊಂದಿಗೆ ನೆಮ್ಮದಿ ಇದ್ದಿರಲೇಬೇಕೆಂದು ಭಾವಿಸಿರುತ್ತಾರೆ. ಅತ್ಯಂತ ರಂಜನೀಯವಾಗಿ ಅದನ್ನು ಬಣ್ಣಿಸಿಯೂ ತೋರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಭಿನ್ನ. ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನ. ಒಂದೇ ಅಚ್ಚಿನಲ್ಲಿ ಅಳೆದು, ಸುರಿದು ತಯಾರಾದ ಬದುಕಲ್ಲ ಎಲ್ಲರದ್ದು.
ಎಸ್.‌ ನಾಗಶ್ರೀ ಅಜಯ್‌ ಬರೆಯುವ ‘ಲೋಕ ಏಕಾಂತ’ ಅಂಕಣ

Read More

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

Read More

‘ಇಂಡೀಜಿನಸ್ ವಾಯ್ಸ್’ – ಸಮತೆಯತ್ತ ಆಸ್ಟ್ರೇಲಿಯಾ

ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಾಂಸ್ಕೃತಿಕ ಲೋಕಕ್ಕೆ ವೇದಿಕೆಯಾಗಿದ್ದ ನಗರ…

ಪವರ್ ಹೌಸ್ ಹಿಂಭಾಗವೇ ಶಿವನ ಹಳ್ಳಿ. ಆಗ ಅರವತ್ತರ ದಶಕದಲ್ಲಿ ಒಂದು ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಇವೆರೆಡರ ಮಧ್ಯೆ ಹಾದು ಹೋಗುತ್ತಿತ್ತು. ಪೂರ್ತಿ ಏರಿಯಾ ರೆವೆನ್ಯೂ ನಿವೇಶನಗಳು. ಅರವತ್ತು ನೂರರ ಸೈಟುಗಳು ಐನೂರು ಆರು ನೂರು ರೂಪಾಯಿ. ಸುಮಾರು ಜನ ನಿವೇಶನ ಕೊಂಡವರು ರೆವೆನ್ಯೂ ಆಸ್ತಿ, ಸೈಟು ರೋಡ್ ಆಗುತ್ತೆ ಅಂತ ಹೆದರಿ ಮಾರಿದರು. ಎಷ್ಟೋ ಜನರಿಗೆ ಈ ರೀತಿ ಆಗಿ ಆಗಿ ಹೆದರಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಗೋಡೆ ಮೇಲಿನ ಮಗಳ ಬರಹ ತರಲಾಗಲಿಲ್ಲ….

ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ…
ಕೈಬರಹದ ಕುರಿತು ಡಾ. ಲಕ್ಷ್ಮಣ ವಿ. ಎ. ಬರಹ ನಿಮ್ಮ ಓದಿಗೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ