ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More