ಅಂತ್ಯವಿಲ್ಲದ ವಾಕ್ಯಗಳಲ್ಲಿನ ಕಾವ್ಯ…: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ವಿಷಯಾಧಾರಿತ ಆಯ್ಕೆಗಳ ಹೊರತಾಗಿಯೂ, ಅವರ ಕವಿತೆಗಳ ಭಾಷೆ ಸೊಗಸಾದ ಮತ್ತು ಬಹುತೇಕ ಹರ್ಷದಿಂದ ಕೂಡಿರುತ್ತದೆ. ಅವರ ಕವಿತೆಗಳು ಸಾಮಾನ್ಯವಾಗಿ ವಿನೋದಸ್ವಭಾವದಿಂದ ಕೂಡಿರುತ್ತೆ ಹಾಗೂ ಆಕರ್ಷಕವಾದ ವಿರೋಧಾಭಾಸದ ರೂಪಕಗಳ ಬಳಕೆಯನ್ನು ಪ್ರದರ್ಶಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಡೆನ್ಮಾರ್ಕ್ ದೇಶದ ಕವಿ ಹೆನ್ರಿಕ್ ನೊರ್ಡ್‌ಬ್ರಾಂಡ್ಟ್-ರ (Henrik Nordbrandt, 1945 – 2023) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ