ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಆರಂಭ

ಪ್ರಯಾಣದ ಕನಸಿನಿಂದ ಥಟ್ಟನೆ ವಾಸ್ತವಕ್ಕಿಳಿದ ನೀಲಿ ನೀರಿನಾಳದಲ್ಲಿ ಹೊಳೆಯುತ್ತಿರುವ ನಾಣ್ಯಗಳನ್ನು ನೋಡುತ್ತಾ ನಡುಹೊಳೆಯಲ್ಲಿ ನಿಂತುಬಿಟ್ಟಳು. ಅವಳಿಗೀಗ ಇರುವುದು ಎರಡೇ ಅವಕಾಶಗಳು. ಒಂದೋ ದುಡ್ಡನ್ನು ಹೊಳೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗುವುದು, ಇಲ್ಲವೆಂದರೆ ಅಂಗಿ ಒದ್ದೆಯಾಗುವ ಪರಿವೆಯಿಲ್ಲದೇ ಹೊಳೆಯೊಳಗೆ ಒಮ್ಮೆ ಮುಳುಗಿ ದುಡ್ಡನ್ನು ಹೆಕ್ಕಿಕೊಳ್ಳುವುದು. ಒದ್ದೆಯಾದ ಅಂಗಿಯನ್ನು ಬದಲಿಸಿ ಬರಲು ಮನೆಗೆ ಹೋಗುವಷ್ಟು ಸಮಯವಿಲ್ಲ.
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More