Advertisement

Tag: Indian Short Story

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅಲ್ಲಿದ್ದ ಟೀಪಾಯಿಯತ್ತ ನೋಡಿದರೆ ಚಹಾದ ಲೋಟ ಇಲ್ಲ. ಹೆಂಡತಿಯಲ್ಲಿ ಕೇಳೋಣ ಎಂದುಕೊಂಡ ಅವರು ಮನೆಯೊಳಗೆ ಹೋದರೆ ಅಲ್ಲಿ ಅವರ ಹೆಂಡತಿ ಇನ್ನೂ ಕೂಡಾ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ಚಹಾದ ಲೋಟ ಇದೆ. ಲೋಟ ಎತ್ತಿಕೊಳ್ಳಹೋದಾಗ ಕೃಷ್ಣಾಚಾರ್ಯರ ಕೈತಗುಲಿ ಲೋಟ ಬಿದ್ದು, ಒಂದು ಲೋಟ ಚಹಾ ಎಲ್ಲ ಚೆಲ್ಲಿಹೋಯಿತು. ಅದನ್ನು ನೋಡಿದ ಅವರ ಹೆಂಡತಿ “ಸರಿ ಕಂದಾ, ನಾನೇ ಮತ್ತೆ ಕಾಲ್ ಮಾಡುತ್ತೇನೆ” ಎಂದು ಹೇಳಿ, ಕಾಲ್ ಕಟ್ ಮಾಡಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಒಂದು ಲೋಟ ಚಹಾ”

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ” ‌

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ