ಭಾಷೆಯೊಳಗೆ ಇನ್ನೊಂದು ಭಾಷೆ: ಸುಮಾವೀಣಾ ಸರಣಿ
ದೋಸೆ ಚಟ್ನಿಯ ಘಮ ನಮ್ಮ ಮೂಗನ್ನು ದಾಟಿ ಭರ್ರನೆ ದೇಹ ಪ್ರವೇಶಿಸುತ್ತಿತ್ತು. ಅದೇ ಭರದಲ್ಲಿ ತಿಂದಿದ್ದರೆ ಚೆನ್ನಾಗಿತ್ತು. ಸುಮ್ಮನಿರಲಾರದೆ “ಇದು ಏನು ಚಟ್ನಿ” ಎಂದೆ. ಹೊಟೆಲ್ ಮಾಣಿಗೆ ಕನ್ನಡ ಅರ್ಥವಾಯಿತು ಆದರೆ ಉತ್ತರವನ್ನು ತೆಲುಗಿನಲ್ಲಿಯೇ “ಇದಿ ಪಲ್ಲಿ ಚಟ್ನಿ” ಎಂದ. ಕಸಿವಿಸಿ ಆಯಿತು “ಹೇಗ್ ಮಾಡ್ತೀರಿ?” ಅಂದೆ ಅದಕ್ಕವನು “ಪಲ್ಲಿಲನು ಧಂಚಿ, ವೆಯಿಂಚಿ, ಪುಡಿಛೇಸಿ…” ಎನ್ನುತ್ತಿದ್ದಂತೆ ವಾಕರಿಕೆ ಬರಲು ಶುರುವಾಯಿತು. ಕನ್ನಡದಲ್ಲಿ ‘ಪಲ್ಲಿ’ ಅಂದರೆ ‘ಹಲ್ಲಿ’ ಅಲ್ಲವೆ. ಆದರೂ ಬಿಡಲಿಲ್ಲ; ಗೂಗಲಮ್ಮನ ಸಹಾಯ ಪಡೆದು ನೋಡಿದರೆ ತೆಲುಗಿನಲ್ಲಿ ‘ಪಲ್ಲಿ’ ಅಂದರೆ ಕನ್ನಡದಲ್ಲಿ ‘ನೆಲಗಡಲೆ’ ಅಂತಿತ್ತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ತೆರಡನೆಯ ಬರಹ ನಿಮ್ಮ ಓದಿಗೆ
