Advertisement

Tag: Kannada Poetry

ಆಕರ್ಷ ರಮೇಶ್ ಕಮಲ ಪುಸ್ತಕಕ್ಕೆ ಕೇಶವ ಮಳಗಿ ಮುನ್ನುಡಿ

“ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ”

Read More

ಆರ್.ದಿಲೀಪ್ ಕುಮಾರ್ ಬರೆದ ಈ ದಿನದ ಕವಿತೆ

“ಮಾತು ಪಾತಾಳ ಲೋಕದ ಬಿಲಕ್ಕೆ ಹಾದಿಮಾಡಿ
ಗುಡಿಗೋಪುರದ ಶಿಖರಗಳನು ತಳದಲ್ಲಿ ಉಳಿಸಿ
ಎಳೆಯಲಾದರೆ ಚಿಲುಮೆ ಮೇಲೆ
ಅದನರಿಯಲಾರದೆ ಕುಳಿತ ತವಕದಲಿ
ಕಣ್ಣು ಬಿಡದೆ ಬಾಯ ದಾರಿಯಲಿ ಅರಸುವಂತೆ ಮಾಡಿದವನು”- ಆರ್ . ದಿಲೀಪ್ ಕುಮಾರ್ ಬರೆದ ಈ ದಿನದ ಕವಿತೆ

Read More

ಪದಗಳಲಿ ಅವಿತ ಕವಿತೆಗಳ ವ್ಯಾಮೋಹದ ಕುರಿತು:ಆಶಾ ಜಗದೀಶ್ ಅಂಕಣ

“ಇಂದು ನಮ್ಮ ಮುಂದಿರುವ ಕಾವ್ಯದ ರೂಪ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟು ನಮ್ಮ ಮುಂದೆ ನಿಂತಿದೆ. ಹಳೆಯದನ್ನು ತಿರಸ್ಕರಿಸಿ, ಮುರಿದು ಕಟ್ಟುವ ಪ್ರಕ್ರಿಯೆಗೆ ಹೆಚ್ಚಾನು ಹೆಚ್ಚು ಒಳಪಟ್ಟಿರುವುದು ಕಾವ್ಯ ಪ್ರಕಾರವೇ. ಮಾತ್ರೆಗಳಂತೆ ಲೆಕ್ಕಹಾಕಿ ಬರೆಯುತ್ತಿದ್ದಲ್ಲಿಂದ…”

Read More

ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯದ ತಾಜಾ ಕಸುವು

“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.”

Read More

ಹಲವು ಬಣ್ಣದ ಹಗ್ಗ: ಸುರೇಶ ನಾಗಲಮಡಿಕೆ ಪುಸ್ತಕದ ಕೆಲವು ಪುಟಗಳು

“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ