Advertisement

Tag: Kodagu

ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ

ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಜಂಬೋಸರ್ಕಸ್ ಮತ್ತು ವಸಂತ ಚಂದಿರ: ಸುಮಾವೀಣಾ ಸರಣಿ

ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ ಆ ದಿನ ಆಯ ತಪ್ಪಿ ಉದ್ದನೆಯ ಕತ್ತಿ ಹೊಟ್ಟೆಯನ್ನು ತೂರಿ ಬೆನ್ನಿಂದ ಆಚೆ ಬರುತ್ತಿರುವಾಗಲೂ ಇದೂ ಒಂದು ಕಸರತ್ತು ಎಂದು ನೋಡಿದ ಪ್ರೇಕ್ಷಕರು ಇದ್ದರು. ಮರುದಿನ ಶಕ್ತಿ ಪೇಪರಿನಲ್ಲಿ ಆದ ದುರ್ಘಟನೆ ಬಗ್ಗೆ ಸುದ್ದಿ ಓದಿ ಎಷ್ಟೋ ಜನರು ಬೇಸರಿಸಿದ್ದಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಪುಷ್ಪನಗರಿ ಮಡಿಕೇರಿ: ಸುಮಾವೀಣಾ ಸರಣಿ

ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಹಾವುಗಳು ಮತ್ತು ಪ್ರ(ಕ್ಷುಬ್ಧ)ಶಾಂತಿ ನಿಲಯ: ಸುಮಾವೀಣಾ ಸರಣಿ

ಕಡೆಗೆ ನಿದ್ರೆಮಾಡಲು ಯಾರು ಚಡಪಡಿಸುತ್ತಾರೆ.. ಪ್ರತಿದಿನ ಬೆಡ್ ತೆಗೆಯಲು ಮೊದಲು ಯಾರು ಹೋಗುತ್ತಾರೆ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಯಾವಾಗಲೂ ನಿದ್ರೆ ಮಾಡಲು ಕಾತರಿಸುವವರನ್ನು ಇನ್ನಷ್ಟು ಸತಾಯಿಸಬೇಕು ಅನ್ನುವುದು ಅವರ ಆಸೆಯಾಗಿತ್ತು. ಅಷ್ಟರಲ್ಲಿ ನಿದ್ರಾದೇವಿ ಎಲ್ಲರ ಮೇಲೆ ಬಂದು ನಿಧಾನವಾಗಿ ಒಂದೊಂದು ಸುತ್ತು ಸೊಂಟ ತಿರುಗಿಸುವ, ಆಕಳಿಸುವ ದೃಶ್ಯಗಳು ಹೆಚ್ಚಾದಾಗ ವಾರ್ಡನ್ ಮತ್ತು ಅಟೆಂಡರ್ ಅದು ಚಿಕ್ಕ ಹಾವು; ಅದರ ಅಮ್ಮ ನಿಮ್ಮ ಬೆಡ್‌ಗಳ ಅಡಿಯಲ್ಲಿ ಇರಬಹುದು ಎಂಬ ಹುಸಿ ಬಾಂಬ್ ಸಿಡಿಸಿದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಪ್ರಕೃತಿಯ ರಿಯಲ್ ಡೆಮೋ: ಸುಮಾವೀಣಾ ಸರಣಿ

ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ