Advertisement

Tag: KV Thirumalesh

ಕಲ್ಲು ಕಲ್ಲಿನಲಿ… ಆನೆ ಕುದುರೆ…

ಎರಡನೇ ಪ್ರತಾಪರುದ್ರ ಯಾ ರುದ್ರದೇವ ರುದ್ರಾಂಬಳ ಮೊಮ್ಮಗನಾಗಿದ್ದು, ಆಕೆಯ ಅನಂತರ ಪಟ್ಟಕ್ಕೆ ಬಂದು ಅಕ್ಕ ಪಕ್ಕದ ದಂಗೆಗಳನ್ನು ಅಣಗಿಸಿ ಪ್ರಬಲನಾದನು. ದೆಹಲಿಯ ಸುಲ್ತಾನರು ದಕ್ಷಿಣವನ್ನು ಪ್ರವೇಶಿಸಿದುದು ಇವನ ಕಾಲದಲ್ಲೇ. ವಾರಂಗಲ್ಲಿಗೆ ಲಗ್ಗೆಯಿಟ್ಟ ಮುಸ್ಲಿಮ್ ಸೈನ್ಯವನ್ನು ಮೂರು ಬಾರಿ ಅವನು ಎದುರಿಸಬೇಕಾಯಿತು. 1309ರಲ್ಲಿ ಅಲ್ಲಾ ಉದ್ದೀನ ಖಿಲ್ಜಿಯಿಂದ ದಂಡನಾಯಕನಾಗಿ ನಿಯುಕ್ತನಾದ ಮಾಲಿಕ್ ಕಾಫಿರನು ವಾರಂಗಲ್ಲಿನ ಮೇಲೆ ಲಗ್ಗೆಯಿಟ್ಟನು. ಇದರಲ್ಲಿ ಜಯಶಾಲಿಯಾದ ಕಾಫಿರನು ನಗರವನ್ನೆಲ್ಲ ಲೂಟಿ ಮಾಡಿದನು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

Read More

ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ಪ್ರಾಚೀನ ಭಾರತದ ಪ್ರಸಿದ್ಧ ರಾಜರು ಮತ್ತು ರಾಜವಂಶಗಳನ್ನು ಪಟ್ಟಿ ಮಾಡಿ ಅರ್ಥೈಸಿಕೊಳ್ಳುವುದು ಒಂದು ಸವಾಲೇ ಸರಿ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸವಾಲುಗಳನ್ನು ಎದುರಿಸುತ್ತ, ಪ್ರಜೆಗಳಿಗೆ ಸುವ್ಯವಸ್ಥೆಯನ್ನುಕಲ್ಪಿಸಿದ ಕತೆಗಳು ಸಾವಿರಾರು. ಈ ರಾಜವಂಶಗಳನ್ನು ಅರಿಯುವುದಕ್ಕಾಗಿ  ಆ ನಿಟ್ಟಿನಲ್ಲಿ ನಾನು ಮಾಡಿಕೊಂಡ ಒಂದು ಪಟ್ಟಿಯನ್ನು ಇಲ್ಲಿ ಕೊಟ್ಟಿರುವೆ. ಅದರ ಪ್ರಕಾರ, ವಿವರಗಳನ್ನು ಕೊಡುತ್ತ ಹೋಗುತ್ತಿದ್ದೇನೆ.  ವೈವಿಧ್ಯತೆಯ ಮಹಾಸಾಗರದತ್ತ ಹರಿದು ಬಂದ ನದಿಗಳೆಷ್ಟೋ, ನದಿಗಳು ನಡೆದು ಬಂದ ದಿಕ್ಕುಗಳೆಷ್ಟೋ.
ಕೆ.ವಿ.ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.

Read More

ಸಂದರ್ಶಕರಿಂದ ತಪ್ಪಿಸಿಕೊಂಡ ಕವಿ ತಿರುಮಲೇಶರ ಸ್ವಯಂ ಸಂದರ್ಶನ

ದೂರದ ಹೈದರಾಬಾದಿನಲ್ಲಿ ತಮ್ಮ ಜೀವಿತದ ಬಹುಭಾಗವನ್ನು ಕಳೆದಿರುವ ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶರು ತಮ್ಮ ಕುರಿತು ಬಹಳ ಕಮ್ಮಿ ಮಾತನಾಡಿದವರು. ಬರಹಗಾರನಿಗಿಂತ ಬರಹದ ಕುರಿತು ಹೆಚ್ಚು ಚರ್ಚೆಯಾಗಬೇಕೆಂದು ಹೇಳುತ್ತಲೇ ಬಂದವರು. ಬರಹಗಾರ ಆತ್ಮ ಚರಿತ್ರೆಯನ್ನೂ ಕೂಡಾ ಬರೆಯಬಾರದು ಎಂದು ಪ್ರತಿಪಾದಿಸುವವರು. ಆದರೆ ಇತ್ತೀಚೆಗೆ ಕೊಂಚ ಮನಸ್ಸು ಬದಲಿಸಿ ತಮ್ಮದೊಂದು ಕಲ್ಪಿತ ಸಂದರ್ಶನವನ್ನು ತಾವೇ…

Read More

ಎಫ್. ಆರ್. ಲೀವಿಸ್ ಕುರಿತು ಕೆ. ವಿ. ತಿರುಮಲೇಶ್ ಐವತ್ತೈದು ವರ್ಷಗಳ ಹಿಂದೆ ಬರೆದದ್ದು

“ಲೀವಿಸ್ ಎಂದರೆ ತುಂಬ ಹಟಮಾರಿಯೂ ಹೌದು, ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದರಿಂದಾಗಿ ಲೀವಿಸ್‍ ನ ಬೆಂಬಲಿಗರೇ ಅವನ ಕೈಬಿಟ್ಟದ್ದುಂಟು. ತನ್ನ ‘ಮೌಲ್ಯ’ಗಳಿಗಾಗಿ ಲೀವಿಸ್ ಹೋರಾಡಿದ್ದಾನೆ. ಲೀವಿಸ್ ತಾನೊಂದು ಸರ್ವಸಾಮಾನ್ಯ ನಿಲುಮೆ ತಳೆಯಲು ನಿರಾಕರಿಸುವುದೇ ಇದಕ್ಕೆ ಕಾರಣ. ಇದು ಲೀವಿಸ್‍ ನ ಸಾಧನೆಯ ಕೇಂದ್ರ ವಿರೋಧಾಭಾಸ. ವಿಮರ್ಶೆಯ ಪರಮತತ್ವಗಳ ಕುರಿತಾಗಿ…”

Read More

ಸಾಯುವ ಕಾಲಕ್ಕೆ ದೇವರ ಸಮಾನ ಆಗುವ ಮನುಷ್ಯ

“ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ