Advertisement

Tag: KVT

“ಅಕ್ಷಯ ಕಾವ್ಯ”ಕ್ಕೆ ಒಂದು ಪ್ರವೇಶಿಕೆ

“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ.
ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ ಕೃತಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ

Read More

ಅನೇಕಾನೇಕ ಹೊಳಹುಗಳು….

ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!
ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಇಲ್ಲೇ ಇದ್ದವರು ಇನ್ನಿಲ್ಲವಾದರು…

ಹೈದರಾಬಾದ್‌ನ ಲೋಕಲ್ ಟ್ರೇನ್‌ಗಗಳಲ್ಲಿ ಸುತ್ತಿದ, ರಸ್ತೆಬದಿ ನಿಂತು, ಕೆಂಡದಲ್ಲಿ ಕಾಯಿಸಿದ ಮುಸುಕಿನ ಜೋಳ ತಿನ್ನುವ, ಭಾನುವಾರದ ಫುಟ್‌ಪಾತ್ ಪುಸ್ತಕಗಳ ಅಂಗಡಿಗಳನ್ನು ಆಸಕ್ತಿಗಳಿಂದ ತಿರುಗುತ್ತ ಪುಸ್ತಕ ಕೊಳ್ಳುವ, ಹೈದರಾಬಾದನ್ನು, ಇಲ್ಲಿಯ ಕನ್ನಡ ಸಂಘಗಳನ್ನು, ಕನ್ನಡಿಗರನ್ನು, ಬಹಳ ಆಸ್ಥೆ – ಅಕಾರಾಸ್ಥೆಗಳಿಂದ ಪ್ರೀತಿಸುವ, ಆ‌ ಮಹಾನ್ ಚೇತನಕ್ಕೆ, ಕಣ್ತುಂಬಿದ ವಿದಾಯ ಹೇಳುವುದನ್ನು ಬಿಟ್ಟು, ಬೇರೇನು ಉಳಿದಿದೆ!!
ಕೆ.ವಿ. ತಿರುಮಲೇಶರ ಕುರಿತು ಗೋನವಾರ್ ಕಿಶನ್ ರಾವ್ ಆಪ್ತ ಬರಹ

Read More

ಮೌರ್ಯರ ಕಾಲದ ಆಡಳಿತ ಮತ್ತು ಮತ ಸ್ಥಾಪನೆಗಳು

ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಚೋಳರ ರಾಜ್ಯಾಡಳಿತವೂ… ಕಾರ್ಯಕಲಾಪಗಳೂ

ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ರಾಜ್ಯಾಡಳಿತದಲ್ಲಿ ಸುಧಾರಣೆಯನ್ನು ತಂದು ಹೆಸರುವಾಸಿಯಾದನು. ಕಂದಾಯವನ್ನು ನಿರ್ಧರಿಸಲು ಭೂಮಿಯ ಸರ್ವೆ ಮಾಡಿಸಿದನಲ್ಲದೆ, ತನ್ನ ವಿಶ್ವಾಸಕ್ಕೆ ಯೋಗ್ಯರಾದ ಜನರನ್ನು ಪ್ರತಿನಿಧಿಗಳಾಗಿ ಅಲ್ಲಲ್ಲಿ ನಿಯಮಿಸಿ ಆಡಳಿತವು ಸರಿಯಾಗಿ ನಡೆಯುವಂತೆ ನೋಡಿಕೊಂಡನು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು…

Read More

ಬರಹ ಭಂಡಾರ