Advertisement

Tag: madhurani

ಹದಿನಾರಂಕಣದ ಮನೆಯ ನಡುವಲ್ಲಿ ಖಾಲಿ ತೂಗುತ್ತಿದ್ದ ತೂಗುಮಂಚ

“ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ.”

Read More

”ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು”

ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು.ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ.‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು

Read More

ತುಟಿ ಸುರುಟಿಸಿ ಕಣ್ಣು ಕಿರಿದಾಗಿಸಿ ಅಳುವಂತೆ ನಟಿಸಿಬಿಟ್ಟೆ!

“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು.ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು.ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ.”

Read More

ಧೋ ಮಳೆಯ ಜಾದೂವಿನಲ್ಲಿ ಮರಳಿ ದೊರೆತ ಅಪ್ಪ

ನಾನು ಅನಾಮತ್ತು ಮೂರು ದಿನ ಹೊರಗೇ ಕೂರಲು ತೊಡಗಿದಾಗ ಅಪ್ಪನೂ ಹಜಾರದ ಮೂಲೆಯ ಮೋಟುಕಟ್ಟೆಯ ಬಳಿ ಕುಳಿತು ನನ್ನೊಂದಿಗೆ ಮಾತಿಗೆ ಕೂರುತ್ತಿದ್ದನು.ಶುರುವಿನಲ್ಲಿ ಅದೇಕೋ ಮುಜುಗರವೆನಿಸಿದರೂ ನಂತರ ನಾನೂ ಅವನೊಡನೆ ನಗುತ್ತಾ ಮಾತಾಡಹತ್ತಿದೆ.

Read More

ತಿರ್ಯಗ್ಜಂತುವಿನ ಹಾವಳಿಯರಿತ ಪ್ರದ್ಯುಮ್ನನು ನಿರ್ವ್ಯಾಜ್ಯಾಧಿಗಮನೆ ವಾರಿಧಿಗಾತು ಗತಿಸಿದನು

ಮುಸ್ಸಂಜೆ ಜಾರುವ ಹೊತ್ತಿಗೆ ಪಡಸಾಲೆಯಲ್ಲಿ ಸೇರುತ್ತಿದ್ದ ಜನಜಂಗುಳಿ, ತಾಂಬೂಲ ಜಗಿಯುತ್ತಲೇ ಅಜ್ಜನು ಶುರುವಿಡುತ್ತಿದ್ದ ಜೈಮಿನಿ ಹಾಗೂ ಕುಮಾರವ್ಯಾಸ ಭಾರತದ ಗಮಕ, ಅಲ್ಲೇ ಏನಾದರೊಂದು ಮೆದ್ದು ಹಾಗೇ ಮಲಗಿಬಿಡುತ್ತಿದ್ದ ನಾನು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ