ನನಗಿನ್ನೂ ನೆನಪಿದೆ. ಬಹುಶಃ ಆಗ ನಾನು ತುಂಬಾ ಎಳೆಯ ಹುಡುಗಿ
“ಆರಂಭವೂ ಇಲ್ಲದ ಅಂತ್ಯವೂ ಇಲ್ಲದ, ಹಾದಿಯಿಲ್ಲದ ಹಾದಿಯಲ್ಲಿ ಏನೂ ಗೊತ್ತಿಲ್ಲದೆ ಬರೆಯುತ್ತಾ ಬಿಳಿಯ ಮುಗಿಲಿನ ಒಳಗೆ ಹಾದು ಹೋಗುತ್ತಿದ್ದೇನೆ. ನಿಮಗೆಲ್ಲರಿಗೂ ನಮಸ್ಕಾರ.”
ನಕ್ಷತ್ರ ಎಂಬ ಹೆಸರಿನಲ್ಲಿ ಕವಿತೆ ಬರೆಯುತ್ತಿದ್ದ ನಾಗಶ್ರೀ ಶ್ರೀರಕ್ಷ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳಾದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಕನ್ನಡದ ಈ ಅನನ್ಯ ಕವಯತ್ರಿ ತನ್ನ ಏಕೈಕ ಕವಿತಾ ಸಂಕಲನಕ್ಕೆ ಬರೆದ ಪ್ರಸ್ತಾವನೆಯ ಸಾಲುಗಳು..”