ಅಮೀರ್ ಬಾಯಿ ಕರ್ನಾಟಕಿ: ಸ್ಫೂರ್ತಿದಾಯಕ ಕೃತಿ
ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ. ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.
Read More