Advertisement

Tag: Rain

ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ

ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ವಿಭಿನ್ನ ಜಗತ್ತು: ಸುಮಾವೀಣಾ ಸರಣಿ

ಇದಕ್ಕೆ ವ್ಯತಿರಿಕ್ತ ಎನ್ನುವಂತೆ ವಕೀಲರು ಹಾಗು ಜನನಾಯಕರಾಗಿದ್ದ ವ್ಯಕ್ತಿಯೊಬ್ಬರು ತಾವು ಕಾರಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯಾರಾದರೂ ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದರೆ ಕಾರ್ ನಿಲ್ಲಿಸಿ ಅವರನ್ನು ಪರಿಚಯಿಸಿಕೊಂಡು ಅವರ ಮನೆವರೆಗೂ ಬಿಡುತಿದ್ದರು. ಇದಲ್ಲವೆ ನಿಜವಾದ ಮಾದರಿ ವ್ಯಕ್ತಿತ್ವ. ಇನ್ನೂ ಖೇದಕರವಾದ ಸಂಗತಿಯೆಂದರೆ ಬೇರೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಅಲ್ಲಲ್ಲಿ ಅಡ್ಡಾಡುತ್ತಿತ್ತು ಎನ್ನುವ ಕಾರಣಕ್ಕೆ ಬಿಸಿ ಗಂಜಿಯನ್ನು ಅದರ ಮೇಲೆ ಎರಚಿದವರೂ ಇದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಕೊಡೆ…. ಕೊಡೆ … ಎಲ್ನೋಡಿ ಕೊಡೆ: ಸುಮಾವೀಣಾ ಸರಣಿ

ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

Read More

ವರ್ಷಕಾಲದಲ್ಲಿ ಸಂಭ್ರಮಾಚರಣೆಯ ಸಂಕಷ್ಟಗಳು: ಸುಮಾವೀಣಾ ಸರಣಿ

ನಮ್ಮ ಟೀಚರ್ಸ್ ಡೇ ಸೆಲೆಬ್ರೇಷನ್ನಿಗೂ ಮಳೆರಾಯ ತಪ್ಪದೆ ಹಾಜರಿ ಹಾಕುತ್ತಿದ್ದ. ಯಾವಾಗಲು ಸೆಪ್ಟೆಂಬರ್ 4 ರ ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿರುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ಉದ್ಘಾಟನೆ ಮೊದಲಾದ ಔಪಚಾರಿಕ ಕಾರ್ಯಕ್ರಮ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಹಾಡು ಕೇಳದಷ್ಟು ಜೋರು ಮಳೆ. ಮುಸಿ ಮುಸಿ ನಗುತ್ತಾ ಬರೆ ಡಾನ್ಸ್ ನೋಡುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಸವಾರಿ ಹೊರಟಳು ಮಳೆ ಮಹಾರಾಜ್ಞಿ

ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ