‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ
ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
