ನೀಲಿ ಮತ್ತು ಸೇಬು: ಸುಧಾ ಆಡುಕಳ ಕಥಾಸಂಕಲನಕ್ಕೆ ಎಚ್. ಎಸ್. ಸತ್ಯನಾರಾಯಣ ಮುನ್ನುಡಿ

‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.
ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ

Read More