ಹೆಬ್ಬುಲಿಯೊಂದು ಡಮಾರ್!!: ಸುಧಾ ಆಡುಕಳ ಅಂಕಣ
ಶಾಲೆಗೆ ಹೋದರೂ ನೀಲಿಗೆ ಹುಲಿಯದೇ ಮುಖ ನೆನಪಿಗೆ ಬರುತ್ತಿತ್ತು. ತನ್ನ ಸಹಪಾಟಿಗಳಿಗೂ ಹುಲಿಯನ್ನು ತೋರಿಸಬೇಕು ಅನಿಸತೊಡಗಿತು. ಮಾಸ್ತ್ರು ಪಾಠ ಮಾಡುತ್ತಿರುವಂತೆಯೇ ಪಿಸಪಿಸನೆ ಆಚೀಚೆಗೆ ಕುಳಿತವರಿಗೆ ವಿಷಯ ಮುಟ್ಟಿಸಿದಳು. ಇಂದೇನು? ಯಾವ ಮಕ್ಕಳೂ ಪಾಠದೆಡೆಗೆ ಗಮನವನ್ನೇ ನೀಡುತ್ತಿಲ್ಲವೆಂದು ಕ್ಷಣಕಾಲ ದಿಟ್ಟಿಸಿದ ಗೌಡಾ ಮಾಸ್ತ್ರು ಸುದ್ದಿಮೂಲವನ್ನು ಪತ್ತೆ ಹಚ್ಚಿಯೇಬಿಟ್ಟರು. ನೀಲಿಯನ್ನು ನಿಲ್ಲಿಸಿ ವಿಷಯ ಕೇಳಿದ್ದೇ ತಡ ಪಟಪಟನೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟಂತೆ ಎಲ್ಲ ಕತೆಯನ್ನು ಹೇಳಿಬಿಟ್ಟಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ