ಇಷ್ಟೊಂದ್ ಜನಾ.. ಎಲ್ಲಿಂದ ಬಂದೋರು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ವಿಪರೀತ ಜನ, ಸಮಯದ ಅಭಾವ. ಎರಡು ಮೂರು ದಿನಗಳಾದರೂ ಈ ಅರಮನೆಯನ್ನು ಸುತ್ತಿನೋಡಬೇಕು. ವಿಧಿಯಿಲ್ಲದೆ ಸಾಧ್ಯವಾದಷ್ಟು ನೋಡುತ್ತಾ ಹೊರಟೆವು. ಇದರಲ್ಲಿ ಪ್ರತಿಯೊಬ್ಬರೂ ಎಲ್ಲಾ ಕಡೆ ನಿಂತುಕೊಂಡು ಫೋಟೋಗಳನ್ನು ಹಿಡಿಯುವ ಹಿಂಸೆ ಬೇರೆ. ಜೊತೆಯಲ್ಲಿದ್ದ ನಮ್ಮ ಬೆಂಗಳೂರಿನ ಮಹಿಳೆಯೊಬ್ಬರನ್ನು `ಅಲ್ಲಮ್ಮ ತಮ್ಮ ತಮ್ಮ ಮುಖಗಳನ್ನ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಇಲ್ಲಿಗೆ ಬರಬೇಕೆ?’ ಎಂದಾಗ, `ಅಲ್ಲಣ್ಣ ನಾವು ಇಲ್ಲಿಗೆ ಬಂದಿದ್ದೀವಿ ಅಂತ ಗೊತ್ತಾಗಬೇಕಲ್ಲ, ಜನರಿಗೆ’ ಎಂದರು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಎರಡನೇ ಭಾಗ