ತರೀಕೆರೆ ಕಾಲಂ: ಬಂಗಾಳದ ಪುಖೂರ್‌ಗಳು
ಮಜಾ ಅನಿಸಿದ್ದು ಕಲಕತ್ತೆಯ ಹೃದಯಭಾಗದಲ್ಲಿ ಒಂದು ದೊಡ್ಡ ಪುಖೂರ್ ಇರುವುದು. ಬಂಗಾಳ ಸರ್ಕಾರದ ಸಚಿವಾಲಯ ಕಟ್ಟಡವಾಗಿರುವ ರೈಟರ್ಸ್ ಬಿಲ್ಡಿಂಗ್ ಎದುರಾ ಎದುರು ಇದಿದೆ. ಈಸ್ಟ್ ಇಂಡಿಯಾ ಕಂಪನಿಯ ನೌಕರರಿಗೆ ಕಟ್ಟಿಸಲಾದ ಬ್ರಿಟಿಶರ ಕಾಲದ ಬೃಹದಾಕಾರದ ರೋಮನ್ ವಾಸ್ತುಶಿಲ್ಪದ ಕಟ್ಟಡವಿದು.
ಅಂಕಣಕ್ಕೆ ಸಿಲುಕಿಕೊಂಡ ತಾಯಿಬೆಕ್ಕು: ಅಬ್ದುಲ್ ರಶೀದ್ ಅಂಕಣ
ಮಹಾ ಸುಂದರಿಯೂ ಜಾಣೆಯೂ ಆಗಿರುವ ಈಕೆ ತಾನೇ ಆಸೆ ಪಟ್ಟು, ತಾನೇ ಆಯ್ಕೆ ಮಾಡಿ, ತಾನೇ ಕೂಡಿ, ತಾನೇ ಮರಿಗಳನ್ನು ಧಾರಣೆ ಮಾಡಿಕೊಂಡಾದ ಮೇಲೆ ಅದೇ ಗಂಡು ಬೆಕ್ಕಿನ ಜೊತೆ ಕಾದಾಟಕ್ಕಿಳಿದಿದ್ದಾಳೆ. ಇದಾವುದೂ ಗೊತ್ತಿಲ್ಲದೆ ಕಕ್ಕಾವಿಕ್ಕಿಯಾಗಿರುವ ಆ ಗಂಡು ಬೆಕ್ಕು ತನ್ನ ಪ್ರಾಣ ರಕ್ಷಣೆಗಾಗಿ ಅನಿವಾರ್ಯವಾಗಿ ಕಾದಾಟಕ್ಕಿಳಿದಿದೆ.
ಹಂಚಿಕೊಳಲಿನ ಅನುಬಂಧಗಳು: ನಾಗಶ್ರೀ ಅಂಕಣ
ಅವನದು ದಕ್ಷಿಣ ಕನ್ನಡದ ಯಾವುದೋ ಪುಟ್ಟ ಊರಂತೆ. ಇಲ್ಲಿಗೆ ಬಂದು ಸುಮಾರು ವರ್ಷವೇ ಆಯ್ತು ಎಂದ. ಅವನಿಗೆ ಹಂಚಿಕೊಳಲಿನ ಕುರಿತು ಏನೂ ಗೊತಿದ್ದ ಹಾಗೆ ಕಾಣಲಿಲ್ಲ. ಇದರ ಸ್ಥಳನಾಮದ ಇತಿಹಾಸ ಏನಿರಬಹುದೋ ಗೊತ್ತಿಲ್ಲ.
ಕವಿಶೈಲದ ಅಂದಿನ ಸಂಜೆ: ನಾಗಶ್ರೀ ಅಂಕಣ
ಹೀಗೆ ಸಿಕ್ಕಿದವರೊಡನೆ ಮಾತಾಡುತ್ತಾ, ಏನೋ ಸುಖದಲ್ಲಿ ಅಲ್ಲೆಲ್ಲಾ ನೋಡಿಕೊಂಡು ಕವಿಶೈಲಕ್ಕೆ ಹೋದಾಗ ಈ ಮಾನಪ್ಪ, ಕವಿಶೈಲಕ್ಕೆಂದೇ ಇರುವ ಕಾವಲುಗಾರನೋ ಅಥವಾ ಯಾವುದಕ್ಕೂ ಸಂಬಂಧಪಡದೆ ಸುಮ್ಮನೆ ತನ್ನ ಪಾಡಿಗಿರುವ ಜೀವವೋ ತಿಳಿಯಲಿಲ್ಲ.
ಉಕದ ಹಾಗಿದ್ದ ನಾನು, ದಕದ ಹಾಗಿದ್ದ ಅವನು: ನಾಗಶ್ರೀ ಅಂಕಣ
ನನ್ನಲ್ಲೊಂದು ಉಕವಿತ್ತು. ಅವನಲ್ಲೊಂದು ದಕ, ಇದೇನು ಉತ್ತರಕನ್ನಡ ದಕ್ಷಿಣ ಕನ್ನಡ ಎಂದು ತಿಳಿದುಕೊಂಡಿರೋ!! ಅಲ್ಲವೇ ಅಲ್ಲ, ನಮ್ಮ ಬಳಿ ಕನ್ನಡಿ ಇತ್ತು.
ಜೀವನವೆಂಬ ಆಹಾರ ಚಕ್ರ: ಅಬ್ದುಲ್ ರಶೀದ್ ಅಂಕಣ
ಇವತ್ತು ಬೆಳಗ್ಗೆ ಹೆಂಗಸೊಬ್ಬರು ‘ದೆವ್ವ ನೋಡಿದ್ರಾ ಸಾರ್’ ಅಂತ ಕೇಳಿದಳು. ‘ಹೌದು’ ಅಂತ ಖುಷಿಯಲ್ಲಿ ಅಂದೆ. ‘ಅಯ್ಯೋ ನನಗೆ ಯಾಕೋ ಬೇಜಾರಾಗುತ್ತಿದೆ ಸಾರ್’ಅಂದಳು. ‘ಯಾಕೆ’ ಅಂತ ಕೇಳಿದೆ. ಆಕೆಯ ಗಂಡ ತುಂಬಾ ಒಳ್ಳೆಯವನಂತೆ. ಚೆನ್ನಾಗಿಯೂ ಇದ್ದಾನೆ. ಆದರೆ ಒಮ್ಮೊಮ್ಮೆ ತಾರಾಮಾರಾ ಹೊಡೆಯುತ್ತಾನಂತೆ.
ಕತ್ರೀನಾಳ ಕಣ್ಣಲ್ಲಿ: ಅಬ್ದುಲ್ ರಶೀದ್ ಅಂಕಣ
ಕಂಡದ್ದನ್ನೆಲ್ಲ ಮುಟ್ಟುತ್ತ, ಮೂಸುತ್ತ, ಮೇಯುತ್ತಾ ಒಂದು ಗಂಡಾಡಿನಂತೆ ಒಬ್ಬನೇ ಅಂಡಲೆಯುವುದು ಒಂದು ತರಹ ಚಂದ. ಹೆಗಲ ಮೇಲೊಂದು ಮಗುವನ್ನು ಕುಳ್ಳಿರಿಸಿಕೊಂಡು ತಣ್ಣಗಿನ ನೀರ ಆಳದಲ್ಲಿ ಇಂಚಿಂಚು ಇಳಿಯುವುದು ಬೇರೆಯದೇ ಚಂದ.
ಗೋಳುಹೊಯ್ದುಕೊಳ್ಳಲು ಬೇಕೊಬ್ಬಳು ತಂಗಿ: ಎಚ್ ವೈ ರಾಜಗೋಪಾಲ್ ಬರಹ
ಆದರೆ ನಾನಿರುವುದು ಅವಳಿಂದ ಹತ್ತು ಸಾವಿರ ಮೈಲು ದೂರದಲ್ಲಿ. ನಿಜ, ಮಾನಸಿಕ ಹತ್ತಿರ ಭೌಗೋಳಿಕ ಹತ್ತಿರಕ್ಕಿಂತ ಹೆಚ್ಚು ಮುಖ್ಯ. ಆದರೂ ದಿನನಿತ್ಯಕ್ಕೆ ಒಬ್ಬ ತಂಗಿ ಬೇಕು ಎನ್ನಿಸಿದೆ ನನಗೆ. ಗೋಳುಹೊಯ್ದುಕ್ಕೊಳ್ಳುವುದಕ್ಕಲ್ಲ, ಪ್ರೀತಿಸುವುದಕ್ಕೆ. ನನ್ನ ಅದೃಷ್ಟವೋ ಏನೋ, ನನಗೆ ಅಂಥ ಹಲವಾರು ತಂಗಿಯರು ಈ ದೂರದೇಶದಲ್ಲಿ ಸಿಕ್ಕಿದ್ದಾರೆ.
`ಎಲ್ಲೆಲ್ಲಿ ಮಲಗಿ ಎದ್ದೆನೋ ಗೊತ್ತಿಲ್ಲ……..’
ನಾನು ಎಲ್ಲಿ ಮಲಗಿದ್ದೀನಿ? ನನ್ನ ಸುತ್ತಮುತ್ತಲೂ ಏನೇನಿದೆ? ಯಾರ್‍ಯಾರಿದ್ದಾರೆ? ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಅತಿಥಿಗೃಹವೊ, ಬಯಲುಟೆಂಟೋ ಒಂದೂ ಗೊತ್ತಾಗುವುದಿಲ್ಲ. ಏಳಲು ಪ್ರಯತಿಸುತ್ತೇನೆ, ಎದ್ದು ಕುಳಿತುಕೊಳ್ಳಲು ಬಹಳ ಕಾಲವಾಗಬಹುದು. ಆದರೂ ಪ್ರಯತ್ನಿಸುತ್ತೇನೆ. ಯಾವತ್ತಾದರೂ ಒಂದು ದಿನ ಗ್ಯಾರಂಟಿಯಾಗಿ ಎದ್ದು ಕುಳಿತುಕೊಳ್ಳುತ್ತೇನೆ. ಅಕ್ಕಪಕ್ಕ ನಿಶಬ್ದವಾಗಿದ್ದರೆ ಚನ್ನಾಗಿರುತ್ತದೆ. ನನ್ನ ಕನಸುಗಳಲ್ಲಿ ಕಾಣಿಸಿಕೊಂಡ ಎಲ್ಲಾ ಕತೆ ಕವನ, ಕಾಲ ದೇಶ, ಕೆರೆ ಕುಂಟೆ, ಜನರು ಕೊನೆಗೆ ಪ್ರಾಣಿಗಳು ಎಲ್ಲದರ ಬಗ್ಗೆ ಬರೆದುಬಿಡಬೇಕು. ಹಾಸಿಗೆ ಪಕ್ಕದಲ್ಲಿಯೇ ಪೋಲ್ಡಿಂಗ್ ಟೇಬಲ್ ಇಟ್ಟಿದ್ದೀನಿ.










