ಮಳೆಬೆಳೆ, ಸಂತೋಷ, ನೆಮ್ಮದಿಗಳ ಕಣಜ
ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ
ನಿನ್ನೆ ಇದ್ದದ್ದು ಇವತ್ತು ಮಂಗಮಾಯ!
ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ಮಹಿಳಾ ಕ್ರಿಕೆಟ್ ಲೋಕದ ತಾರೆಯರು….
ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ
ಕಾವ್ಯ ಸಾಗರದಲ್ಲೊಂದು ‘ಒದ್ದೆಗಣ್ಣಿನ ದೀಪ’….
ಈ ಎಲ್ಲ ಕವಿತೆಗಳೂ ವಿವಿಧ ವಿಷಯಗಳನ್ನು ಕುರಿತು ಮಾತನಾಡಿವೆ. ಧರ್ಮ, ರಾಜಕೀಯ, ಪ್ರಭುತ್ವ, ನಿರಂಕುಶಾಧಿಕಾರ, ಕೋಮುವಾದ, ಧರ್ಮಾಂಧತೆ, ಬಡತನ, ಹಸಿವು, ಗೊಡ್ಡು ಸಂಪ್ರದಾಯ, ಪ್ರೇಮ, ಅಗಲಿಕೆ, ಸಾವು ಇತ್ಯಾದಿಗಳು ಸೇರಿಕೊಂಡಿವೆ. ಕಾವ್ಯದ ಕುರಿತು ಹೆಚ್ಚು ಗಂಭೀರ ಚರ್ಚೆಗಳಾಗುತ್ತಿಲ್ಲ ನಿಜ. ಆದರೆ ನಿಜವಾದ ಕಾವ್ಯಕ್ಕೆ ಇಂಥ ಔಪಚಾರಿಕ ಚೌಕಟ್ಟುಗಳೇಕೆ ಬೇಕು? ಸತ್ವಯುತವಾದ ಕಾವ್ಯ ಎಂದೆಂದಿಗೂ ತನ್ನ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಅಭಿಷೇಕ್ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಚಾಂದ್ ಪಾಷಾ ಎನ್.ಎಸ್. ಕವನ ಸಂಕಲನದ ಕುರಿತು ಬರೆದಿದ್ದಾರೆ
‘ಇಂಡೀಜಿನಸ್ ವಾಯ್ಸ್’ – ಸಮತೆಯತ್ತ ಆಸ್ಟ್ರೇಲಿಯಾ
ದೇಶದ ಮೂಲಜನರಿಗೆ ಸಂಬಂಧಿಸಿದ್ದರೂ 55 ವರ್ಷಗಳ ನಂತರ ಪ್ರತಿಯೊಬ್ಬ ಆಸ್ಟ್ರೇಲಿಯನ್ ವಯಸ್ಕ ಪ್ರಜೆಯೂ ಕಡ್ಡಾಯವಾಗಿ ಮತ ಚಲಾಯಿಸಬೇಕಾದ, ದೇಶದ ಸಂವಿಧಾನಕ್ಕೆ ತಿದ್ದುಪಡಿ ತರಲು ಕೇಳಬೇಕಿದ್ದ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಅವರು ಅಧಿಕೃತವಾಗಿ ಬಿಡುಗಡೆ ಮಾಡುವವರಿದ್ದರು. ತಮ್ಮ ಬಿಳಿಯ ಜನರಿಗೆ ಸಾರಾಸಾಗಾಟಾಗಿ, ಯಾವುದೇ ಅಡ್ಡಿಗಳಿಲ್ಲದೆ ‘ಸ್ವಾಭಾವಿಕವಾಗಿ’ ಲಭ್ಯವಿರುವ ಸ್ವಯಂ-ನಿರ್ಣಯದ ಹಕ್ಕು ಇದೇ ದೇಶದ ಮೂಲಜನರಿಗೆ ಇಲ್ಲವಾಗಿರುವುದನ್ನು ಅವರು ಎತ್ತಿ ಹಿಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
“ಸರ್ವೆ” ಜನಾಃ ದುಃಖಿನೋಭವಂತು!
ಅಂತೂ ಇಂತೂ ಅಲ್ಲಿನ ಸೊಸೈಟಿಯಲ್ಲಿ ನಮ್ಮ ಖಾತೆ ತೆರೆದಿದ್ದು ಆಯ್ತು. ಬೆಳೆ ಸಾಲವಂತೂ ಸಿಕ್ಕಿತು. ಸ್ವಲ್ಪ ಉಸಿರಾಡುವಂತಾಯ್ತು. ಬೇಲಿ ಕಟ್ಟಲು ಸಾಲವನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಅಲ್ಲಿನವರು ಹೇಳಿದರಾದರೂ ಒಂದು ಹೆಜ್ಜೆಯಾದರೂ ಮುಂದೆ ಬಂದೆನಲ್ಲ ಅಂತ ಖುಷಿಯಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಶಂಭುಲಿಂಗ ಹೆಗಡೆ ಮಾವನ ಪಾತ್ರ ತುಂಬಾ ದೊಡ್ಡದು. ಅವರಿಲ್ಲದಿದ್ದರೆ ನನಗೆ ಇಷ್ಟೆಲ್ಲ ಸುಲಭದಲ್ಲಿ ಸೊಸೈಟಿ ಸಾಲ ಸಿಗುತ್ತಿರಲಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ
ಕ್ರಿಕೆಟ್ ಮೈದಾನಗಳು ಮತ್ತು ಕಾಮೆಂಟೇಟರ್ಸ್
ಭಾರತದಲ್ಲಿ ಮುಂಚೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಇದ್ದ ಮೈದಾನಗಳು ಕೇವಲ 5. ದೆಹಲಿ, ಮುಂಬೈ, ಕಲ್ಕತ್ತಾ, ಕಾನ್ಪುರ ಮತ್ತು ಮದ್ರಾಸ್ ನಗರಗಳಲ್ಲಿ. ದೆಹಲಿಯ ಫಿರೋಜ್ ಕೋಟ್ಲ, ಮುಂಬೈಯ ಬ್ರೇಬರ್ನ್ ಸ್ಟೇಡಿಯಂ, ಕಲ್ಕೊತಾದ ಈಡನ್ ಗಾರ್ಡನ್ಸ್, ಕಾನ್ಪುರದ ಗ್ರೀನ್ ಪಾರ್ಕ್, ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂ. ಆಮೇಲೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಇತ್ಯಾದಿ ಬಂದವು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ
ಸೋಕಿದ ಕಹಿಯನ್ನು ಒಳಗಿಳಿಸಿಕೊಳ್ಳದೆ, ಸಿಹಿಯನಷ್ಟೇ ಹಂಚುತ್ತಾ….
೫೭ ವರ್ಷಗಳ ತಮ್ಮ ಬದುಕಿನ ಪಯಣದ ಬಗ್ಗೆ ಅವರ ಮಾತಿನಲ್ಲಿ ಸಂತೃಪ್ತಿಯಿತ್ತು. ಸವಾಲು, ಸಮಸ್ಯೆ, ಸಣ್ಣತನ, ಮೋಸ, ರಾಜಕೀಯಗಳ ಬಗ್ಗೆ ಒಂದು ಶಬ್ದವನ್ನೂ ವ್ಯಯಿಸದೆ, ತಮ್ಮ ಜ್ಞಾನ, ಉದಾತ್ತ ವಿಚಾರಗಳು, ಸಕಾರಾತ್ಮಕ ಸಂಗತಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅಲ್ಲಿ ಕೃತಕತೆಗೆ, ಕೃತ್ರಿಮಕ್ಕೆ ಆಸ್ಪದವೇ ಇರಲಿಲ್ಲ. ಅವರೊಳಗಿನ ಶುದ್ಧ ಆನಂದವನ್ನು ಸುತ್ತ ಪಸರಿಸುವ ಬೆಳಕಿನ ನದಿಯಂತೆ ಹರಿದರು. ಮಾತಾಡಿದರು. ನೃತ್ಯ ಮಾಡಿದರು. ಅದೊಂದು ಅನಿರ್ವಚನೀಯ ಅನುಭವ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಕುಂಭಮೇಳದ ನೆನಪುಗಳು….
ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ.
‘ದೇವಸನ್ನಿಧಿ’ ಅಂಕಣದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದ ಅನುಭವದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ










