ಸರಿರಾತ್ರಿಯಲಿ.. ಹುಳ ಹುಪ್ಪಟೆಗಳ ಸಂಗದಲಿ…
ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು!
ಗುರುಪ್ರಸಾದ್ ಕುರ್ತಕೋಟಿ ಅಂಕಣ
ಸಂಗೀತ ಸಂಜೆಗಳ ಇಬ್ಬಗೆಯ ಸುಧೆ
ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು.
ಡಾ. ವಿನತೆ ಶರ್ಮ ಅಂಕಣ
ಎಲ್ಲರೊಳಗೊಂದಾಗುವ ಕಲೆಯ ಕಲಿಯುತಾ….
ನೀವು ಯಾರೊಂದಿಗೆ ಮಾತಾಡದಿದ್ದರೂ ಪರವಾಗಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಪದವಿ ಪಡೆಯಬೇಕು. ಊರ ಉಸಾಬರಿಗೆ ತಲೆಕೊಡುವುದು ಬಿಟ್ಟು ನಿನ್ನ ಜೀವನ ನೀನು ನೋಡಿಕೋ. ಅವರ ಮನೆಯಲ್ಲಿ ಸಾವಾಗಿದ್ದರೆ ಏನಂತೆ? ನಿನ್ನದೆಷ್ಟೋ ಅಷ್ಟರಲ್ಲಿರು. ಯಾವುದಕ್ಕೂ ಮುನ್ನುಗ್ಗಿ ತಲೆಕೊಡಬೇಡ. ಅಂಟಿಯೂ ಅಂಟದಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೆಚ್ಚು ಮಾತಿಲ್ಲದೆ ನಾಜೂಕಾಗಿ ಪರಿಸ್ಥಿತಿಯಿಂದ ಬಿಡಿಸಿಕೊಳ್ಳಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದಲ್ಲಿ ಹೊಸ ಬರಹ
ಆ ಹುಡುಗಿ ಹಾಗೆಯೇ ಮರಳಿ ಹೋಗಿದ್ದಳು
ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ.
ಇಸ್ಮಾಯಿಲ್ ತಳಕಲ್ ಬರಹ
ಬೆಂಕಿಯ ಮಳೆ
ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್ ಜೈಮನ್ ಬರೆಯುವ ಅಂಕಣ
ಭಾಗವತಿಕೆಯ ಪರಂಪರೆಯಲ್ಲಿ ವಿದ್ವಾನ್ ಗಣಪತಿ ಭಟ್ ಅವರ ವೈಶಿಷ್ಟ್ಯತೆ
ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರಿಗೆ ಜನಪ್ರಿಯ ಮಾದರಿಗಳಿಂದ ತಪ್ಪಿಸಿಕೊಳ್ಳುವುದು ಕಷ್ಟದ ಕೆಲಸ. ಅವರಿಗೆ ಹಲವು ಒತ್ತಡಗಳಿರುತ್ತವೆ. ಒತ್ತಡಗಳ ವಿರುದ್ಧ ನಿಲ್ಲುವುದಕ್ಕೆ ಒಂದು ರೀತಿಯ ನಿಷ್ಠುರತೆ, ಛಲ, ವಿಶ್ವಾಸವೂ ಬೇಕು. ಅಂತಹುದಕ್ಕೆ ಮಾದರಿ ವಿದ್ವಾನರು. ನಮಗೆ ಈಗ ಸಿಗುವ ಅವರ ತಾರುಣ್ಯ ಕಾಲದ ವೃತ್ತಿ ಮೇಳದ ಹೊಸಪ್ರಸಂಗದ ಪದ್ಯಗಳು, ಹಳೆಯ ದೇವಿ ಮಹಾತ್ಮೆಯ ಧ್ವನಿ ಮುದ್ರಿಕೆಯನ್ನು ಕೇಳಿದರೆ ಇದು ಸ್ಪಷ್ಟವಾಗುತ್ತದೆ.
ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ.
ಟಿ20 ವಿಶ್ವ ಕಪ್ 2022 ಮತ್ತು ಅದರ ಚರಿತ್ರೆ
ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಪ್ರೇಕ್ಷಕರು ಇದನ್ನು ಎಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದರೆ, ನಮ್ಮ ಆಟಗಾರರು ಗೆದ್ದರೆ, ಅವರನ್ನು ಅಟ್ಟಕ್ಕೆ ಏರಿಸುತ್ತೇವೆ; ಹಾಗೆಯೇ ಸೋತರೆ ಅವರನ್ನು ಪಾತಾಳಕ್ಕೆ ಇಳಿಸಿ ಬಿಡುತ್ತೇವೆ! ಇದೊಂದು ದೌರ್ಭಾಗ್ಯವೇ ಸರಿ. ನಾವು ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಬೇಕು. ಯಾರಿಗೂ ಸೋಲುವುದಕ್ಕೆ ಇಷ್ಟವಿರುವುದಿಲ್ಲ. ಪಂದ್ಯದಲ್ಲಿ ಯಾರಾದರೂ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟಿ20 ವಿಶ್ವ ಕಪ್ ಕುರಿತ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ
ಹೃದಯ ವೈಶಾಲ್ಯತೆಗೆ ಬೇಲಿ ಹಾಕಿಕೊಳ್ಳುವ ಅನಿವಾರ್ಯ!
ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ.
ಗುರುಪ್ರಸಾದ್ ಕುರ್ತಕೋಟಿ ಅಂಕಣ
ಡಾರ್ಕ್ ಹ್ಯೂಮರ್ ಮತ್ತು ನಮ್ಮ ಗ್ರಹಿಕೆಗಳು
ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಗಿರಿಧರ್ ಗುಂಜಗೋಡು ಅಂಕಣ










