ಶಾಂತಿ, ಕ್ರಾಂತಿ, ಸ್ವಾತಂತ್ರ್ಯದ ಹಗಲುಗನಸು
ಇಪ್ಪತ್ತೊಂದನೇ ಶತಮಾನದ ಈ ವರ್ಷದಲ್ಲೂ ಆಸ್ಟ್ರೇಲಿಯಾದ ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ನ್ಯಾಯವಿನ್ನೂ ಸಿಕ್ಕಿಲ್ಲ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಮೂರು ಶತಭಾಗ ಮಾತ್ರ ಅಬೊರಿಜಿನಲ್ ಮತ್ತು ದ್ವೀಪವಾಸಿಗಳು. ಕಾರಾಗೃಹಗಳಲ್ಲಿ ಅವರ ಸಂಖ್ಯೆ ಸುಮಾರು ಶೇ 29ರಷ್ಟು. ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಅವರು, ಭಾರತದಲ್ಲಿ ಗಾಂಧೀಜಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಸಿಕ್ಕಂತೆ, ತಮ್ಮಲ್ಲೂ ಪರಿವರ್ತನೆಯ ಬೆಳಕೊಂದು ಮೂಡಿಬರುವಂತಾಗಲಿ ಎಂದು ಹಾರೈಸುತ್ತಾರೆ. ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ಕುರಿತು ಡಾ. ವಿನತೆ ಶರ್ಮ ಆಸ್ಟ್ರೇಲಿಯಾ ಪತ್ರದಲ್ಲಿ ಬರೆದಿದ್ದಾರೆ.
ಅಜ್ಜ ಕೊಟ್ಟ ಜಾಗಟೆಯ ಮಹಿಮೆ
ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರು ಉಪಯೋಗಿಸುತ್ತಿದ್ದ ಜಾಗಟೆ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಕೊಟ್ಟದ್ದು. ಇದು ಈಗಲೂ ಬಲಿಪ ಮನೆತನದ ಅತ್ಯಮೂಲ್ಯ ಆಸ್ತಿಯಂತಿದೆ. ಇದು ಕರಾವಳಿಯ ತೆಂಕುತಿಟ್ಟು ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಮುನ್ನಡೆಸಿದ ಯಕ್ಷಗಾನಗಳಿಗೆ ಸಾಕ್ಷಿಯಂತೆ ಇರುವ, ಐತಿಹಾಸಿಕ ಮಹತ್ವವಿರುವ ಜಾಗಟೆ. ಈಗ ಅದು ನೋಡುತ್ತಿರುವುದು ಬಲಿಪ ಪರಂಪರೆಯ ನಾಲ್ಕನೆಯ ತಲೆಮಾರನ್ನು. ‘ಬಲಿಪ ಮಾರ್ಗ’ ಅಂಕಣದಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಬರಹ.
ಕನ್ನಡ ವಿಮರ್ಶೆಯ ವಿವೇಕ: ಕೆಲವು ಮಾತುಗಳು
ಕನ್ನಡದ ಈ ಕಾಲದ ವಿಮರ್ಶೆ ಮೇಲ್ನೋಟಕ್ಕೆ ತನ್ನನ್ನು ‘ನವ್ಯೋತ್ತರ’ವೆನ್ನಬೇಕೋ ‘ಆಧುನಿಕೋತ್ತರ’ವೆನ್ನಬೇಕೋ, ‘ದಲಿತ ಬಂಡಾಯೋತ್ತರ’ ಎನ್ನಬೇಕೋ ಎಂಬ ಸ್ವನಿರೂಪಣೆಯ ಗೊಂದಲದಲ್ಲಿಯೇ ಸಿಲುಕಿದಂತೆ ಕಂಡರೂ, ಅದು ಕನ್ನಡ ವಿಮರ್ಶೆಯ ಕಾರ್ಯಸೂಚಿ ಎಷ್ಟು ಅನಿರ್ದಿಷ್ಟವಾಗಿದೆ ಎಂಬುದರ ಸೂಚಕವೂ ಆಗಿ ಕಾಣಿಸುತ್ತದೆ. ಈಚಿನ ದಶಕಗಳಲ್ಲಿ ಸಂಸ್ಕೃತಿ ಅಧ್ಯಯನ ಹಾಗೂ ಸ್ತ್ರೀವಾದಿ ವಿಮರ್ಶೆಯ ಮಾದರಿಗಳು ಪ್ರಭಾವಶಾಲಿಯಾಗಿ ಬೆಳೆದಿರುವುದು ನಿಜವಾಗಿದೆ. ಡಾ. ಎಸ್. ಸಿರಾಜ್ ಅಹ್ಮದ್ ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಹೃದಯವೆಂಬ ಏಕಾಂಗಿ ಬೇಟೆಗಾರ
ಕೆಲ್ಲಿಯವರ ಮಗಳು ಹನ್ನೆರಡು ವರ್ಷದ ಮಿಕ್ಳೊಂದಿಗೆ ಸಿಂಗರ್ನ ಸ್ನೇಹ ಶುರುವಾಗುತ್ತದೆ. ಸಂಗೀತದಲ್ಲಿ ತೀವ್ರ ಆಸಕ್ತಿಯಿರುವ ಮಿಕ್ಳಿಗೆ ರೆಕಾರ್ಡ್ ಪ್ಲೇಟುಗಳನ್ನು ಉಡುಗೊರೆಯಾಗಿ ಕೊಡುತ್ತಾನೆ ಸಿಂಗರ್. ಆದರೆ ತನ್ನ ಸುತ್ತಲಿನ ಲೋಕದೊಂದಿಗೆ ಈತನ ಸಂವಹನವೇನಿದ್ದರೂ ಏಕ ಮುಖವಾದುದು. ಇವನ ಮನಸ್ಸು ಉಳಿದವರಿಗೆಲ್ಲ ಮುಚ್ಚಿದ ಬಾಗಿಲು. ಯಾರೇ ಮಾತನಾಡಬೇಕಿದ್ದರೂ, ಅವರ ತುಟಿಯ ಚಲನೆ ನೋಡಿದರೆ ಸಾಕು ಅವರು ಏನನ್ನು ಹೇಳುತ್ತಿದ್ದಾರೆ ಅನ್ನುವುದು ಸಿಂಗರ್ನಿಗೆ ತಿಳಿದು ಹೋಗುತ್ತದೆ.
ಯಾವುದನ್ನು ಬರೆದರೆ ಓದುಗರನ್ನು ತಲುಪಬಹುದೆಂಬ ಕುತೂಹಲ
ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು…”
ಕನ್ನಡವೆಂದರೆ ಕುಣಿದಾಡುವುದೆನ್ನೆದೆ..
ಚಿತ್ರ ಬಿಡಿಸುವ ಮಕ್ಕಳನ್ನು ಚಿತ್ರಕಲಾ ಶಾಲೆಗೆ ಸೇರಿಸಬೇಕು ಎನ್ನುವ ಜ್ಞಾನ ಈಗಲೂ ಬಹುತೇಕ ಪಾಲಕರಿಗೆ ಇಲ್ಲ. ಆದರೆ ಚಿತ್ರಕಲೆ ಗೊತ್ತಿದ್ದವರನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವುದಕ್ಕೆ, ಇಮಾಮ್ ಸಾಬಿ ಮತ್ತು ರಾಮನವಮಿಯ ಸಂಬಂಧ ಎನ್ನಬಹುದು. ಅದೇ ರೀತಿಯಲ್ಲಿ ಇತ್ತೀಚಿನ ಕರ್ನಾಟಕದ ಬಹುತೇಕ ಪಾಲಕರು ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುತ್ತಾರೆ. ಮಾತನಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷ್ ಉಪಯೋಗಿಸಿದರೆ ಬುದ್ಧಿವಂತರೆಂದು ಗುರುತಿಸಿಕೊಳ್ಳುತ್ತಾರೆ. ಹಾಗಾಗಿ ಬೆಂಗಳೂರಿಗರ ಕನ್ನಡದಲ್ಲಿ ಕನ್ನಡವನ್ನು ಭೂತಗನ್ನಡಿ ಹಾಕಿ ಹುಡುಕಬೇಕು ಎಂದು ಕೆಲವರು ಕುಹುಕವಾಡುತ್ತಾರೆ.
ಪ್ರಶಾಂತ್ ಬೀಚಿ ಬರೆಯುವ ಅಂಕಣ
ಲಾಂಡೇಯ್: ಅಫ್ಘನ್ ಹೆಣ್ಣುಮಕ್ಕಳ ಅಕ್ಷರಸಮರ
ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು…”
ಹಾಗಾದರೆ ರಾಜಕೀಯದಲ್ಲೂ ಅಡುಗೆ ಮನೆಯದ್ದೇ ಮೌಲ್ಯಮಾಪನವೆಂದಾದರೆ..
ಸ್ಟ್ರೇಲಿಯಾದಲ್ಲಿ ಜೂಲಿಯಾ ಪ್ರಧಾನಮಂತ್ರಿಯಾದ ಹೊಸತರಲ್ಲೇ ಆಕೆಯ ಬಗ್ಗೆ ನಾನಾತರಹದ ಸುದ್ದಿಗಳು, ಅಪನಿಂದನೆಗಳು, ಅವಹೇಳನಕಾರಿ ಮಾತುಗಳು ಹುಟ್ಟಿದ್ದವು. ಉದಾಹರಣೆಗೆ, ಆಕೆಯ ಮನೆ ಅಡುಗೆಮನೆಯ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ‘ನೋಡಿ, ಅಡುಗೆಮನೆ ಎಷ್ಟು ಖಾಲಿಯಾಗಿ ಬರಡುಬರಡಾಗಿದೆ, ಆಕೆ ಅಡುಗೆ ಮಾಡುವುದಿಲ್ಲ, ಆಕೆಗೆ ತಾಯ್ತನವೂ ಇಲ್ಲ, ಇಂಥಾ ಹೆಣ್ಣು ನಮ್ಮ ಸಮಾಜಕ್ಕೆ ಮಾದರಿಯಾಗಬಲ್ಲರೇ ಎಂದು ವಿಡಂಬನೆ ಮಾಡಲಾಗಿತ್ತು’.
ಚಲಿಸುತ್ತಲೇ ಯೋಚಿಸುವ ಮೆವ್ಲುಟ್
ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ..”









