ಬೆಳಕೆಂಬುದು ಬೆಳಕಾಯಿತು ಹೇಗೆ?:ಶೇಷಾದ್ರಿ ಗಂಜೂರು ಅಂಕಣ
“ನ್ಯೂಟನ್ ಪ್ರಕಾರ, ಬೆಳಕೆಂದರೆ ಬೆಳಕಿನ ಕಣಗಳ ಸಂಚಾರ. ಅವನು ಹೇಳುವಂತೆ ಸೂಕ್ಷ್ಮಾತಿಸೂಕ್ಷ್ಮ ಮತ್ತು ತೂಕವೇ ಇರದ ಈ ಕಣಗಳು ನೇರವಾಗಿ ಸಂಚರಿಸುತ್ತವೆ. ಈ ಕಣಗಳ ಸಂಚಾರಕ್ಕೆ ಅಡ್ಡವಾಗಿ ಒಂದು ಕಾರ್ಡ್ ಬೋರ್ಡ್ ಹಿಡಿದರೆ, ಅವುಗಳ ಸಂಚಾರ ಅಲ್ಲಿಗೇ ನಿಂತು ಆ ಬೋರ್ಡಿನ ಹಿಂದೆ, ಬೆಳಕು ಇರುವುದಿಲ್ಲ. ಆದರೆ, ಆ ಬೋರ್ಡಿನಲ್ಲಿ, ಸಣ್ಣದೊಂದು ಸೀಳಿನಂತಹ ಕಿಂಡಿಯನ್ನು…”
ಇಷಿತಾ ಗಂಗೂಲಿಯವರ ನಾಟಕದ ಮೂಲಕ ಮತ್ತೆ ಕಾಳಿದಾಸನ ಓದು…
“ಇಷಿತಾ ತಮ್ಮ ನಿಲುವುಗಳನುಸಾರ ಶಕುಂತಲೆಯ ಪಾತ್ರವನ್ನ ಇಂದಿನ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಬಹುದಾದರೆ ನಾನ್ಯಾಕೆ ನನ್ನ ಕಣ್ಣೆದುರಿನ ಶಕುಂತಲೆಯ ವಿವರಗಳ ಬಗ್ಗೆ ಹುಡುಗನಲ್ಲಿ ಚರ್ಚಿಸಬಾರದು ಅನಿಸಿತು. ‘ಅಂದಿನ ಶಕುಂತಲೆಗೆ ಆ ಸ್ಥಿತಿ ಒದಗಲಿಕ್ಕೆ ಆಕೆಯ ಮೈಮರೆವು ಹಾಗೂ ದೂರ್ವಾಸರ ಶಾಪ ಕಾರಣ. ದುಷ್ಯಂತ ನೆಪ ಅಷ್ಟೇ. ಈಗ ನೀನು ಹೇಳಿದ್ಯಲ್ಲ… ಆ ಶಾಕುಂತಲೆಯ ಬದುಕು…”
‘ಕಾವ್ಯಾ ಓದಿದ ಹೊತ್ತಿಗೆʼ: ಇನ್ನು ಮುಂದೆ ತಿಂಗಳಿಗೆರೆಡು ಬುಕ್ ಚೆಕ್
“ಒಬಾಮಾ ಅಧ್ಯಕ್ಷರಾದರು ಅಂದ ತಕ್ಷಣ ಅಮೆರಿಕದಲ್ಲಿ ಕಪ್ಪು ಜನರ ಕಷ್ಟಗಳೆಲ್ಲ ಮುಗಿಯಿತು ಅಂತ ಅರ್ಥವಲ್ಲ. ಇದೊಂಥರಾ ಇಂದಿರಾ ಪ್ರಧಾನಿಯಾಗಿದ್ದರು ಎಂದು ಭಾರತದ ಹೆಂಗಸರಿಗೆಲ್ಲ ತಮ್ಮ ಕೋಟಲೆಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದ ಹಾಗಾಗುತ್ತದೆ. ಇಂದಿನ ದಿನಮಾನ ನೋಡಿದರೆ ಬರಾಕ್ ಮತ್ತು ಮಿಶೆಲ್ ನಿರ್ಮಿಸಿದ ಕಾಲುದಾರಿ ಹೆದ್ದಾರಿಯಾಗಲು ಇನ್ನೂ ಬಹಳ ಸಮಯವಿದೆ ಎಂಬುದಂತೂ..”
ಕನಕದಾಸರ ನಳ ಚರಿತ್ರೆ: ಬದುಕನ್ನು ಪರಿವರ್ತಿಸುವ ಹೆಣ್ಣಿನ ಚರಿತ್ರೆ
“ಮೇಲ್ನೋಟಕ್ಕೆ ನಳ-ದಮಯಂತಿಯ ಪ್ರೇಮದ, ಪ್ರೇಮ ಪರೀಕ್ಷೆಯ ಕತೆಯಾಗಿ, ವಿಧಿಯ ಅಟ್ಟಹಾಸದ ಕತೆಯಾಗಿ ಕಾಣುವ ಕಾವ್ಯವನ್ನು ನಿಧಾನವಾಗಿ ಪರಿಶೀಲಿಸಿದರೆ ಅದಕ್ಕಿರುವ ಹಲವು ಆಯಾಮಗಳು ಗೋಚರವಾಗುತ್ತವೆ. ಕನಕದಾಸರ ಕಾವ್ಯವನ್ನು ಕೇವಲ ಪ್ರೇಮಕತೆಯಾಗಿ ನೋಡಿದರೆ ಅದು ರಂಜಕವಾಗಿ ಕಂಡು, ಮುಖ್ಯವಾಗಿ ದಮಯಂತಿಯಂತಹ…”
‘ನಟನ’ದಲ್ಲಿ ‘ಸುಭದ್ರಾ ಕಲ್ಯಾಣ’ – ಎರಡು ಬಗೆಗಳ ಸಂಗಮ…
“ಮತ್ತೂ ಒಂದು ಸಂಗತಿ ತಿಳಿಯಿತು. ಏನೆಂದರೆ ನಟನ ಕಲಾವಿದರಿಗೆ ‘ಸುಭದ್ರಾ ಕಲ್ಯಾಣ’ ನಾಟಕದ ಹಾಡುಗಳನ್ನ ಕಲಿಸಿದವರು ಪರಮಶಿವನ್ ಸರ್ ಅವರು ಎಂದು. ಆದರೆ ಅವರು ನಿರ್ಗಮಿಸಿದ ಮೇಲೆ ಪರಮಶಿವನ್ ಅವರಿಂದ ತರಬೇತುಗೊಂಡ ನಟರಿಗೆ ಹಾರ್ಮೋನಿಯಂ ಸಾಥ್ ನೀಡಲು ಪ್ರೀತಿಯಿಂದ ಬಂದವರು…”
ನೀರಲ್ಲಿ ಬರೆದ ಅಜರಾಮರ ಹೆಸರು – ಜಾನ್ ಕೀಟ್ಸ್
“ಅವನ ಕಾವ್ಯ ಸಮಕಾಲೀನ ವಿಮರ್ಶಕರನ್ನು ಮತ್ತು ಓದುಗರನ್ನು ಅಷ್ಟಾಗಿ ಪ್ರಭಾವಿಸದಿದ್ದರೂ, ಆನಂತರದ ಕಾಲದಲ್ಲಿ ಕೀಟ್ಸನ ಪ್ರಸಿದ್ಧಿ ಸದಾ ಹೆಚ್ಚುತ್ತಲೇ ಹೋಯಿತು. ಬದಲಾದ ಕಾವ್ಯಾಸಕ್ತಿ, ರುಚಿ, ಸಂದರ್ಭಗಳ ಹೊರತಾಗಿಯೂ ಕೀಟ್ಸನ ಪ್ರಮುಖ ರಚನೆಗಳು ಇಂದಿಗೂ ಅಸಂಖ್ಯ ಓದುಗರ ನೆಚ್ಚಿನ ಕವನಗಳಾಗಿವೆ. ಕಾವ್ಯದ ವ್ಯಾಖ್ಯೆ ಈ ಮಧ್ಯೆ ಹಲವು ಸಲ…”
ಆ ಪೀರ್ ಸಾಹೇಬರು ಯಾರು ಮತ್ತು ಈ ಪೀರ್ ಸಾಹೇಬರು ಯಾರು..?
“ತಾತನ ನೆನಪು ವಿಚಿತ್ರವಾಗಿ ಕಾಡಲು ಆರಂಭವಾಯಿತು. ಅವರು ತಾವು ನಾಟಕ ಕಲಿಸಲು ಬಳಸುತ್ತಿದ್ದ ಸ್ಕ್ರಿಪ್ಟ್ ಗಳನ್ನ ಒಂದು ಟ್ರಂಕಿನಲ್ಲಿ ತುಂಬಿಟ್ಟಿದ್ದರು. ಅವರು ನಿರ್ಗಮಿಸಿದ ಮೇಲೆ ಅದನ್ನ ಯಾರೂ ತೆರೆದಿರಲಿಲ್ಲ. ಹಾರ್ಮೋನಿಯಂನಿಂದ ಅವರ ನೆನಪು ಹೆಚ್ಚು ಒತ್ತರಿಸಿ ಬಂದದ್ದರಿಂದ ನಾನು ಆ ಟ್ರಂಕ್ ತೆರೆದೆ. ತಾತ ಕೈಯಾರೆ ಬರೆದು ಜೋಪಾನವಾಗಿ…”
ಬೆಳಕಿನ ಕೋಲು ಮೂಡುವುದಾದರೂ ಹೇಗೆ?
“ಗೆಲಿಲಿಯೋ ಹೇಳಿದ ಅನಂತದ ಮಹಾ ಪುಸ್ತಕವನ್ನು ಅರ್ಥಮಾಡಿಕೊಳ್ಳುವಲ್ಲಿ, ಈ ವಿಧಾನ ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡಿದೆ. ಇದರಿಂದಾಗಿ, ಹಿಂದೊಮ್ಮೆ ಪ್ರಕೃತಿಯ ಗುಹ್ಯಾತಿಗುಹ್ಯವೆನಿಸಿದ್ದ ಎಷ್ಟೋ ರಹಸ್ಯಗಳು ಇಂದು ರಹಸ್ಯಗಳಾಗಿ ಉಳಿದಿಲ್ಲ. “ಚಂದಿರನೇತಕೆ ಓಡುವನಮ್ಮ” ಎನ್ನುವ ಬದಲು, ಚಂದ್ರನ ಮೇಲೆಯೇ ಕಾಲಿಟ್ಟು ಬಂದಾಗಿದೆ. ವಿಜ್ಞಾನ, ಅದರಲ್ಲೂ ಭೌತ ಶಾಸ್ತ್ರ,…”
ರಂಗ ವಠಾರ ಅಂಕಣದಲ್ಲಿ ‘ಟು ಡೇಟ್ ಆರ್ ನಾಟ್ ಟು ಡೇಟ್..’ ಪ್ರಸಂಗ
“ಅದೊಂದು ವೃತ್ತಿ ನಾಟಕ ತಂಡ. ದಿನನಿತ್ಯ ನಾಟಕ ನಡೆಯುತ್ತಲೇ ಇರುತ್ತದೆ ಮತ್ತು ನಡೆಯಲೇ ಬೇಕು. ಯಾಕೆಂದರೆ ಅದು ಹೊಟ್ಟೆಪಾಡಿನ ಕಾಯಕ. ನಾಟಕ ಮಂದಿಯೇನು ಪ್ರೇಮಕ್ಕೆ ಹೊರತೆ..? ಒಮ್ಮೆ ನಾಟಕ ನಡೆಯುತ್ತಿದೆ. ಅದು ರಾಮಾಯಣ ನಾಟಕ. ನಮಗೆ ಗೊತ್ತಿರುವ ರಾಮಾಯಣದಲ್ಲಿ ಸೀತೆಯನ್ನ ಅಪಹರಿಸಿಕೊಂಡು ಹೋಗುವವನು ರಾವಣ. ಆದರೆ ಆ ವೃತ್ತಿ ನಾಟಕ ತಂಡದಲ್ಲಿ..”









