ನಿಮ್ಕಡೆ ಟೈಮೆಸ್ಟಾಯ್ತು?: ಶೇಷಾದ್ರಿ ಗಂಜೂರು ಅಂಕಣ
“ಹಳಿಗಳ ನೆಟ್ವರ್ಕ್ಗಳು ಬೆಳೆದಂತೆ, ಒಂದೇ ಸಮಯದಲ್ಲಿ ಹಲವಾರು ರೈಲು ಗಾಡಿಗಳು ಈ ಹಳಿಗಳ ಮೇಲೆ ಓಡಾಡುತ್ತಿದ್ದವು. ಇವೆಲ್ಲವೂ ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ತಪ್ಪಿಸಲು ಅವುಗಳಿಗೆ ಒಂದು ಟೈಮ್ ಟೇಬಲ್ ಬೇಕಿತ್ತು. ಜೊತೆಗೆ, ಆ ಹಳಿಗಳ ಉದ್ದಕ್ಕೂ ಆ ಟೈಮ್ ಟೇಬಲ್ ಅನ್ನೇ ಅನುಸರಿಸಬೇಕಿತ್ತು. ಆ ಕಾಲದಲ್ಲಿ ರೈಲು ಗಾಡಿಗಳನ್ನು ನಡೆಸುತ್ತಿದ್ದವರು ಪ್ರೈವೇಟ್ ಕಂಪೆನಿಗಳು. ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ..”
ಅತಿವೇಗದ ರೈಲಿನ ಪರವಿರೋಧದ ವಿಚಾರಗಳು: ಯೋಗೀಂದ್ರ ಮರವಂತೆ ಅಂಕಣ
“ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್…”
ಚಿಕ್ಕಪ್ಪ ಕೊಡಿಸಿದ್ದ ವಾಚು ಕಳೆದುಹೋಯಿತು!: ಶೇಷಾದ್ರಿ ಗಂಜೂರು ಅಂಕಣ
“ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು”
ಹೇಳದೇ ಉಳಿದ ಮಾತೊಂದಿದೆ…: ಆಶಾ ಜಗದೀಶ್ ಅಂಕಣ
“ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು…”
ಗಣಿಗಾರಿಕೆಯ ಧೂಳಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ: ಶೇಷಾದ್ರಿ ಗಂಜೂರು ಅಂಕಣ
“ಈ ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ..”
ಶಾಲಾ ಪುನಃರಾರಂಭದ ವಿಚಿತ್ರ ವಿನೂತನ ಘಳಿಗೆಗಳು: ಯೋಗೀಂದ್ರ ಮರವಂತೆ ಅಂಕಣ
“ಸ್ಪ್ರಿಂಗ್ ಸೀಸನ್” ಎಂದು ಇಲ್ಲಿನವರಿಂದ ಕರೆಸಿಕೊಳ್ಳುವ, ಮಾರ್ಚ್ ತಿಂಗಳ ಅಖೇರಿಗೆ ನಮ್ಮನ್ನು ಆವರಿಸಿದ ಕೊರೊನದ ಅಸಾಧಾರಣ ದೀರ್ಘಕಾಲೀನ ಪರಿಣಾಮಗಳಿಂದ ಇದೀಗ ತುಸು ಮಟ್ಟಿನ ಬಿಡುಗಡೆ ಕಾಣುತ್ತಿರುವುದು ಎಲೆಗಳು ಬಣ್ಣ ಬದಲಿಸುವ, ಉದುರುವ ತಯಾರಿ ನಡೆಯುವ ಶರತ್ಕಾಲ ಅಥವಾ “ಆಟಂ” ಹೊತ್ತಿಗೆ. ಇಲ್ಲಿನ ಸಸ್ಯ ಸಂಕುಲದ ಮಟ್ಟಿಗೆ ಚಿಗುರುವ ಮೊಗ್ಗುಗಳ ಹಾಗು ಉದುರುವ ಪಕಳೆಗಳ ನಡುವಿನ “
ಕಾಲದ ಕಾಲಿನ ಉಸೇನ್ ಬೋಲ್ಟ್ ನ ಓಟ: ಶೇಷಾದ್ರಿ ಗಂಜೂರು ಅಂಕಣ
“ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ “ಸನ್ ಡಯಲ್”ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ …”
ಮತ್ತೆ ಮತ್ತೆ ನೆನೆಯುವುದೂ ಸುಖವೇ…: ಆಶಾ ಜಗದೀಶ್ ಅಂಕಣ
“ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ.. “
ಕಾಲಯಂತ್ರದಲ್ಲಿ ಕುಳಿತಾಗ ಕಿಟಕಿಯ ಹೊರಗೆ ಕೈ ಇಡಬೇಡಿ: ಶೇಷಾದ್ರಿ ಗಂಜೂರು ಅಂಕಣ
“ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ …”









