ರಾಧಾ ಮಾಧವನಿಗೊಲಿದ ಮುರಳಿಗಾನ…: ಆಶಾಜಗದೀಶ್ ಅಂಕಣ
“ಜಗತ್ತು ಅಪಾರ ಸತ್ಯಗಳನ್ನು ಒಳಗೊಂಡು ಮುಚ್ಚಿಟ್ಟುಕೊಂಡು ಹುಡುಕಿಕೊಳ್ಳಿ ಎಂದು ಮುಗುಮ್ಮಾಗಿ ಕೂತಿದೆ. ನಾವೇ ನಾವು ನಾವಾಗಿ ಬೊಗಸೆಯೊಡ್ಡಿಕೊಂಡು ಸತ್ಯವನ್ನು ಹುಡುಕಿ ಹೊರಡಬೇಕಿದೆ. ಇಲ್ಲಿನ ಒಂದೊಂದು ಜೀವ ಅಜೀವಗಳಿಗೂ ಅಂತರ್ ಸಂಬಂಧವಿದೆ. ಅದನ್ನು ಅರಿತು ಒಳಗೊಂಡು ಬದುಕಬೇಕಿದೆ. ಆದರೆ ಆ ಎಡೆಯಲ್ಲಿ ನಮ್ಮ ಪ್ರಯತ್ನವೆಷ್ಟಿದೆ?! ಕೆಲವೊಮ್ಮೆ ಶೂನ್ಯ! ಇದು ಕವಿಯನ್ನು ನೋಯಿಸಿದೆ.”
ಭೀಮ ಮತ್ತು ಹಿಡಿಂಬೆಯ ಪ್ರೇಮ ಪ್ರಸಂಗ: ಆರ್. ದಿಲೀಪ್ ಕುಮಾರ್ ಅಂಕಣ
“ಅವಳು ಅವನೆಡೆಗೆ ಬರುವುದನ್ನು ಪಂಪ ಹೇಳುವಾಗ ಬಳಸುವ ಒಂದು ಪ್ರತಿಮೆ ನೋಡಿ “ಆಕೆ ಮದನನ ಕಯ್ಯಿಂ ಬದುರ್ಂಕಿದ ಅರಲಂಬು ಬಪರ್ಂತೆ ಬಂದು, ಭೀಮಸೇನನ ಕೆಲದೊಳ್ ನಿಂದಿರೆ” ಪಕ್ಕದಲ್ಲಿ ನಿಂತು ಬಿಡುತ್ತಾಳೆ. ಅಂಬು ತನ್ನ ಕಾರ್ಯ ಪ್ರಾರಂಭ ಮಾಡಿದ ಸ್ಥಾನ ಮತ್ತು ಅದರ ಕೊನೆಯನ್ನು ಇಷ್ಟು ಅದ್ಭುತವಾಗಿ ಕಾರಣ ಸಹಿತ ಹೇಳುವುದು ಬಹಳ ಕಷ್ಟದ ವಿಷಯವೇ ಸರಿ.”
ದನಿಯ ಒಂದು ಹನಿಯಾದಾಗ: ವಿನತೆ ಶರ್ಮಾ ಅಂಕಣ
“ಪೂರ್ವ-ಪಶ್ಚಿಮ ದೇಶಗಳಲ್ಲಿ, ಉತ್ತರ-ದಕ್ಷಿಣ ಧ್ರುವಗಳಲ್ಲಿ, ಒಳನಾಡು-ಹೊರನಾಡಿನಲ್ಲಿ ಜನನುಡಿಗೆ ಬೆಲೆ ಸಂದ ಉದಾಹರಣೆಗಳು ನಮ್ಮಲ್ಲಿವೆ. ಜನನಾಯಕರು ಸಾಮಾನ್ಯಜನರ ಸತ್ಯಕ್ಕೆ ತಲೆಬಾಗಿದ ನಿದರ್ಶನಗಳಿವೆ. ಆದರೂ … ಉರುಳುತ್ತಿರುವ ಕಾಲಚಕ್ರ ಕೆಲ ಕಹಿಸತ್ಯಗಳನ್ನು, ಕೆಲ ಗುರುತರ ಬದಲಾವಣೆಗಳನ್ನು ದಾಖಲಿಸುತ್ತಿದೆ. ಅಮೆರಿಕ ದೇಶದ ಈ ಹಿಂದಿನ ಅಧ್ಯಕ್ಷ ಒಬಾಮ ಹೇಳಿದಂತೆ ‘ವಯಸ್ಸಾದ ಕೆಲ ಹಿರಿಯರು ಅದರಲ್ಲೂ ಗಂಡಸರು’ ತಪ್ಪು ಮಾಡುತ್ತಿದ್ದಾರೆ.”
ಗಣಿತದ ಕಾವ್ಯಾತ್ಮಕ ಗುಣಗಳು: ಮಧುಸೂದನ್ ವೈ.ಎನ್ ಅಂಕಣ
“ಇಂದು ನಾವೆಲ್ಲ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಬಳಸುತ್ತಿದ್ದೇವೆ. ಇವೆಲ್ಲ ಇಷ್ಟು ಸಮರ್ಪಕವಾಗಿ ಕೆಲಸ ಮಾಡುವುದರ ಹಿಂದೆ ಯಾವುದೋ ಒಂದು ಯೂಲರ್ ಐಡೆಂಟಿಟಿ ಎಂಬ ಗಣಿತದ ಅತ್ಯದ್ಭುತ ಅತಿ ಸುಂದರ ಕಾವ್ಯಾತ್ಮಕ ಈಕ್ವೇಶನ್ ಕಾಣಿಕೆಯಿದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಗೊತ್ತಿರಲೂ ಬೇಕಿಲ್ಲ. ಅಂತೆಯೆ ನಮ್ಮ ದೇಶ ಇತರ ಮುಂದುವರೆದ ದೇಶಗಳ ಹಾದಿಯಲ್ಲಿ ಸುಸ್ಥಿತಿಯ ಪಥದಲ್ಲಿ ಸಾಗುತ್ತಿದೆಯೆಂದರೆ….”
ದಾರು ಸಿದರಾಮ ಮತ್ತು ಸಾಸಿವೆ ಡಬ್ಬ: ಡಾ. ಲಕ್ಷ್ಮಣ ವಿ.ಎ. ಅಂಕಣ
“ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ.”
ಅಪ್ಪಿದನಾ ವಿಭು ತನ್ನ ಶಾಪಮಂ ಬಗೆಯದೇ: ದಿಲೀಪ್ ಕುಮಾರ್ ಅಂಕಣ
“ಈ ಪಾಂಡುರಾಜನೊಬ್ಬನ ಸಾವನ್ನು ವರ್ಣಿಸುವುದಕ್ಕೆ ಪಂಪ ತನ್ನ ಎರಡನಡೆಯ ಆಶ್ವಾಸದಲ್ಲಿ ಆರು ಪದ್ಯಗಳನ್ನು ಪ್ಲಾಟ್ ಆಗಿ ಬಳಸುತ್ತಾನೆ ಎಂದರೆ ಆಶ್ಚರ್ಯ ಅನಿಸದೆ ಇರದು. ಪ್ಲಾಟ್ ಕಳೆದುಕೊಳ್ಳುವ ಬದುಕಿನ ಚಿತ್ರ ರಚನೆಗೂ ಒಂದು ಪ್ಲಾಟ್ ನಿರ್ಮಿಸಿಕೊಡುವ ಶಕ್ತಿ ಪಂಪನನ್ನು ಗಂಭೀರವಾಗಿ ಗಮನಿಸುವಂತೆ ಮಾಡುತ್ತದೆ. “
ಕರೆವ ಕಡಲಿನ ಹಿಂದೆ ಹಿಂದೆ: ವಿನತೆ ಶರ್ಮಾ ಅಂಕಣ
“ಇದ್ದಕ್ಕಿದ್ದಂತೆ ಎದುರಿದ್ದ ಆ ಅಗಾಧ ಜೀವಿ ಹತ್ತಿರಕ್ಕೆ ಬಂತು. ಎಷ್ಟು ಹತ್ತಿರಕ್ಕೆ ಎಂದರೆ ಅದು ಅವರಿಗೆ ಇಂದ್ರಿಯಗಳಿಗೆ ಗೋಚರವಾಗಿ, ಮನಸ್ಸಿನ ಅನುಭವವಾಗಿ ರೂಪಗೊಂಡಿತಂತೆ. ಅದನ್ನು ಮುಟ್ಟಬೇಕು ಎಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಅದರ ಮುಖ ಅವರ ದೇಹಕ್ಕೆ ಬಲು ಹತ್ತಿರದಲ್ಲಿತ್ತು. ತಿಮಿಂಗಿಲ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದು ಅವರಿಗೆ ಚೆನ್ನಾಗಿ ಅರಿವಾಯ್ತು. ಮೈ ಜುಮ್ಮ್ ಎಂದಿತ್ತು.”
ಜೇಡ ಕಡಿಸಿಕೊಂಡವ ನೀನು, ಸ್ಪೈಡರ್ ಮ್ಯಾನ್ ಆಗ್ತೀಯ! : ಮುನವ್ವರ್ ಜೋಗಿಬೆಟ್ಟು ಅಂಕಣ
“ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು….”
ಎಪ್ಪತೈದರ ಹೊಸ್ತಿಲಲಿ ನಿಂತು: ಆಶಾ ಜಗದೀಶ್ ಅಂಕಣ
“ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ…”










