Advertisement

ಅಂಕಣ

ದೇವರೇ.. ಬಡವರಿಗೆ ಸಾವ ಕೊಡಬ್ಯಾಡ:  ಡಾ. ಲಕ್ಷ್ಮಣ ವಿ.ಎ ಅಂಕಣ

ದೇವರೇ.. ಬಡವರಿಗೆ ಸಾವ ಕೊಡಬ್ಯಾಡ: ಡಾ. ಲಕ್ಷ್ಮಣ ವಿ.ಎ ಅಂಕಣ

“ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು? ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ.”

read more
ಸಾಫ್ಟವೇರ್ ಜಗತ್ತಿನಲ್ಲೊಂದು ಗಾಂಧಿ ಚಳುವಳಿ!: ಮಧುಸೂದನ್ ವೈ ಎನ್ ಅಂಕಣ

ಸಾಫ್ಟವೇರ್ ಜಗತ್ತಿನಲ್ಲೊಂದು ಗಾಂಧಿ ಚಳುವಳಿ!: ಮಧುಸೂದನ್ ವೈ ಎನ್ ಅಂಕಣ

“ಪ್ರತಿ ಸಾರಿ ಜಗತ್ತಿನಲ್ಲಿ ಬುದ್ದಿವಂತ ಮನುಷ್ಯ ಹುಟ್ಟಿಕೊಂಡಾಗ ಆತನ ಎದುರು ಎಷ್ಟೊಂದು ಆಯ್ಕೆಗಳಿರುತ್ತವೆ. ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಆತ ಹಿಟ್ಲರನಂತಹ ಅಧಿಕಾರಿಯಾಗಬಹುದು, ಕಂಪನಿ ಶುರು ಮಾಡಿ ಹೆಚ್ಚೆಚ್ಚು ಲಾಭ ಮಾಡಿ ಶ್ರೀಮಂತರ ಪಟ್ಟಿ ಸೇರಿಕೊಳ್ಳಬಹುದು, ಸ್ವಂತಕ್ಕೆ ದ್ವೀಪಗಳನ್ನು ಕೊಂಡುಕೊಂಡು ಮೋಜು ಮಸ್ತಿ ಮಾಡಬಹುದು.”

read more
ಮೊಸಳೆ ಮಾಯಾವಿ ‘ಸ್ಟೀವ್ ಇರ್ವಿನ್’: ವಿನತೆ ಶರ್ಮಾ ಅಂಕಣ

ಮೊಸಳೆ ಮಾಯಾವಿ ‘ಸ್ಟೀವ್ ಇರ್ವಿನ್’: ವಿನತೆ ಶರ್ಮಾ ಅಂಕಣ

“ಸ್ಟೀವ್ ತನ್ನ ವ್ಯಕ್ತಿತ್ವದಲ್ಲೇ ಇದ್ದ ಗುಣಗಳಿಂದ ಸರೀಸೃಪಗಳ ಪ್ರಪಂಚದಲ್ಲಿ ಸಂಪೂರ್ಣವಾಗಿ ಮುಳುಗಿದ. ಅವನಪ್ಪ ಬಾಬ್ ಮೊಸಳೆ ಹಿಡಿಯುವ ಕಲೆಯನ್ನು ಹೇಳಿಕೊಟ್ಟ ಮೇಲಂತೂ ಅದನ್ನೇ ಕರಗತ ಮಾಡಿಕೊಂಡು ಮುಂದೆ ಅವನ ಮೊಸಳೆ ಹಿಡಿಯುವ ಪ್ರವೀಣತೆ ಹೆಸರುವಾಸಿಯಾಯ್ತು. ಅವನ ಅಪ್ಪಅಮ್ಮಂದಿರು ಮತ್ತು ಸ್ಟೀವ್ ತಮ್ಮ ಕುಟುಂಬದ ಮೃಗಾಲಯವನ್ನು ಸ್ವಲ್ಪಸ್ವಲ್ಪವೇ ಬೆಳೆಸುತ್ತಾ ಅದನ್ನು ಸ್ಥಳೀಯ ಜನರಿಗೆ ಪರಿಚಯಿಸಿ… “

read more
ದಾರಿ ಮರೆತ ಇರುವೆಗಳು: ಮುನವ್ವರ್ ಜೋಗಿಬೆಟ್ಟು ಅಂಕಣ

ದಾರಿ ಮರೆತ ಇರುವೆಗಳು: ಮುನವ್ವರ್ ಜೋಗಿಬೆಟ್ಟು ಅಂಕಣ

“ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು.”

read more
ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”

read more
ಏನೊಂದೂ ಅರಿವಾಗದ ಅಯೋಮಯತೆಯಲ್ಲಿ: ಆಶಾ ಜಗದೀಶ್ ಅಂಕಣ

ಏನೊಂದೂ ಅರಿವಾಗದ ಅಯೋಮಯತೆಯಲ್ಲಿ: ಆಶಾ ಜಗದೀಶ್ ಅಂಕಣ

“ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು.”

read more
ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

“ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು.”

read more
ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ

“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”

read more
ಶರತ್ಕಾಲದ ಇಂಗ್ಲಿಷ್ ದಸರಾ: ಯೋಗೀಂದ್ರ ಮರವಂತೆ ಅಂಕಣ

ಶರತ್ಕಾಲದ ಇಂಗ್ಲಿಷ್ ದಸರಾ: ಯೋಗೀಂದ್ರ ಮರವಂತೆ ಅಂಕಣ

“ನವರಾತ್ರಿ ಆರಂಭ ಆದಾಗಿನಿಂದಲೂ ಭಾರತೀಯ ಜನರ ಅಸ್ತಿತ್ವ ಇರುವ ಇಲ್ಲಿನ ಊರುಗಳೆಲ್ಲೆಲ್ಲ ದೇವಿಯರಿಗೆ ಹೂವು ಹಾರ ಅಲಂಕಾರ ಆರತಿಯ ಅರ್ಚನೆ ಆಗುತ್ತಿದೆ. ಬಣ್ಣ ಬಣ್ಣದ ಉಡುಗೆ ಉಟ್ಟ, ಆಕರ್ಷಕ ಸಿಂಗಾರ ಮಾಡಿಸಿಕೊಂಡ ದುರ್ಗೆ, ಶಾರದೆ, ಲಕ್ಷ್ಮಿ, ಸರಸ್ವತಿಯರು ಬ್ರಿಟನ್ನಿನ ಊರೂರುಗಳಲ್ಲಿ ಪೂಜೆ ಸ್ವೀಕರಿಸುತ್ತಿದ್ದಾರೆ. ಬ್ರಿಟನ್ನಿನ ಪ್ರತಿ ಪಟ್ಟಣದಲ್ಲೂ ಭಾರತೀಯರಿದ್ದಾರೆ ಮತ್ತು ಅಲ್ಲೆಲ್ಲ ದಸರಾದ ಸಂಭ್ರಮ ಕಂಡಿದೆ.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ