Advertisement
ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಆರಂಭ

ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಆರಂಭ

ಮೊದಮೊದಲು ಬಂದ ಜನ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಓದಲು ಬಂದವರಿಗಂತೂ ರಾತ್ರಿ ಯಾವುದು, ಹಗಲು ಯಾವುದು ಎನ್ನುವುದು ಗೊತ್ತಾಗುವುದಿಲ್ಲ. ಮುಂಜಾನೆ ಹೊರ ಹೊರಟರೆ ಮನೆಗೆ ಬರುವುದು ಮಧ್ಯರಾತ್ರಿ ನಂತರವೇ. ಯಾವುದಾದರೂ ಕೆಫೆಯಲ್ಲೋ, ಡೈನರ್‌ಗಳಲ್ಲೋ ಕೆಲಸಮಾಡಬೇಕಾಗುತ್ತದೆ. ಅಮೇರಿಕ ಎಲ್ಲರಿಗೂ ಅವಕಾಶ ಕೊಡುವುದರಿಂದ, ಕೆಲಸದಲ್ಲಿ ಮೇಲು ಕೀಳು ಎನ್ನುವುದು ಇರದ ಕಾರಣ, ಯಾವ ಕೆಲಸ ಮಾಡಲೂ ಮುಜುಗರವೇನೂ ಆಗುವುದಿಲ್ಲ.
ವಿದೇಶಿ ನೆಲದಲ್ಲಿ ವಲಸಿಗರ ಬದುಕಿನ ಹಾಡು-ಪಾಡು ಕುರಿತ ಎಂ.ವಿ. ಶಶಿಭೂಷಣ ರಾಜು ಹೊಸ ಅಂಕಣ “ಅನೇಕ ಅಮೆರಿಕಾ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಜಗತ್ತಿನಾದ್ಯಂತ ವಲಸೆ ಎನ್ನುವುದು ಒಂದು ಸಾಧಾರಣ ಸಂಗತಿಯಾಗಿರುವ ಈ ಹೊತ್ತಿನಲ್ಲಿ, ವಲಸೆಹೋಗಿ ಬೇರೆ ದೇಶಗಳಲ್ಲಿ ಹೊಂದಿಕೊಳ್ಳುವುದು ಬಲು ಸುಲಭವಾಗಿದೆ. ಸುಲಭವಾಗಿ ಪ್ರಯಾಣಮಾಡಿ, ಬೇಕೆಂದಾಗ ಹಿಂತಿರುಗಿ ಮನೆ ಸೇರಿಕೊಳ್ಳುವುದು ಸುಲಭವಾಗಿರುವ ಈ ಕಾಲಘಟ್ಟದಲ್ಲಿ ವಲಸೆ ಹೊರಡುವುದು, ಉದ್ಯೋಗಕ್ಕಾಗಿ ದೂರದ ದೇಶಕ್ಕೆ ಪ್ರಯಾಣಿಸುವುದು ಅಂತಹ ಬೇಸರದ, ದುಃಖದ ಸಂಗಾತಿಯಾಗಿ ಉಳಿದಿಕೊಂಡಿಲ್ಲ (ಒಂದು ಕಾಲದಲ್ಲಿ ವಿದೇಶ ಪ್ರಯಾಣ ಹೆಮ್ಮೆಯೂ ಹೌದು).

ದೂರದ ಅಮೇರಿಕಾವನ್ನು, ಭಾರತದಿಂದ ಇಪ್ಪತ್ತುನಾಲ್ಕು ಗಂಟೆಗಳ ಒಳಗಾಗಿ ತಲಪಬಹದು. ಒಂದು ದಿನದ ಸಮಯ ತುಂಬಾ ಅನಿಸಿದರು, ಮಾನವನ ಸಾಧನೆಗಳಲ್ಲಿ ಇದೊಂದು ಅದ್ಭುತವೇ ಹೌದು. ಹಿಂದೆ ಹಡಗುಗಳಲ್ಲಿ ತಿಂಗಳುಗಟ್ಟಲೆ ಪ್ರಯಾಣಿಸಿ ಬೇರೆ ಬೇರೆ ದೇಶಗಳನ್ನು ತಲುಪಬೇಕಾಗಿತ್ತು, ಹೀಗೆ ಪ್ರಯಾಣಿಸಿದಾಗ ಸೇರಬೇಕಾಗಿರುವ ಸ್ಥಳ ಸೇರುವ ನಂಬಿಕೆ ಇರುತ್ತಿರಲಿಲ್ಲ. ಈಗ ವಿಮಾನ ಪ್ರಯಾಣ ಪ್ರಯಾಣಗಳಲ್ಲೆಲ್ಲಾ ಅತ್ಯಂತ ಸುರಕ್ಷಿತ ಎಂದು ಸಾಬೀತಾಗಿದೆ.

ಹೊಸ ಸ್ಥಳಕ್ಕೆ ಹೊಂದಿಕೊಳ್ಳಲು ಸ್ವಲ್ಪ ದಿನ ಬೇಕಾಗುತ್ತದೆ, ಅದು ಬೇರೆ ದೇಶವಾದರಂತೂ, ಅಲ್ಲಿನ ವಾತಾವರಣ, ಜನ, ಭಾಷೆ, ಸಂಪ್ರದಾಯ, ಕಾನೂನು ಕಟ್ಟಳೆ, ಊಟ ಮುಂತಾದವುಗಳ ಅರಿವು ಬೆಳೆಸಿಕೊಳ್ಳಲು ವರ್ಷಗಳೇ ಆಗಬಹದು.

ಭಾರತೀಯರಿಗೆ, ಅಮೆರಿಕಾದಲ್ಲಿ ಎಲ್ಲವೂ ತಿರುವು ಮುರುವು ಅನಿಸುತ್ತದೆ. ಭಾರತದಲ್ಲಿ ಕೀಪ್ ಲೆಫ್ಟ್ ಎಂದರೆ ಇಲ್ಲಿ ಕೀಪ್ ರೈಟ್, ಇಲ್ಲಿ ಲೈಟ್ ಆನ್ ಮಾಡಬೇಕಾದರೆ ಸ್ವಿಟ್ಚನ್ನು ಮೇಲೆ ಹಾಕಬೇಕು, ಭಾರತದಲ್ಲಿ ಕೆಳಗೆ ಹೀಗೆ ಅನೇಕಾನೇಕಗಳು. ಮೊದಲು ಕಾರಿನಲ್ಲಿ ಕುಳಿತಾಗ, ಡ್ರೈವ್ ಮಾಡುತ್ತಿರುವವರು ಬಲ ತಿರುವು ತೆಗೆದುಕೊಂಡಾಗ, ಗಾಬರಿಯಾಗುತ್ತದೆ, ರಾಂಗ್ ಸೈಡ್ ಹೋಗುತ್ತಿದ್ದಾರೆ ಎಂದು. ಎಲ್ಲಿ ಎದುರಿನ ಕಾರು ಬಂದು ಗುದ್ದುವುದೋ ಎಂದು.

ಎಲ್ಲಿ ನೋಡಿದರೂ ಕಾರುಗಳದೇ ಕಾರುಬಾರು, ಯಾವುದೇ ಸ್ಥಳವೂ ಹತ್ತಿರವಲ್ಲ, ತರಕಾರಿಗೂ, ಹಾಲಿಗೂ ಕಾರಲ್ಲೇ ಹೋಗಬೇಕು ಅಷ್ಟು ದೂರ. ನಡೆದರೆ ಅರ್ಧಗಂಟೆ ಘಂಟೆ ನಡೆಯಬೇಕು, ಆಟೋಗಳಿಲ್ಲ. ಸಿಟಿಗಳಲ್ಲಿ ಸ್ವಲ್ಪ ಹತ್ತಿರ ಇರಬಹುದು. ಅಷ್ಟುದೂರ ನಡೆದು ಭಾರ ಹೊತ್ತುಕೊಂಡು ನಡೆದು ಬರೆದು ಬೇಕಾಗಿತ್ತು. ಬೇಸಿಗೆಯಲ್ಲಿ ಸರಿ ಆದರೆ ಚಳಿಗಾಲದಲ್ಲಿ ಹಿಂಸೆ. ಅದರಲ್ಲೂ ಹಿಮಬಿದ್ದಾಗ ಮಕ್ಕಳಿಗೆ ಖುಷಿಯಾಗುತ್ತಿತ್ತೇನೋ ಆದರೆ ದೊಡ್ಡವರಿಗೆ ಹೆಜ್ಜೆಯಿಡುವಾಗಲೆಲ್ಲ ಕಾಲು ಜಾರುತ್ತಾ ನಡೆಯಲಾರದೇ ಎಲ್ಲಿ ಬೀಳುತ್ತೇವೋ ಎಂದು ಭಯದಿಂದ ನಡೆಯಬೇಕಾಗುತ್ತದೆ.

ಭಾರತಕ್ಕೆ ಅಮೇರಿಕಾದಿಂದ ಫೋನ್ ಮಾಡಬೇಕಾದರೆ. ೦೧೧-೯೧ ಒತ್ತಬೇಕು. ೯೧ ಭಾರತದ ಫೋನ್ ಕೋಡ್, ನಾವು ಎಷ್ಟೋ ಸಲ ೯೧೧ ಒತ್ತಿದ್ದೇವೆ, ೯೧೧ ಅಮೆರಿಕಾದ ಹೆಲ್ಪ್ ಲೈನ್, ಪೊಲೀಸರು ಆ ನಂಬರ್‌ಗೆ ಫೋನ್ ಮಾಡಿದರೆ ಶೀಘ್ರ ಬಂದು ವಿಚಾರಿಸುತ್ತಾರೆ.

ಭಾರತೀಯರಿಗೆ, ಅಮೆರಿಕಾದಲ್ಲಿ ಎಲ್ಲವೂ ತಿರುವು ಮುರುವು ಅನಿಸುತ್ತದೆ. ಭಾರತದಲ್ಲಿ ಕೀಪ್ ಲೆಫ್ಟ್ ಎಂದರೆ ಇಲ್ಲಿ ಕೀಪ್ ರೈಟ್, ಇಲ್ಲಿ ಲೈಟ್ ಆನ್ ಮಾಡಬೇಕಾದರೆ ಸ್ವಿಟ್ಚನ್ನು ಮೇಲೆ ಹಾಕಬೇಕು, ಭಾರತದಲ್ಲಿ ಕೆಳಗೆ ಹೀಗೆ ಅನೇಕಾನೇಕಗಳು. ಮೊದಲು ಕಾರಿನಲ್ಲಿ ಕುಳಿತಾಗ, ಡ್ರೈವ್ ಮಾಡುತ್ತಿರುವವರು ಬಲ ತಿರುವು ತೆಗೆದುಕೊಂಡಾಗ, ಗಾಬರಿಯಾಗುತ್ತದೆ, ರಾಂಗ್ ಸೈಡ್ ಹೋಗುತ್ತಿದ್ದಾರೆ ಎಂದು. ಎಲ್ಲಿ ಎದುರಿನ ಕಾರು ಬಂದು ಗುದ್ದುವುದೋ ಎಂದು.

ಒಮ್ಮೆ ಹೀಗಾಯಿತು, ಹೊಸದಾಗಿ ಅಮೇರಿಕಾಗೆ ನಾನು ತಪ್ಪಾಗಿ ೦೧೧-೯೧೧ ಒತ್ತಿಬಿಟ್ಟೆ. ಐದು ನಿಮಿಷಕ್ಕೆ ಡೋರ್ ಬೆಲ್ ರಿಂಗ್ ಆಯಿತು. ಹೋಗಿ ಬಾಗಿಲು ತೆಗೆದರೆ, ಇಬ್ಬರು ಪೊಲೀಸ್, ಭಾರತದಲ್ಲಿ ಪೊಲೀಸ್ ಕಂಡರೆ ಭಯವಾಗುತ್ತಿತ್ತು, ಇಲ್ಲಿ ಇನ್ನೂ ಹೆಚ್ಚು ಭಯವಾಯಿತು, “ಎಲ್ಲಾ ಸರಿ ಇದೆಯಾ” ಎಂದು ಕೇಳಿದರು. ತಲೆ ಮೇಲೆ ಕೆಳಗೆ ಆಡಿಸಿದೆ. “ನಾವು ಒಳಗೆ ಬರಬಹುದೇ” ಎಂದರು. ನಾನು ದಾರಿಬಿಟ್ಟೆ. ನಮಗೆ ಕಂಪನಿ ಆ ಮನೆಯನ್ನು ಕೊಟ್ಟಿತ್ತು. ನಾವು ಐದು ಜನ ಅಲ್ಲಿದ್ದೆವು. ಪೋಲೀಸ್ ಬಂದಾಗ ಎಲ್ಲರೂ ಹಾಲಿಗೆ ಬಂದರು, ನಮ್ಮನ್ನು ನೋಡಿದ ಪೊಲೀಸ್ ಜೋರಾಗಿ ನಗಲು ಸುರು ಮಾಡಿದರು. ಯಾಕೆ ಎಂದು ನಮಗೆ ಗೊತ್ತಾಗಲೇ ಇಲ್ಲಾ, ಏನಾಯಿತು ಎಂದು ಮುಖ ಮುಖ ಮಾಡಿಕೊಂಡೆವು. ಕೊನೆಗೆ “ಅದು ಏನು” ಎಂದು, ನಮ್ಮ ಲುಂಗಿಗಳ ಕಡೆ ಕೈ ತೋರಿಸಿ ಕೇಳಿದರು. ನಾವು ಐದು ಜನ ಐದು ಬೇರೆ ಬಣ್ಣದ ಲುಂಗಿ ಉಟ್ಟಿದ್ದೆವು. ನಾವು ನಗುತ್ತಾ ಅದನ್ನು ಲುಂಗಿ ಎನ್ನುತ್ತಾರೆ ಎಂದು ಲುಂಗಿಯ ಮಹಿಮೆ ಸಾರಿದೆವು. ಅವರು ಮನೆಯಲಿ ಒಂದು ಸುತ್ತು ಹೊಡೆದು ಎಲ್ಲ ಸರಿಯಿದೆ ಎಂದು ಖಾತ್ರಿಮಾಡಿಕೊಂಡು ಹೊರಟುಹೋದರು. ಹೋಗುತ್ತಾ “ಪದೇ ಪದೇ ೯೧೧ ಗೆ ಫೋನ್ ಮಾಡಬೇಡಿ, ಫೈನ್ ಬೀಳುತ್ತೆ” ಎಂದು ಹೇಳಿದರು. ಕೊನೆಗೆ ಒಂದು ದಿನ ಲುಂಗಿಗೆ ತಿಲಾಂಜಲಿ ಇಟ್ಟು ಷಾರ್ಟ್ಸ್‌ಗಳಿಗೆ ಬದಲಾದೆವು.

ಇದಲ್ಲದೆ ನಾವು ಈ ರೆಸ್ಟೋರೆಂಟ್‌ಗಳಿಗೆ ಹೋದಾಗ, ಆರ್ಡರ್ ತೆಗೆದುಕೊಂಡಮೇಲೆ ಟು ಗೋ ಆರ್ ಹಿಯರ್ ಅನ್ನುತ್ತಿದ್ದರು. ಹಾಗೆಂದರೆ ಏನು ಎಂದು ತಿಳಿಯುತ್ತಿರಲಿಲ್ಲ. ಮೊದಲಬಾರಿ ಹಾಗೆಂದರೇನು ತಿಳಿಯದೆ, ಹಾಗೆಯೇ ಹೊರಗಡೆ ಬಂದು ಬಿಟ್ಟಿದ್ದೆವು. ಆಫೀಸ್‌ನಲ್ಲಿ ವಿಚಾರಿಸಿದಾಗ ತಿಳಿಯಿತು. ಟು ಗೋ ಎಂದರೆ ಪಾರ್ಸೆಲ್ ಎಂದೂ, ಹಿಯರ್ ಎಂದರೆ ಅಲ್ಲಿಯೇ ಕುಳಿತು ತಿನ್ನುವುದು ಎಂದು. ಈಗೆಲ್ಲಾ ಇಲ್ಲಿ ಭಾರತದ ರೆಸ್ಟೋರೆಂಟ್ ಗಳು ಸಾಕಷ್ಟಿವೆ, ಊಟಕ್ಕೆ ತೊಂದರೆ ಇಲ್ಲ. ಅದಲ್ಲದೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದೂ ಸುಲಭವಾಗಿದೆ.

ನಮಗೆ ತುಂಬಾ ತೊಂದರೆ ಕೊಟ್ಟಿದ್ದು ಇಲ್ಲಿನ ಇಂಗ್ಲಿಷ್ ಉಚ್ಚಾರಣೆ. ಕೆಲವು ಸಲ ಅರ್ಥವೇ ಆಗುತ್ತಿರಲಿಲ್ಲ. ನಾವು ಮಾತನಾಡುವುದು ಇಲ್ಲಿಯವರಿಗೆ ಅರ್ಥವಾಗುತ್ತಿರಲಿಲ್ಲ. ಫೋನಿನಲ್ಲಿ ಮಾತನಾಡಿದರಂತೋ ಇನ್ನೂ ಅದ್ವಾನ, ಪರಸ್ಪರ ನಿಧಾನವಾಗಿ ಮಾತನಾಡಿ ಎನ್ನಬೇಕಾಗಬೇಕಿತ್ತು. ಎಷ್ಟೋಸಲ ಈ-ಮೇಲ್ ಮಾಡಿ ಎನ್ನುತ್ತಿದ್ದೆವು, ನಾವು ಈ-ಮೇಲ್ ನಲ್ಲಿಯೇ ಸಂಭಾಷಣೆ ನಡೆಸುತಿದ್ದೆವು.

ಉದರ ನಿಮ್ಮಿತ್ತಮ್ ನಾವು ಎಲ್ಲಾ ಕಲಿಯಬೇಕಾಗಿತ್ತು, ಕಲಿತುಕೊಂಡೆವು. ಇದುವರೆಗೂ ನಮಗೆ ಯಾವುದೇ ಕಹಿ ಅನುಭವವಾಗಿಲ್ಲ. ಇಲ್ಲಿಯಜನ ನಮ್ಮನ್ನು ಕಡೆಗಣಿಸಲ್ಲ. ಸಹಾಯ ಮಾಡಿದ್ದಾರೆ.

ಮೊದಮೊದಲು ಬಂದ ಜನ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಓದಲು ಬಂದವರಿಗಂತೂ ರಾತ್ರಿ ಯಾವುದು, ಹಗಲು ಯಾವುದು ಎನ್ನುವುದು ಗೊತ್ತಾಗುವುದಿಲ್ಲ. ಮುಂಜಾನೆ ಹೊರ ಹೊರಟರೆ ಮನೆಗೆ ಬರುವುದು ಮಧ್ಯರಾತ್ರಿ ನಂತರವೇ. ಯಾವುದಾದರೂ ಕೆಫೆಯಲ್ಲೋ, ಡೈನರ್‌ಗಳಲ್ಲೋ ಕೆಲಸಮಾಡಬೇಕಾಗುತ್ತದೆ. ಅಮೇರಿಕ ಎಲ್ಲರಿಗೂ ಅವಕಾಶ ಕೊಡುವುದರಿಂದ, ಕೆಲಸದಲ್ಲಿ ಮೇಲು ಕೀಳು ಎನ್ನುವುದು ಇರದ ಕಾರಣ, ಯಾವ ಕೆಲಸ ಮಾಡಲೂ ಮುಜುಗರವೇನೂ ಆಗುವುದಿಲ್ಲ.

ತುಂಬಾ ಜನ ಭಾರತೀಯರು ಇಲ್ಲಿಗೆ ಬಂದು ಉನ್ನತ ಹುದ್ದೆಗೇರಿದ್ದಾರೆ. ಒಳ್ಳೆಯ, ಸಿರಿಜೀವನ ನಡೆಸುತ್ತಿದ್ದಾರೆ. ಭಾರತೀಯರು ಹಣ ಪೋಲು ಮಾಡುವುದಿಲ್ಲವಾದ್ದರಿಂದ ಒಳ್ಳೆಯ ಮನೆಯಲ್ಲಿ ವಾಸಿಸುತ್ತಾರೆ, ಒಳ್ಳೆಯ ಕಾರಿನಲ್ಲಿ ತಿರುಗುತ್ತಾರೆ. ಇದಕ್ಕೆ ಕಾರಣ ನಾವು ನಮ್ಮ ಜೀವನವನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದು ಇರಬಹದು ಅಥವಾ ಮಹತ್ವಾಕಾಂಶೆಯೂ ಇರಬಹದು. ಭಾರತೀಯರು ಹಣವನ್ನು ಭಾರತಕ್ಕೆ ಕಳಿಸಿಕೊಡುವುದರಿಂದ, ಭಾರತದ ಆರ್ಥಿಕತೆಗೆ ಸಹಾಯವೂ ಆಗುತ್ತಿದೆ.

ಏನೇ ಇದ್ದರೂ ಬೇರುಗಳು ಭಾರತದಲ್ಲಿರುವುದರಿಂದ, ಭಾರತದ ಸೆಳೆತ ಸದಾ ಇರುತ್ತದೆ. ಭಾರತೀಯ ಚಲನಚಿತ್ರಗಳನ್ನು ನೋಡುವುದು, ಭಾರತದ ನ್ಯೂಸ್ ನೋಡುವುದು, ಓದುವುದು, ನಮ್ಮ ಹಬ್ಬಗಳನ್ನು ಆಚರಿಸುವುದು ಹೀಗೆ ಭಾರತಕ್ಕೆ ಹತ್ತಿರವಾಗುವ ಸನ್ನಾಹ ಜರುಗುತ್ತಲೇ ಇರುತ್ತದೆ, ಎಷ್ಟೇ ಆಗಲಿ ಮಾತೃಭೂಮಿ, ತಾಯಿಯ ಮಮತೆಯಂತೆ ಮಧುರವಾಗಿರುತ್ತದೆ ಅಲ್ಲವೇ?

ಮುಂದಿನ ಅಂಕಣಗಳಲ್ಲಿ ಇನ್ನು ಹೆಚ್ಚು ತಿಳಿಯೋಣ. ಜಗತ್ತಿನ ಬೇರೆ ಬೇರೆ ದೇಶಗಳಿಂದ ಅಮೇರಿಕಾಗೆ ವಲಸೆ ಬಂದವರ ಬವಣೆಗಳನ್ನೂ ಅರಿಯೋಣ

About The Author

ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), "ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. "ಲಾಸ್ಟ್ ಲೈಫ್" ಕಥನ ಕವನ ಮತ್ತು "ದ್ವಂದ್ವ" ಕವನ ಸಂಕಲನ ಅಚ್ಚಿನಲ್ಲಿವೆ

4 Comments

  1. ಎಸ್ ಪಿ.ಗದಗ.

    ಅಮೇರಿಕೆಯಲ್ಲಿ ನಮ್ಮವರ ಬದುಕನ್ನು ಅರಿತುಕೊಳ್ಳುವದು ಎಂದೆಂದಿಗೂ ನಮಗೆ ಕುತೂಹಲ ಸಂಗತಿ.ಇನ್ನಷ್ಟು ಬದುಕು ಬವಣೆಯ ಲೇಖನ ಮೂಡಿ ಬರಲಿ.ಅಭಿನಂದನೆಗಳು.

    Reply
    • ಎಂ.ವಿ. ಶಶಿಭೂಷಣ ರಾಜು

      ಓದಿ ಪ್ರತಿಕ್ರಿಯೆ ನೀಡಿರುವುದಕ್ಕೆ ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

      ಎಂ.ವಿ. ಶಶಿಭೂಷಣ ರಾಜು

      Reply
  2. ಮೋಹನ್ ಕುಮಾರ್

    ಸರಳ ಬರಹ. ಚೆನ್ನಾಗಿದೆ.

    Reply
    • Shashibhushana raju

      ಧನ್ಯವಾದಗಳು ಸರ್

      Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ