ಗೊಂಬೆಗಳು ನಟಿಸುವುದಿಲ್ಲ; ಆದ್ದರಿಂದಲೇ ಅವಕ್ಕೆ ಸಹಜ ಸೌಂದರ್ಯ ಇರುತ್ತದೆ. ಮನುಷ್ಯರು ಸ್ವಪ್ರಜ್ಞೆಯುಳ್ಳ ಜೀವಿಗಳಾದ ಕಾರಣ ಅವರ ಈ ಸ್ವಪ್ರಜ್ಞೆ ಸಹಜ ಸೌಂದರ್ಯಕ್ಕೆ ಅಡ್ಡಿಯಾಗಿದೆ. ಆದರೆ ಈ ಪ್ರಜ್ಞೆ ಪೂರ್ಣಜ್ಞಾನವಲ್ಲ; ಅಪೂರ್ಣವಾದುದು.ಮನುಷ್ಯನು ದೈವತ್ವ ತಲಪಿದರೆ ಮಾತ್ರವೇ ಮತ್ತೆ ಸಹಜತೆಗೆ, ಮುಗ್ಧತೆಗೆ, ಸೌಂದರ್ಯಕ್ಕೆ ಮರಳುವುದು ಸಾಧ್ಯ.
ಜರ್ಮನಿಯ ಹೆಸರಾಂತ ನಾಟಕಕಾರ, ಕವಿ, ಕತೆಗಾರ ಹೈನ್ರಿಕ್ ವಾನ್ ಕ್ಲೈಸ್ಟ್ ನ ಬರೆದ ಕಥನ ರೂಪದ ಬರಹವೊಂದನ್ನು  ಅನುವಾದಿಸಿದ್ದಾರೆ ಕನ್ನಡದ ಖ್ಯಾತ ಕವಿ ಡಾ. ಕೆ.ವಿ. ತಿರುಮಲೇಶ್.

 

ಅಲ್ಪಾವಧಿಯ ಜೀವನ ನಡೆಸಿದ ದುರದೃಷ್ಟ ಲೇಖಕರಲ್ಲಿ ಕ್ಲೈಸ್ಟ್ ಒಬ್ಬ. ಒಟ್ಟು ಮೂವತ್ತೈದು ವರ್ಷಗಳ ಜೀವಿತಾವಧಿಯಲ್ಲಿ ಅವನು ಕೊನೆಯ ಒಂಭತ್ತು ವರ್ಷಗಳನ್ನಷ್ಟೇ ಬರವಣಿಗೆಗೆ ಮೀಸಲಿರಿಸಿದ್ದು. ಆದರೆ ಆ ಅವಧಿಯಲ್ಲಿ ಅವನು ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ. ತಾನು ಸ್ವತಃ ಒಬ್ಬ ರೊಮ್ಯಾಂಟಿಕ್ ಆಗಿದ್ದರೂ ತನ್ನ ಕಾಲದ ಜರ್ಮನ್ ರೊಮ್ಯಾಂಟಿಸಿಸಮಿನ ವಿರುದ್ಧ ಅವನು ಸಿಡಿದು ನಿಂತ. ಪ್ರಕೃತಿಯನ್ನು ಆರಾಧಿಸುವುದಕ್ಕಿಂತ ಮನುಷ್ಯನನ್ನು ಮನುಷ್ಯನ ಸಂದಿಗ್ಧ ಸ್ಥಿತಿಯಲ್ಲಿ ಚಿತ್ರಿಸುವುದು ಅವನ ಮುಖ್ಯ ಆಸಕ್ತಿಯಾಗಿತ್ತು. ಗೊಂಬೆಗಳ ನಾಟ್ಯರಂಗದಲ್ಲೂ ಇಂಥದೇ ಒಂದು ತಾತ್ವಿಕ ಪ್ರಶ್ನೆ ಅಡಗಿದೆ: ಗೊಂಬೆಗಳು ನಟಿಸುವುದಿಲ್ಲ; ಆದ್ದರಿಂದಲೇ ಅವಕ್ಕೆ ಸಹಜ ಸೌಂದರ್ಯ ಇರುತ್ತದೆ. ಮನುಷ್ಯರು ಸ್ವಪ್ರಜ್ಞೆಯುಳ್ಳ ಜೀವಿಗಳಾದ ಕಾರಣ ಅವರ ಈ ಸ್ವಪ್ರಜ್ಞೆ ಸಹಜ ಸೌಂದರ್ಯಕ್ಕೆ ಅಡ್ಡಿಯಾಗಿದೆ. ಆದರೆ ಈ ಪ್ರಜ್ಞೆ ಪೂರ್ಣಜ್ಞಾನವಲ್ಲ; ಅಪೂರ್ಣವಾದುದು. ಮನುಷ್ಯನು ದೈವತ್ವ ತಲಪಿದರೆ ಮಾತ್ರವೇ ಮತ್ತೆ ಸಹಜತೆಗೆ, ಮುಗ್ಧತೆಗೆ, ಸೌಂದರ್ಯಕ್ಕೆ ಮರಳುವುದು ಸಾಧ್ಯ. ಒಂದೋ ಗೊಂಬೆಯಾಗಬೇಕು, ಅದು ಸಾಧ್ಯವಿಲ್ಲ; ಇಲ್ಲವೇ ದೇವರಾಗಬೇಕು ಅದು ಸಾಧ್ಯವೇ?

ಅತ್ಯಂತ ಅಶಾಂತ ಜೀವನವನ್ನು ಬದುಕಿದ ಕ್ಲೈಸ್ಟ್ ಈ ಲೇಖನವನ್ನು ಬರೆದುದು ೧೮೧೦ರಲ್ಲಿ. ಅದರ ಮುಂದಿನ ವರ್ಷದಲ್ಲೇ ಅವನು ಆತ್ಮಹತ್ಯೆ ಮಾಡಿಕೊಂಡ. ಮನುಷ್ಯ ತನ್ನನ್ನು ತಾನಾಗಲಿ, ತನ್ನ ಸುತ್ತ ಮುತ್ತಲ ಸಂಗತಿಗಳನ್ನಾಗಲಿ ಅರ್ಥಮಾಡಿಕೊಳ್ಳಲಾರ ಎಂದ ಮೇಲೆ, ಅವನಿಗೆ ಸರಿ ಯಾವುದು, ತಪ್ಪು ಯಾವುದು ಎಂದು ತಿಳಿಯುವುದು ಹೇಗೆ, ಅಂಥ ಜೀವಿಗಳನ್ನು ದೇವರಾದರೂ ಹೊಣೆಯಾಗಿಸುವುದು ಹೇಗೆ ಎಂದು ಕ್ಲೈಸ್ಟ್ ಒಂದು ಪತ್ರದಲ್ಲಿ ಕೇಳುತ್ತಾನೆ. ಇನ್ನು ಮುಂದೆ ನೀವು ಓದಲಿರುವುದು ಆತನ ಕಥನ ರೂಪದ ಬರಹವೊಂದರ ಕನ್ನಡ ಅನುವಾದ

*******

(ಕಲಾವಿದ ಹೆನ್ರಿ ಮ್ಯಾಟಿಸ್ ನ ಕಲಾಕೃತಿ)

೧೮೦೧ರ ಚಳಿಗಾಲದ ಒಂದು ಸಂಜೆ ಪಾರ್ಕೊಂದರಲ್ಲಿ ನನಗೆ ಒಬ್ಬ ಹಳೆಯ ಮಿತ್ರನ ಭೇಟಿಯಾಯಿತು. ಅವನಿಗೆ ಈಚೆಗೆ ಸ್ಥಳೀಯ ರಂಗಭೂಮಿಯೊಂದರಲ್ಲಿ ನರ್ತಕನ ಕೆಲಸ ದೊರಕಿತ್ತು, ಹಾಗೂ ಪ್ರೇಕ್ಷಕರಿಂದ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ. ಅವನನ್ನು ಒಂದೆರಡು ಸಲ ಗೊಂಬೆ ನಾಟ್ಯರಂಗದಲ್ಲಿ ಕಂಡು ನಾನು ಅಚ್ಚರಿಗೊಂಡುದರ ಬಗ್ಗೆ ಹೇಳಿದೆ. ಈ ಗೊಂಬೆ ನಾಟ್ಯರಂಗವನ್ನು ಮಾರ್ಕೆಟ್ ಜಾಗದಲ್ಲಿ ಸ್ಥಾಪಿಸಿದ್ದರು. ಹಾಡು ಮತ್ತು ನೃತ್ಯಗಳನ್ನು ಸೇರಿಸಿಕೊಂಡ ಪ್ರಹಸನಗಳಿಂದ ಸಾರ್ವಜನಿಕರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ. ಅವನಂದ, ಈ ಮೂಕ ಗೊಂಬೆಗಳ ಆಂಗಿಕಗಳು ತನಗೆ ತುಂಬಾ ಖುಷಿ ಕೊಡುತ್ತವೆ, ಮತ್ತು ಯಾವನೇ ನರ್ತಕ ತನ್ನ ಕಲೆಯನ್ನು ಪರಿಪೂರ್ಣಗೊಳಿಸಬೇಕೆಂದಿದ್ದರೆ ಇವುಗಳಿಂದ ಬಹಳಷ್ಟನ್ನು ಕಲಿಯಬಹುದು ಎಂದ.

ಅವನಿದನ್ನು ಹೇಳಿದ ರೀತಿಯಿಂದ ನನಗನಿಸಿದ್ದೆಂದರೆ, ಇದೇನೂ ಆ ಕ್ಷಣಕ್ಕೆ ಅವನ ಮನಸ್ಸಿಗೆ ಬಂದ ಮಾತಾಗಿರಲಿಲ್ಲ ಎನ್ನುವುದು. ಆದ್ದರಿಂದ ಅವನ ಈ ಆಶ್ಚರ್ಯಕರ ಮನೋವಿಶ್ವಾಸಕ್ಕೆ ಕಾರಣಗಳನ್ನು ಕೇಳಲೆಂದು ನಾನಲ್ಲಿ ಕುಳಿತುಕೊಂಡೆ.

ಈ ಗೊಂಬೆಗಳ (ಅವುಗಳಲ್ಲೂ ಸಣ್ಣ ಗೊಂಬೆಗಳ) ನಾಟ್ಯ ಚಲನೆಗಳು ನಿಜವಾಗಿಯೂ ನನಗೆ ಸೊಗಸಾಗಿ ಕಂಡು ಬರುವುದಿಲ್ಲವೇ ಎಂದು ನನ್ನನ್ನು ವಿಚಾರಿಸಿದ. ಇದನ್ನು ನಾನು ನಿರಾಕರಿಸುವಂತಿರಲಿಲ್ಲ. ಟೆನಿಯೆ (Teniers) ಕೂಡ ನಾಲ್ಕು ಜನ ರೈತರು ತೀವ್ರಗತಿಯಲ್ಲಿ ರೋಂಡೋ ನಾಟ್ಯ ಮಾಡುವುದನ್ನು ಇದಕ್ಕಿಂತ ಹೆಚ್ಚು ಕೋಮಲವಾಗಿ ಚಿತ್ರಿಸಲಾರ.

ಅವನಿಗೆ ಈಚೆಗೆ ಸ್ಥಳೀಯ ರಂಗಭೂಮಿಯೊಂದರಲ್ಲಿ ನರ್ತಕನ ಕೆಲಸ ದೊರಕಿತ್ತು, ಹಾಗೂ ಪ್ರೇಕ್ಷಕರಿಂದ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ. ಅವನನ್ನು ಒಂದೆರಡು ಸಲ ಗೊಂಬೆ ನಾಟ್ಯರಂಗದಲ್ಲಿ ಕಂಡು ನಾನು ಅಚ್ಚರಿಗೊಂಡುದರ ಬಗ್ಗೆ ಹೇಳಿದೆ. ಈ ಗೊಂಬೆ ನಾಟ್ಯರಂಗವನ್ನು ಮಾರ್ಕೆಟ್ ಜಾಗದಲ್ಲಿ ಸ್ಥಾಪಿಸಿದ್ದರು. ಹಾಡು ಮತ್ತು ನೃತ್ಯಗಳನ್ನು ಸೇರಿಸಿಕೊಂಡ ಪ್ರಹಸನಗಳಿಂದ ಸಾರ್ವಜನಿಕರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ. ಅವನಂದ, ಈ ಮೂಕ ಗೊಂಬೆಗಳ ಆಂಗಿಕಗಳು ತನಗೆ ತುಂಬಾ ಖುಷಿ ಕೊಡುತ್ತವೆ, ಮತ್ತು ಯಾವನೇ ನರ್ತಕ ತನ್ನ ಕಲೆಯನ್ನು ಪರಿಪೂರ್ಣಗೊಳಿಸಬೇಕೆಂದಿದ್ದರೆ ಇವುಗಳಿಂದ ಬಹಳಷ್ಟನ್ನು ಕಲಿಯಬಹುದು ಎಂದ.

ಈ ಪುತ್ಥಳಿಗಳ ಸೂತ್ರರಚನೆಯ ಬಗ್ಗೆ ಕೇಳಿದೆ. ಸೂತ್ರಧಾರನ ಬೆರಳುಗಳಿಗೆ ದಾರಗಳ ಮಾಯಾಜಾಲವನ್ನೇ ಸಿಕ್ಕಿಸದೆ ಈ ಪ್ರತ್ಯ ಪ್ರತ್ಯೇಕ ಅಂಗಗಳನ್ನೂ ಅಂಗುಲಿಗಳನ್ನೂ ನಾಟ್ಯ ಲಯಕ್ಕೆ ಸರಿಯಾಗಿ ಚಲಿಸುವುದು ಹೇಗೆ ಸಾಧ್ಯ ಎನ್ನುವುದನ್ನು ನನಗೆ ತಿಳಿಯಬೇಕಾಗಿತ್ತು. ಪ್ರತಿಯೊಂದು ಭಾಗವನ್ನೂ ಸೂತ್ರಧಾರ ಬಿಡಿಬಿಡಿಯಾಗಿ ಇರಿಸಿದಂತೆ ಮತ್ತು ನಾಟ್ಯದ ವಿವಿಧ ಘಟ್ಟಗಳಲ್ಲಿ ಚಲಿಸುವಂತೆ ನಾನು ಭಾವಿಸಬಾರದು ಎನ್ನುವುದು ಅವನ ಉತ್ತರವಾಗಿತ್ತು. ಪ್ರತಿಯೊಂದು ಚಲನೆಗೂ ಅದರದೇ ಗುರುತ್ವಾಕರ್ಷಣ ಕೇಂದ್ರವಿರುತ್ತದೆ; ಗೊಂಬೆಗಳೊಳಗೆ ಇದನ್ನು ನಿಯಂತ್ರಿಸಿದರೆ ಸಾಕು, ಎಂದ ಅವನು. ಜೋತಾಡುವ ಅಂಗಗಳು ಆಮೇಲೆ ಮುಂದಿನ ಸಹಾಯವಿಲ್ಲದೆ ಯಾಂತ್ರಿಕವಾಗಿ ಚಲಿಸತೊಡಗುತ್ತವೆ. ಈ ಚಲನೆ ತುಂಬಾ ಸರಳ, ಎಂದ. ಗುರುತ್ವಾಕರ್ಷಣ ಕೇಂದ್ರವು ನೇರ ರೇಖೆಯಲ್ಲಿ ಸಾಗಿದಾಗ, ಅವು ಬಳುಕುಗಳನ್ನು ಸೂಚಿಸುತ್ತವೆ. ಹಲವು ಸಲ ಸುಮ್ಮನೆ ಮನ ಬಂದಂತೆ ಆಡಿಸಿದಾಗ, ಗೊಂಬೆ ನಾಟ್ಯವನ್ನು ಹೋಲುವ ಒಂದು ತರದ ಲಯಬದ್ಧವಾದ ಚಲನೆಗೆ ತೊಡಗುತ್ತದೆ.

ತಾನು ಗೊಂಬೆ ನಾಟ್ಯರಂಗದಿಂದ ಗಳಿಸಿಕೊಂಡೆನೆಂದು ಅವನು ಹೇಳಿದ ಖುಷಿಯ ಮೇಲೆ ಈ ಮಾತು ಸ್ವಲ್ಪ ಬೆಳಕು ಚೆಲ್ಲಿದಂತೆ ನನಗೆ ಅನಿಸಿತು, ಆದರೆ ಇದರಿಂದ ಅವನು ಭಟ್ಟಿಯಿಳಿಸಬಹುದಾದ ತಾತ್ಪರ್ಯಗಳನ್ನು ಊಹಿಸುವುದರಿಂದ ನಾನು ದೂರವೇ ಇದ್ದೆ.

ನಾನವನನ್ನು ಕೇಳಿದೆ, ಈ ಗೊಂಬೆಗಳನ್ನು ಆಡಿಸುವ ಸೂತ್ರಧಾರ ತಾನಾಗಿಯೇ ಒಬ್ಬ ನರ್ತಕನಾಗಿರಬೇಕೇ, ಅಥವಾ ಅವನಿಗೆ ನೃತ್ಯದಲ್ಲಿ ಕನಿಷ್ಠ ಸೌಂದರ್ಯ ಪ್ರಜ್ಞೆಯಾದರೂ ಇರಬೇಡವೇ ಎಂದು. ಕೆಲಸವೊಂದು ತಾಂತ್ರಿಕವಾಗಿ ಸುಲಭವಾಗಿದ್ದರೆ ಅದರ ಅರ್ಥ ಸ್ವಲ್ಪವೂ ಸಂವೇದನೆಯಿಲ್ಲದೆ ಅದನ್ನು ಮಾಡಬಹುದೆಂದು ಅಲ್ಲ ಎನ್ನುವುದು ಅವನ ಉತ್ತರವಾಗಿತ್ತು. ಗುರುತ್ವಾಕರ್ಷಣ ಶಕ್ತಿಯ ಕೇಂದ್ರ ಅನುಸರಿಸಬೇಕಾದ ಗೆರೆ ತುಂಬಾ ಸರಳವೆನ್ನುವುದು ನಿಜ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನೇರವೂ ಆಗಿರುತ್ತದೆ ಎನ್ನುವುದು ಅವನ ನಂಬಿಕೆಯಾಗಿತ್ತು. ಅದು ಬಾಗಿದಾಗ ಅದರ ವಕ್ರತೆಯ ತತ್ವ ಕಡಿಮೆ ಪಕ್ಷ ಮೊದಲನೆ, ಮತ್ತು ಹೆಚ್ಚಿನ ಪಕ್ಷ ಎರಡನೆ, ಮಟ್ಟದ್ದಾಗಿರುತ್ತದೆ. ಈ ಎರಡನೆ ಸಂದರ್ಭದಲ್ಲಿಯೂ, ಗೆರೆಯು ವಿಷಮ ವೃತ್ತದ್ದಾಗಿರುತ್ತದೆ, ಮನುಷ್ಯ ದೇಹಕ್ಕೆ ಸಹಜವಾದ ಚಲನೆ ಅದು, ದೇಹದಲ್ಲಿ ಸಂದಿಗಳಿರುವ ಕಾರಣ, ಇದು ಸೂತ್ರಧಾರನಿಂದ ಯಾವುದೇ ದೊಡ್ಡ ಕೌಶಲ್ಯವನ್ನು ಅಪೇಕ್ಷಿಸುವುದಿಲ್ಲ. ಆದರೆ ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ಈ ಗೆರೆಯೊಂದು ಭಾರೀ ನಿಗೂಢತೆಯುಳ್ಳದ್ದಾಗಿ ತೋರಬಹುದು. ಇದು ನರ್ತಕನ ಆತ್ಮ ತೆಗೆದುಕೊಂಡ ದಾರಿಯಲ್ಲದೆ ಇನ್ನೇನಲ್ಲ. ಗೊಂಬೆಯ ಗುರುತ್ವಾಕರ್ಷಣ ಕೇಂದ್ರದಲ್ಲಿ ಸೂತ್ರಧಾರ ತನ್ನನ್ನು ತಾನು ಇರಿಸಿಕೊಳ್ಳದೆ ಇದನ್ನು ಗ್ರಹಿಸುವುದು ಸಾಧ್ಯವಾಗದು. ಬೇರೆ ಮಾತಿನಲ್ಲಿ ಹೇಳುವುದಾದರೆ, ಸೂತ್ರಧಾರನೂ ನಾಟ್ಯವಾಡುತ್ತಾನೆ.

ನಾನಂದೆ, ಸೂತ್ರಧಾರನ ಪಾತ್ರ, ಈ ಇಡೀ ವಿಷಯದಲ್ಲಿ, ಭಾವರಹಿತವಾಗಿ ಮಾಡಬಹುದಾದ್ದು ಒಂದು ದೊಡ್ಡ ಸಂಗೀತ ಪೆಟ್ಟಿಗೆಯ ಬಿರಡೆ ತಿರುಗಿಸಿದಂತೆ ಎನ್ನುವುದು ನನಗೆ ತಿಳಿದು ಬಂದ ಮಾತು ಎಂದು. ಅಲ್ಲವೇ ಅಲ್ಲ, ಎಂದ ಆತ. ನಿಜವಾಗಿ ಹೇಳುವುದಿದ್ದರೆ ಸೂತ್ರಧಾರನ ಬೆರಳುಗಳ ಚಲನೆಗಳಿಗೂ ಅವಕ್ಕೆ ಕಟ್ಟಿದ ಗೊಂಬೆಗಳ ಚಲನೆಗಳಿಗೂ ಒಂದು ಸೂಕ್ಷ್ಮ ಸಂಬಂಧವಿದೆ, ಅಂಕೆಗಳಿಗೂ ಅವುಗಳ ಲೋಗರಿದ ಮುಗಳಿಗೂ ಇರುವ ಸಂಬಂಧದಂತೆ, ಅಥವಾ ಅಸಿಂಪ್ಟೋಟಿಗೂ (asymptote) ಪಾರಾಬೋಲಕ್ಕೂ (parabola) ಇರುವ ಸಂಬಂಧದಂತೆ. ಆದರೂ ಗೊಂಬೆಗಳಿಂದ ಮನುಷ್ಯನ ಇಚ್ಛಾಶಕ್ತಿಯ ಈ ಕೊನೆಯ ಗುರುತನ್ನು ತೆಗೆದು ಹಾಕುವುದು ಸಾಧ್ಯ, ಮತ್ತು ಅವುಗಳ ನೃತ್ಯವನ್ನು ಪೂರ್ತಿಯಾಗಿ ಯಾಂತ್ರಿಕ ಕ್ಷೇತ್ರಕ್ಕೆ ದಾಟಿಸುವುದು ಸಾಧ್ಯ; ಅಲ್ಲದೆ, ನಾನು ಸೂಚಿಸಿದಂತೆ, ಈ ನಾಟ್ಯವನ್ನು ತಿರುಗಣೆ ತಿರುಗಿಸಿದಂತೆ ನಿರ್ಮಿಸುವುದು ಸಾಧ್ಯ ಎನ್ನುವುದು ಅವನ ವಿಶ್ವಾಸವಾಗಿತ್ತು.

ನಾನವನನ್ನು ಕೇಳಿದೆ, ಈ ಗೊಂಬೆಗಳನ್ನು ಆಡಿಸುವ ಸೂತ್ರಧಾರ ತಾನಾಗಿಯೇ ಒಬ್ಬ ನರ್ತಕನಾಗಿರಬೇಕೇ, ಅಥವಾ ಅವನಿಗೆ ನೃತ್ಯದಲ್ಲಿ ಕನಿಷ್ಠ ಸೌಂದರ್ಯ ಪ್ರಜ್ಞೆಯಾದರೂ ಇರಬೇಡವೇ ಎಂದು. ಕೆಲಸವೊಂದು ತಾಂತ್ರಿಕವಾಗಿ ಸುಲಭವಾಗಿದ್ದರೆ ಅದರ ಅರ್ಥ ಸ್ವಲ್ಪವೂ ಸಂವೇದನೆಯಿಲ್ಲದೆ ಅದನ್ನು ಮಾಡಬಹುದೆಂದು ಅಲ್ಲ ಎನ್ನುವುದು ಅವನ ಉತ್ತರವಾಗಿತ್ತು. ಗುರುತ್ವಾಕರ್ಷಣ ಶಕ್ತಿಯ ಕೇಂದ್ರ ಅನುಸರಿಸಬೇಕಾದ ಗೆರೆ ತುಂಬಾ ಸರಳವೆನ್ನುವುದು ನಿಜ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನೇರವೂ ಆಗಿರುತ್ತದೆ ಎನ್ನುವುದು ಅವನ ನಂಬಿಕೆಯಾಗಿತ್ತು. ಅದು ಬಾಗಿದಾಗ ಅದರ ವಕ್ರತೆಯ ತತ್ವ ಕಡಿಮೆ ಪಕ್ಷ ಮೊದಲನೆ, ಮತ್ತು ಹೆಚ್ಚಿನ ಪಕ್ಷ ಎರಡನೆ, ಮಟ್ಟದ್ದಾಗಿರುತ್ತದೆ. ಈ ಎರಡನೆ ಸಂದರ್ಭದಲ್ಲಿಯೂ, ಗೆರೆಯು ವಿಷಮ ವೃತ್ತದ್ದಾಗಿರುತ್ತದೆ, ಮನುಷ್ಯ ದೇಹಕ್ಕೆ ಸಹಜವಾದ ಚಲನೆ ಅದು, ದೇಹದಲ್ಲಿ ಸಂದಿಗಳಿರುವ ಕಾರಣ, ಇದು ಸೂತ್ರಧಾರನಿಂದ ಯಾವುದೇ ದೊಡ್ಡ ಕೌಶಲ್ಯವನ್ನು ಅಪೇಕ್ಷಿಸುವುದಿಲ್ಲ.

ಇಂಥ ಪಾಮರ ವರ್ಗದ ಕಲಾರೂಪಕ್ಕೆ ಅವನು ಇಷ್ಟೊಂದು ಪ್ರಾಧಾನ್ಯ ನೀಡುವುದನ್ನು ಕಂಡು ನನಗೆ ಪರಮಾಶ್ಚರ್ಯವಾಗಿದೆ ಎಂದೆ ನಾನು. ಅದಕ್ಕೆ ಉನ್ನತ ಬೆಳವಣಿಗೆಯ ಸಾಧ್ಯತೆಯಿದೆ ಎಂದು ಅವನು ತಿಳಿದುಕೊಂಡ ಕಾರಣಕ್ಕಷ್ಟೇ ಅಲ್ಲ, ಅವನು ಸ್ವತಃ ಈ ಗುರಿ ಸಾಧಿಸಲು ಶ್ರಮಿಸುತ್ತಿರುವಂತೆ ತೋರಿದ್ದಕ್ಕೆ ಕೂಡ.

ಅವನು ನಸುನಕ್ಕ. ತನ್ನ ಮನಸ್ಸಿನಲ್ಲಿರುವ ಗುಣಗಳುಳ್ಳ ಗೊಂಬೆಯೊಂದನ್ನು ತಯಾರಿಸುವ ಕುಶಲಕರ್ಮಿಯೊಬ್ಬ ಸಿಕ್ಕಿದರೆ ತಾನು ಅದರಿಂದ ನಾಟ್ಯವೊಂದನ್ನು ಆಡಿಸಬಲ್ಲೆ ಎಂಬ ಆತ್ಮವಿಶ್ವಾಸ ಅವನಿಗಿತ್ತು; ತಾನಾಗಲಿ, ತನ್ನ ಸಮಕಾಲೀನ ಇತರ ಕುಶಲ ನರ್ತಕರಾಗಲಿ ಸರಿದೂಗಲಾರದ ನಾಟ್ಯ ಅದು, ಸ್ವಯಂ ಮದಾಂ ವೆಸ್ಟ್ರಿಸ್ ಸಹಿತ, ಎಂಬ ಭರವಸೆ ತನಗಿದೆ ಎಂದ.

‘ನೀನು ಕೇಳಿದ್ದೀಯ?’ ಎಂದ, ನಾನು ಮೌನವಾಗಿ ನೆಲ ನೋಡುತ್ತಿದ್ದಂತೆ. ‘ಇಂಗ್ಲಿಷ್ ಕುಶಲಕರ್ಮಿಗಳು ಕಾಲು ಕಳಕೊಂಡ ನತದೃಷ್ಟರಿಗೋಸ್ಕರ ತಯಾರು ಮಾಡುವ ಕೃತಕ ಕಾಲುಗಳ ಬಗ್ಗೆ?’ ನಾನು ಕೇಳಿಲ್ಲ ಎಂದೆ. ನಾನು ಎಂದೂ ಅಂಥದನ್ನು ಕಂಡೂ ಇರಲಿಲ್ಲ. ಕ್ಷಮಿಸು, ಎಂದ. ಯಾಕೆಂದರೆ ಈ ಮನುಷ್ಯರು ಅವುಗಳನ್ನು ಕಟ್ಟಿಕೊಂಡು ನರ್ತಿಸುತ್ತಾರೆ ಎಂದು ನಾನು ಹೇಳಿದರೆ ನಿನಗೆ ನಂಬಿಕೆ ಬರಲಾರದು ಎಂದು ನನಗೆ ಸಂದೇಹವಿದೆ. ನಾನೇನು ಹೇಳ್ತ ಇದ್ದೇನೆ… ನರ್ತಿಸುವುದೆ? ಅವರ ಚಲನೆಗಳ ಹರವಿಗೆ ಮಿತಿಯಿದೆ, ಖಂಡಿತವಾಗಿ, ಆದರೆ ಅವರು ಮಾಡಬಹುದಾದ್ದನ್ನು ಎಂಥಾ ನಿಖರತೆಯಿಂದ, ಸುಲಭತೆಯಿಂದ, ಮತ್ತು ಸೊಬಗಿನಿಂದ ಮಾಡುತ್ತಾರೆಂದರೆ ಯೋಚಿಸಬಲ್ಲ ವೀಕ್ಷಕ ದಂಗಾಗಬೇಕು.

ನಾನು ನಗುತ್ತ ಹೇಳಿದೆ, ನಿನಗೀಗ ನಿನ್ನ ವ್ಯಕ್ತಿ ಸಿಕ್ಕಿದ್ದಾನೆ; ಅಂಥ ಅಂಗಾಂಗಗಳನ್ನು ತಯಾರಿಸಬಲ್ಲ ಕುಶಲಕರ್ಮಿ ನಿನಗೋಸ್ಕರ ಒಂದು ಪರಿಪೂರ್ಣ ಗೊಂಬೆಯನ್ನೂ ಸಿದ್ಧಪಡಿಸಬಲ್ಲ, ನಿನ್ನ ಸೂಚನೆಗಳಿಗೆ ಅನುಸಾರವಾಗಿ, ಎಂದು. ಅವನು ಯಾವುದೋ ಗೊಂದಲದಲ್ಲಿ ಕೆಳ ನೋಡುತ್ತಿದ್ದಂತೆ ನಾನು ಕೇಳಿದೆ, ಅಂಥ ಕುಶಲಕರ್ಮಿಗೆ ನೀನು ಕೊಡಬೇಕೆಂದಿರುವ ಸೂಚನೆಗಳು ಯಾವ ಯಾವವು? ನಾವಿಲ್ಲಿ ಕಾಣುವ ಗೊಂಬೆಗಳಲ್ಲಿ ಇಲ್ಲದಂಥವೇನೂ ಅಲ್ಲ, ಎಂದ. ಸಮತೋಲ, ಬಳುಕುವಿಕೆ, ಲಾಘವ… ಆದರೆ ಎಲ್ಲವೂ ಉನ್ನತ ಮಟ್ಟದಲ್ಲಿ. ಮತ್ತು ವಿಶೇಷವಾಗಿ, ಗುರುತ್ವಾಕರ್ಷಣ ಕೇಂದ್ರಗಳನ್ನು ಹೆಚ್ಚು ಸಹಜವಾಗಿ ಇರಿಸುವುದು.

ಜೀವಂತ ನರ್ತಕರಿಗಿಂತ ಹೆಚ್ಚಿನ ಅನುಕೂಲ ನಿನ್ನ ಗೊಂಬೆಗಳಿಗೆ ಏನಿರುತ್ತದೆ? ಅನುಕೂಲ? ಮೊದಲನೆಯದಾಗಿ, ಒಂದು ಋಣಾತ್ಮಕವಾದ ಅನುಕೂಲ: ಗೊಂಬೆಗೆ ಹುಸಿ ನಟನೆಯ ಆರೋಪ ಇರೋದಿಲ್ಲ. ಯಾಕೆಂದರೆ ಹುಸಿ ನಟನೆ ಕಾಣಿಸುವುದು, ನಿನಗೇ ಗೊತ್ತಿರುವಂತೆ, ಆತ್ಮ ಅಥವಾ ಚಲನಶಕ್ತಿ, ಚಲನೆಯ ಗುರುತ್ವಾಕರ್ಷಣ ಕೇಂದ್ರಕ್ಕಿಂತ ಇನ್ನೊಂದು ಕಡೆ ಎಲ್ಲೋ ಕಂಡುಬರುವಾಗ. ಸೂತ್ರಧಾರ ತನ್ನ ಸರಿಗೆಯಿಂದ ಅಥವಾ ದಾರದಿಂದ ಈ ಕೇಂದ್ರವನ್ನು ಮಾತ್ರವೇ ನಿಯಂತ್ರಿಸುವ ಕಾರಣ, ಪೋಣಿಸಿದ ಅಂಗಗಳು ಅವು ಹೇನಿರಬೇಕೋ ಹಾಗಿರುತ್ತವೆ… ನಿರ್ಜೀವವಾಗಿ, ಶುದ್ಧ ಲೋಲಕಗಳಾಗಿ, ಗುರುತ್ವಾಕರ್ಷಣ ತತ್ವದ ನಿಯಂತ್ರಣಕ್ಕೆ ಮಾತ್ರವೇ ಒಳಗಾಗಿ. ಇದೊಂದು ಅತ್ಯುತ್ತಮ ಗುಣ. ನಮ್ಮ ಹೆಚ್ಚಿನ ನರ್ತಕರಲ್ಲಿ ಅದು ಕಂಡು ಬಂದರೆ ಭಾಗ್ಯ.

‘ನೀನು ಕೇಳಿದ್ದೀಯ?’ ಎಂದ, ನಾನು ಮೌನವಾಗಿ ನೆಲ ನೋಡುತ್ತಿದ್ದಂತೆ. ‘ಇಂಗ್ಲಿಷ್ ಕುಶಲಕರ್ಮಿಗಳು ಕಾಲು ಕಳಕೊಂಡ ನತದೃಷ್ಟರಿಗೋಸ್ಕರ ತಯಾರು ಮಾಡುವ ಕೃತಕ ಕಾಲುಗಳ ಬಗ್ಗೆ?’ ನಾನು ಕೇಳಿಲ್ಲ ಎಂದೆ. ನಾನು ಎಂದೂ ಅಂಥದನ್ನು ಕಂಡೂ ಇರಲಿಲ್ಲ. ಕ್ಷಮಿಸು, ಎಂದ. ಯಾಕೆಂದರೆ ಈ ಮನುಷ್ಯರು ಅವುಗಳನ್ನು ಕಟ್ಟಿಕೊಂಡು ನರ್ತಿಸುತ್ತಾರೆ ಎಂದು ನಾನು ಹೇಳಿದರೆ ನಿನಗೆ ನಂಬಿಕೆ ಬರಲಾರದು ಎಂದು ನನಗೆ ಸಂದೇಹವಿದೆ. ನಾನೇನು ಹೇಳ್ತ ಇದ್ದೇನೆ… ನರ್ತಿಸುವುದೆ? ಅವರ ಚಲನೆಗಳ ಹರವಿಗೆ ಮಿತಿಯಿದೆ, ಖಂಡಿತವಾಗಿ, ಆದರೆ ಅವರು ಮಾಡಬಹುದಾದ್ದನ್ನು ಎಂಥಾ ನಿಖರತೆಯಿಂದ, ಸುಲಭತೆಯಿಂದ, ಮತ್ತು ಸೊಬಗಿನಿಂದ ಮಾಡುತ್ತಾರೆಂದರೆ ಯೋಚಿಸಬಲ್ಲ ವೀಕ್ಷಕ ದಂಗಾಗಬೇಕು.

ಆ ಹುಡುಗಿಯನ್ನು ನೋಡು, ಡಾಫ್ನೆಯ ನೃತ್ಯ ಮಾಡುವವಳು, ಎಂದು ಅವನು ಮುಂದುವರಿಸಿದ. ಅಪೋಲೋ ಅವಳನ್ನು ಬೆನ್ನು ಹತ್ತಿರುತ್ತ, ಅವಳು ಅವನನ್ನು ನೋಡಲು ತಿರುಗುತ್ತಾಳೆ. ಈ ನಿಮಿಷದಲ್ಲಿ ಅವಳ ಆತ್ಮ ಅವಳ ಕೊರಳ ಹಿಂದುಗಡೆ ಇರುವಂತೆ ತೋರುತ್ತದೆ. ಬಾಗುತ್ತಿರುವಂತೆ, ಅವಳು ಮುರಿಯುವ ಹಾಗೆ ಅನಿಸುತ್ತದೆ, ಬರ್ನಿನಿ ಶೈಲಿಯ ನೀರ ದೇವತೆಯಂತೆ. ಅಥವಾ ಆ ಯುವಕನ ಕಡೆ ನೋಡು, ಅವನು ಮೂರು ದೇವಿಗಳ ನಡುವೆ ನಿಂತು ಸೇಬು ಹಣ್ಣನ್ನು ವೀನಸ್‌ಗೆ ಕೊಡುವ ಪ್ಯಾರಿಸನ ನಾಟ್ಯ ಮಾಡುತ್ತಿದ್ದಾನೆ. ಅವನ ಆತ್ಮವೀಗ ನಿಜಕ್ಕೂ ಇರುವುದು (ಹಾಗೂ ಅದು ನೋಡುವುದಕ್ಕೆ ಭಯ ಹುಟ್ಟಿಸುತ್ತದೆ) ಅವನ ಭುಜ ಸಂದಿಯಲ್ಲಿ.

‘ಇಂಥ ತಪ್ಪು ಕಲ್ಪನೆಗಳು ಅನಿವಾರ್ಯ, ಎಂದ ಅವನು, ಈಗ ನಾವು ಜ್ಞಾನ ವೃಕ್ಷದ ಫಲ ತಿಂದಿರುತ್ತೇವೆ. ಆದರೆ ಸ್ವರ್ಗದ ಬಾಗಿಲು ಮುಚ್ಚಿ ಚಿಲಕ ಹಾಕಿದೆ, ಮತ್ತು ದೇವದೂತ ನಮ್ಮ ಬೆನ್ನ ಹಿಂದೆ ನಿಂತಿದ್ದಾನೆ. ನಾವು ಮುಂದುವರಿಯಬೇಕು ಹಾಗೂ ಇಡೀ ಲೋಕ ಸುತ್ತ ಪ್ರಯಾಣ ಬೆಳೆಸಬೇಕು, ಅದು ಪ್ರಾಯಶಃ ಹಿಂದಿನ ಭಾಗದಲ್ಲೆಲ್ಲಾದರೂ ತೆರೆದಿದೆಯೋ ಎಂದು ನೋಡುವುದಕ್ಕೆ.

ಇದು ನನಗೆ ನಗು ತರಿಸಿತು. ನಾನಂದುಕೊಂಡೆ, ಖಂಡಿತವಾಗಿಯೂ ಮನುಷ್ಯ ಚೇತನ ತಪ್ಪಾಗಿರಲಾರದು, ಅದು ಅಸ್ತಿತ್ವದಲ್ಲೇ ಇರದ ಕಡೆ. ಅವನಿಗೆ ಇನ್ನಷ್ಟು ಹೇಳವುದಕ್ಕೆ ಇತ್ತು ಎಂದು ನನಗನಿಸಿ, ದಯವಿಟ್ಟು ಮುಂದುವರಿಸು ಎಂದೆ.

ಅವನಂದ: ಅದಲ್ಲದೆ ಈ ಗೊಂಬೆಗಳಿಗೆ ಎಲ್ಲಾ ಕಾರಣಕ್ಕೂ ಲಘುವಾಗಿರುವ ಅನುಕೂಲತೆಯೂ ಇದೆ. ನರ್ತನಕ್ಕೆ ಅತ್ಯಂತ ವಿರುದ್ಧವಾದ, ಪದಾರ್ಥಗಳ ಜಡ ಶಕ್ತಿಯಿಂದ ಅವು ಬಾಧಿತವಲ್ಲ. ಅವುಗಳನ್ನು ಮೇಲಕ್ಕೆಳೆಯುವ ಶಕ್ತಿ ಕೆಳಕ್ಕೆಳೆಯುವ ಶಕ್ತಿಗಿಂತ ಹೆಚ್ಚಿನದು. ಮಿಸ್ ಜಿ ಏನು ತಾನೇ ಕೊಡಲಾರಳು, ಅರವತ್ತು ಪೌಂಡು ಕಡಿಮೆಯಾಗಲು ಅಥವಾ ಬ್ಯಾಲೆಯಲ್ಲಿ ಜಿಗಿತ ಮಾಡುವಾಗ ಮತ್ತು ಒಂದು ಕಾಲಿನ ತುದಿಬೆರಳುಗಳ ಮೇಲೆ ರಿಂಗಣಗುಣಿಯುವಾಗ ಈ ಗಾತ್ರದ ಲಾಘವ ಗಳಿಸುವುದಕ್ಕೆ? ಗೊಂಬೆಗಳಿಗೆ ನೆಲ ಬೇಕಾದ್ದು ಕ್ಷಣ ಮಾತ್ರ ಕಣ್ಣು ಹಾಯಿಸುವುದಕ್ಕೆ, ಜಿನ್ನುಗಳ ಹಾಗೆ, ಮತ್ತು ಈ ಕ್ಷಣಮಾತ್ರದ ತಡೆಯಿಂದ ತಮ್ಮ ಅಂಗಗಳ ಕುಲುಕಿಗೆ ಹೊಸ ಚೈತನ್ಯ ನೀಡುವುದಕ್ಕೆ. ನಾವು ಮನುಷ್ಯರಿಗೆ ಅದು ಬೇಕಾದ್ದು ಆಧರಿಸುವುದಕ್ಕೆ, ನರ್ತನದ ಶ್ರಮದಿಂದ ಚೇತರಿಸಿಕೊಳ್ಳುವುದಕ್ಕೆ. ಈ ವಿಶ್ರಾಂತಿಯ ನಿಮಿಷ ನಿಜಕ್ಕೂ ನರ್ತನದ ಭಾಗವಲ್ಲ. ನಾವು ಹೆಚ್ಚೆಂದರೆ ಅದನ್ನು ಎದ್ದು ತೋರದ ಹಾಗೆ ಎಷ್ಟು ಸಾಧ್ಯವೋ ಅಷ್ಟು ಮಾಡಬಹುದು…

ನನ್ನ ಉತ್ತರವೆಂದರೆ, ಅವನು ತನ್ನ ವಿರೋಧಾಭಾಸಗಳನ್ನು ಎಷ್ಟು ಜಾಣತನದಿಂದ ನಿರೂಪಿಸಿದರೂ, ಜೀವಂತ ಮಾನುಷ ದೇಹಕ್ಕಿಂತ ಒಂದು ಯಾಂತ್ರಿಕ ಗೊಂಬೆ ಹೆಚ್ಚು ಸೊಬಗಿನದು ಎಂದು ನನ್ನನ್ನು ನಂಬಿಸುವುದು ಅವನಿಂದ ಎಂದಿಗೂ ಸಾಧ್ಯವಾಗಲಾರದು ಎನ್ನುವುದಾಗಿತ್ತು. ಅದಕ್ಕವನು ಸೊಬಗಿನ ವಿಷಯದಲ್ಲಿ ಮನುಷ್ಯ ಎಂದೂ ಗೊಂಬೆಯ ಹತ್ತಿರ ಕೂಡ ಬರಲಾರ ಎಂದು ಮರುನುಡಿದ. ದೇವರು ಮಾತ್ರವೇ ಜಡ ವಸ್ತುಗಳಿಗೆ ಸರಿಸಮಾನವಾಗಬಲ್ಲ. ವರ್ತುಲ ಜಗತ್ತಿನ ಎರಡು ಕೊನೆಗಳು ಸೇರುವ ಬಿಂದು ಇದು.

ಆ ಹುಡುಗಿಯನ್ನು ನೋಡು, ಡಾಫ್ನೆಯ ನೃತ್ಯ ಮಾಡುವವಳು, ಎಂದು ಅವನು ಮುಂದುವರಿಸಿದ. ಅಪೋಲೋ ಅವಳನ್ನು ಬೆನ್ನು ಹತ್ತಿರುತ್ತ, ಅವಳು ಅವನನ್ನು ನೋಡಲು ತಿರುಗುತ್ತಾಳೆ. ಈ ನಿಮಿಷದಲ್ಲಿ ಅವಳ ಆತ್ಮ ಅವಳ ಕೊರಳ ಹಿಂದುಗಡೆ ಇರುವಂತೆ ತೋರುತ್ತದೆ. ಬಾಗುತ್ತಿರುವಂತೆ, ಅವಳು ಮುರಿಯುವ ಹಾಗೆ ಅನಿಸುತ್ತದೆ, ಬರ್ನಿನಿ ಶೈಲಿಯ ನೀರ ದೇವತೆಯಂತೆ. ಅಥವಾ ಆ ಯುವಕನ ಕಡೆ ನೋಡು, ಅವನು ಮೂರು ದೇವಿಗಳ ನಡುವೆ ನಿಂತು ಸೇಬು ಹಣ್ಣನ್ನು ವೀನಸ್‌ಗೆ ಕೊಡುವ ಪ್ಯಾರಿಸನ ನಾಟ್ಯ ಮಾಡುತ್ತಿದ್ದಾನೆ. ಅವನ ಆತ್ಮವೀಗ ನಿಜಕ್ಕೂ ಇರುವುದು (ಹಾಗೂ ಅದು ನೋಡುವುದಕ್ಕೆ ಭಯ ಹುಟ್ಟಿಸುತ್ತದೆ) ಅವನ ಭುಜ ಸಂದಿಯಲ್ಲಿ.ನಾನು ಪೂರ್ತಿಯಾಗಿ ದಂಗಾಗಿಹೋದೆ. ಅಂಥ ವಿಚಿತ್ರ ಒತ್ತಾಯದ ಹೇಳಿಕೆಗಳಿಗೆ ಏನು ಹೇಳಬೇಕೆಂದೇ ನನಗೆ ತೋಚಲಿಲ್ಲ.

ಒಂದು ಚಿಟಿಕೆ ನಶ್ಯ ಸೇದುತ್ತ ಅವನಂದ, ಬಹುಶಃ ನಾನು ಜೆನಿಸಿಸ್ ಪುಸ್ತಕದ ಮೂರನೇ ಅಧ್ಯಾಯವನ್ನು ಸಾಕಷ್ಟು ಗಮನವಿರಿಸಿ ಓದಿರಲಾರೆ ಎಂದು. ಮನುಷ್ಯ ಬೆಳವಣಿಗೆಯ ಆ ಆರಂಭದ ಅವಧಿಯ ಪರಿಚಯ ಇಲ್ಲದವರಿಗೆ ಅವನ ಜತೆ ನಂತರದ ಬೆಳವಣಿಗೆಗಳ ಕುರಿತು ಫಲಪ್ರದವಾದ ಚರ್ಚೆ ನಡೆಸುವುದು ಕಷ್ಟ ಮತ್ತು ಅಂತಿಮ ಅವಸ್ಥೆಯ ಕುರಿತು ಮಾತಾಡುವುದಂತೂ ಇನ್ನಷ್ಟು ಕಷ್ಟವೇ ಸರಿ ಎಂದ.

ಪ್ರಜ್ಞೆ ಹೇಗೆ ಸಹಜ ಸೌಂದರ್ಯವನ್ನು ಕದಡಬಲ್ಲುದು ಎನ್ನುವ ಬಗ್ಗೆ ನನಗೆ ಅರಿವಿದೆ ಎಂದು ನಾನವನಿಗೆ ಹೇಳಿದೆ. ನನ್ನ ಯುವ ಪರಿಚಿತನೊಬ್ಬ ನನ್ನ ಕಣ್ಣೆದುರಿಗೇ ತನ್ನ ಮುಗ್ಧತೆಯನ್ನು ಕಳೆದುಕೊಂಡಿದ್ದ, ಅದೂ ಒಂದು ಅಚಾನಕ ಮಾತಿನ ಕಾರಣ. ಅವನು ಆಮೇಲೆ ತನ್ನ ಮುಗ್ಧತೆಯ ಸ್ವರ್ಗಕ್ಕೆ ದಾರಿಯನ್ನು ಮರಳಿ ಕಾಣದೆ ಇದ್ದ, ಮಾಡಬಹುದಾದ ಯಾವುದೆಲ್ಲ ಪ್ರಯತ್ನಗಳನ್ನು ಮಾಡಿದರೂ ಕೂಡ. ಇದರಿಂದ ನೀನು ಮಾಡಬಹುದಾದ ಊಹೆಗಳೇನು? ಎಂದೆ.

ನನ್ನ ಮನಸ್ಸಿನಲ್ಲಿರುವ ಘಟನೆಯ ಕುರಿತು ಅವನು ವಿಚಾರಿಸಿದ.

ನಾನಂದೆ, ಇದು ನಡೆದುದು ಮೂರು ವರ್ಷಗಳ ಹಿಂದೆ. ನಾನೊಬ್ಬ ಅಸಾಧಾರಣ ಸೊಬಗಿನ ಯುವಕನ ಜತೆ ಸಾರ್ವಜನಿಕ ಸ್ನಾನಗೃಹದಲ್ಲಿದ್ದೆ. ಅವನ ವಯಸ್ಸು ಸುಮಾರು ಹದಿನೈದು ವರ್ಷ ಇರಬಹದು, ಮತ್ತು ತುಂಬಾ ಮಸುಕಾಗಿಯೇ ಅವನಲ್ಲಿ ಗರ್ವದ ಛಾಯೆಗಳನ್ನು ಕಾಣಬಹುದಾಗಿತ್ತಷ್ಟೆ, ಸ್ತ್ರೀಯರಿಂದ ಅವನಿಗೆ ದೊರೆತ ಒಲವುಗಳ ಫಲ ಅದು. ಯೋಗಾಯೋಗವಾಗಿ ಈಚೆಗೆ ನಾವು ಪ್ಯಾರಿಸಿನಲ್ಲಿ ಒಂದು ಶಿಲ್ಪವನ್ನು ನೋಡಿದ್ದೆವು, ಒಬ್ಬ ಹುಡುಗ ತನ್ನ ಕಾಲಿನಿಂದ ಮುಳ್ಳೊಂದನ್ನು ಕೀಳುವುದು. ಈ ಶಿಲ್ಪದ ಎರಕ ಸುಪ್ರಸಿದ್ಧವಾದುದು; ನೀನಿದನ್ನು ಹೆಚ್ಚಿನ ಜರ್ಮನ್ ಸಂಗ್ರಹಗಳಲ್ಲೂ ಕಾಣಬಹುದು. ನನ್ನ ಗೆಳೆಯ ಒಂದು ಎತ್ತರದ ಕನ್ನಡಿಯೊಳಕ್ಕೆ ನೋಡಿದ, ತಾನು ಆರಿಸುವುದಕ್ಕೆಂದು ಕಾಲನ್ನು ಒಂದು ಸ್ಟೂಲಿನ ಮೇಲೆ ಇರಿಸುವ ವೇಳೆ, ಆಗ ಅವನಿಗೆ ಆ ಶಿಲ್ಪದ ನೆನಪಾಯಿತು. ನಸು ನಕ್ಕು ಅವನಿದನ್ನು ನನಗೆ ಹೇಳಿದ. ಸತ್ಯವೆಂದರೆ, ನಾನೂ ಅದೇ ಕ್ಷಣ ಈ ಹೋಲಿಕೆಯನ್ನು ಗಮನಿಸಿದ್ದೆ, ಆದರೆ… ಯಾಕೆಂದು ಗೊತ್ತಿಲ್ಲ, ಅವನ ವ್ಯಕ್ತ ಸೌಂದರ್ಯದ ಪರೀಕ್ಷೆ ಮಾಡಲೆಂದೋ ಅಥವಾ ಅವನ ಗರ್ವಕ್ಕೆ ತಕ್ಕುದಾದ ಸಕಾರಾತ್ಮಕ ಪ್ರತಿರೋಧವೊಂದನ್ನು ನೀಡಲೆಂದೋ, ನಾನು ದೊಡ್ಡದಾಗಿ ನಗುತ್ತ, ನೀನು ಬರೇ ಕಲ್ಪಿಸಿಕೊಳ್ಳುತ್ತ ಇದ್ದೀಯ ಎಂದೆ. ಅವನಿಗೆ ನಾಚಿಕೆಯಾಯಿತು. ಅವನು ಕಾಲನ್ನು ಎರಡನೇ ಬಾರಿ ಎತ್ತಿದ, ನನಗೆ ತೋರಿಸಲೆಂದು, ಆದರೆ ಅವನ ಪ್ರಯತ್ನ ವಿಫಲವಾಗಿತ್ತು, ಯಾರೂ ಊಹಿಸಬಹುದಾದಂತೆ. ಅವನು ಮೂರನೇ ಬಾರಿ ಪ್ರಯತ್ನಿಸಿದ, ನಾಲ್ಕನೇ ಬಾರಿ; ಅವನು ಹತ್ತು ಬಾರಿ ತನ್ನ ಕಾಲನ್ನು ಎತ್ತಿರಬೇಕು, ಆದರೆ ಯಾವುದೂ ಫಲ ಕೊಡಲಿಲ್ಲ. ಆ ಮೊದಲ ಚಲನೆಯನ್ನು ಆವರ್ತಿಸುವುದಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ನಾನೇನು ಹೇಳ್ತ ಇದ್ದೇನೆ? ಅವನು ಮಾಡುತ್ತಿದ್ದ ಚಲನೆಗಳು ಅದೆಷ್ಟು ತಮಾಷೆಯಾಗಿದ್ದುವೆಂದರೆ ನಗದಿರುವುದಕ್ಕೆ ನನ್ನಿಂದ ಆಗಲೇ ಇಲ್ಲ.

ಅಂದಿನಿಂದ, ಆ ಕ್ಷಣದಿಂದಲೇ, ಈ ಹುಡುಗನಲ್ಲಿ ಒಂದು ಅದ್ಭುತ ಬದಲಾವಣೆ ಕಾಣಿಸಿಕೊಂಡಿತು. ಅವನು ಇಡೀ ದಿವಸಗಳನ್ನು ಕನ್ನಡಿಯ ಮುಂದೆ ಕಳೆಯತೊಡಗಿದ. ಅವನ ಆಕರ್ಷಣೆಗಳು ಒಂದೊಂದಾಗಿ ಅವನಿಂದ ಕಳೆದು ಹೋದುವು. ಒಂದು ಅಗೋಚರ ಮತ್ತು ಅರ್ಥವಾಗದ ಶಕ್ತಿಯೊಂದು ಉಕ್ಕಿನ ಬಲೆಯ ಹಾಗೆ ಅವನ ಆಂಗಿಕಗಳ ಮುಕ್ತ ಲಯದ ಮೇಲೆ ಹೊದ್ದುಕೊಂಡಿತು. ನೋಡುವವರಿಗೆಲ್ಲ ಸಂತೋಷವನ್ನು ನೀಡುತ್ತಿದ್ದ ಸೊಬಗಿನ ಲವಲೇಶವೂ ಒಂದು ವರ್ಷದ ನಂತರ ಅವನಲ್ಲಿ ಉಳಿಯಲಿಲ್ಲ. ಈ ವಿಲಕ್ಷಣವೂ ದುರದೃಷ್ಟಕರವೂ ಆದ ಘಟನೆಗೆ ಸಾಕ್ಷಿಯಾದ ಇನ್ನೂ ಬದುಕಿರುವ ವ್ಯಕ್ತಿಯೊಬ್ಬನ ಬಗ್ಗೆ ಬೇಕಾದರೆ ನಾನು ನಿನಗೆ ಹೇಳಬಲ್ಲೆ. ಅವನಿದನ್ನು ದೃಢೀಕರಿಸಿಯಾನು, ಅಕ್ಷರಶಃ, ನಾನು ವಿವರಿಸಿದ ಹಾಗೇ.

ನಾನೊಬ್ಬ ಅಸಾಧಾರಣ ಸೊಬಗಿನ ಯುವಕನ ಜತೆ ಸಾರ್ವಜನಿಕ ಸ್ನಾನಗೃಹದಲ್ಲಿದ್ದೆ. ಅವನ ವಯಸ್ಸು ಸುಮಾರು ಹದಿನೈದು ವರ್ಷ ಇರಬಹದು, ಮತ್ತು ತುಂಬಾ ಮಸುಕಾಗಿಯೇ ಅವನಲ್ಲಿ ಗರ್ವದ ಛಾಯೆಗಳನ್ನು ಕಾಣಬಹುದಾಗಿತ್ತಷ್ಟೆ, ಸ್ತ್ರೀಯರಿಂದ ಅವನಿಗೆ ದೊರೆತ ಒಲವುಗಳ ಫಲ ಅದು. ಯೋಗಾಯೋಗವಾಗಿ ಈಚೆಗೆ ನಾವು ಪ್ಯಾರಿಸಿನಲ್ಲಿ ಒಂದು ಶಿಲ್ಪವನ್ನು ನೋಡಿದ್ದೆವು, ಒಬ್ಬ ಹುಡುಗ ತನ್ನ ಕಾಲಿನಿಂದ ಮುಳ್ಳೊಂದನ್ನು ಕೀಳುವುದು. ಈ ಶಿಲ್ಪದ ಎರಕ ಸುಪ್ರಸಿದ್ಧವಾದುದು; ನೀನಿದನ್ನು ಹೆಚ್ಚಿನ ಜರ್ಮನ್ ಸಂಗ್ರಹಗಳಲ್ಲೂ ಕಾಣಬಹುದು. ನನ್ನ ಗೆಳೆಯ ಒಂದು ಎತ್ತರದ ಕನ್ನಡಿಯೊಳಕ್ಕೆ ನೋಡಿದ, ತಾನು ಆರಿಸುವುದಕ್ಕೆಂದು ಕಾಲನ್ನು ಒಂದು ಸ್ಟೂಲಿನ ಮೇಲೆ ಇರಿಸುವ ವೇಳೆ, ಆಗ ಅವನಿಗೆ ಆ ಶಿಲ್ಪದ ನೆನಪಾಯಿತು. ನಸು ನಕ್ಕು ಅವನಿದನ್ನು ನನಗೆ ಹೇಳಿದ. ಸತ್ಯವೆಂದರೆ, ನಾನೂ ಅದೇ ಕ್ಷಣ ಈ ಹೋಲಿಕೆಯನ್ನು ಗಮನಿಸಿದ್ದೆ, ಆದರೆ… ಯಾಕೆಂದು ಗೊತ್ತಿಲ್ಲ, ಅವನ ವ್ಯಕ್ತ ಸೌಂದರ್ಯದ ಪರೀಕ್ಷೆ ಮಾಡಲೆಂದೋ ಅಥವಾ ಅವನ ಗರ್ವಕ್ಕೆ ತಕ್ಕುದಾದ ಸಕಾರಾತ್ಮಕ ಪ್ರತಿರೋಧವೊಂದನ್ನು ನೀಡಲೆಂದೋ, ನಾನು ದೊಡ್ಡದಾಗಿ ನಗುತ್ತ, ನೀನು ಬರೇ ಕಲ್ಪಿಸಿಕೊಳ್ಳುತ್ತ ಇದ್ದೀಯ ಎಂದೆ. ಅವನಿಗೆ ನಾಚಿಕೆಯಾಯಿತು.

ನನ್ನ ಮಿತ್ರ ಉತ್ಸಾಹದಿಂದ ಹೇಳಿದ: ಈ ಸಂಬಂಧದಲ್ಲಿ ನಾನು ನಿನಗೊಂದು ಕತೆ ಹೇಳಲೇ ಬೇಕು. ಅದು ಇಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದು ನಿನಗೇ ಗೊತ್ತಾಗುತ್ತದೆ. ನಾನು ರಷ್ಯಾಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ಒಬ್ಬ ಬಾಲ್ಟಿಕ್ ಮಹಾಶಯನ ಮಹಲಿನಲ್ಲಿ ತಂಗಿದೆ; ಅವನ ಮಕ್ಕಳಿಗೆ ಕತ್ತಿ ವರಸೆಯಲ್ಲಿ ತುಂಬಾ ಆಸಕ್ತಿಯಿತ್ತು. ವಿಶೇಷವಾಗಿಯೂ, ದೊಡ್ಡ ಹುಡುಗ, ಆಗ ತಾನೆ ಯುನಿವರ್ಸಿಟಿಯಿಂದ ಬಂದವ, ತಾನೊಂದು ಚೂರು ಪರಿಣತನೆಂದು ತಿಳಿದುಕೊಂಡಿದ್ದ. ಒಂದು ಮುಂಜಾನೆ, ನಾನವನ ಕೋಣೆಯಲ್ಲಿದ್ದಾಗ, ಅವನು ನನ್ನ ಕೈಯಲ್ಲೊಂದು ಕರವಾಳವನ್ನಿರಿಸಿದ. ನಾನವನ ಆಹ್ವಾನವನ್ನು ಸ್ವೀಕರಿಸಿದೆ, ಆದರೆ ಅದೇಕೋ ನನ್ನದೇ ಮೇಲುಗೈಯಾಯಿತು. ಅದರಿಂದ ಅವನಿಗೆ ಸಿಟ್ಟು ಬಂತು, ಮತ್ತು ಅವನ ಗೊಂದಲ ಇನ್ನಷ್ಟು ಹೆಚ್ಚಿತು. ನನ್ನ ವರಸೆಗಳಲ್ಲಿ ಎಕದೇಶ ಎಲ್ಲವೂ ಗುರಿ ಸೇರುವ ಹಾಗಾಯಿತು. ಕೊನೆಯಲ್ಲಿ ಅವನ ಕರವಾಳ ಕೋಣೆಯ ಮೂಲೆಗೆ ಹೋಗಿ ಬಿತ್ತು. ಅದನ್ನವನು ಎತ್ತಿಕೊಳ್ಳುತ್ತಿದ್ದಂತೆ, ಅವನೆಂದ, ಅರ್ಧ ಸಿಟ್ಟಿನಲ್ಲಿ, ಅರ್ಧ ತಮಾಷೆಯಲ್ಲಿ, ತನಗೆ ಸರಿಯಾದ ಗುರು ಸಿಕ್ಕಿದ ಹಾಗಾಯಿತು, ಆದರೆ ಪ್ರತಿಯೊಬ್ಬನಿಗೂ ಪ್ರತಿಯೊಂದಕ್ಕೂ ಒಬ್ಬ ಗುರು ಇದ್ದೇ ಇರುತ್ತಾನೆ, ಹಾಗೂ ಈಗ ನನಗೆ ನನ್ನ ಗುರುವಿನ ಭೇಟಿ ಮಾಡಿಸುತ್ತೇನೆ ಎಂಬುದಾಗಿ. ಸಹೋದರರು ಇದನ್ನು ಕೇಳಿ ದೊಡ್ಡಕೆ ನಗುತ್ತ: ಬನ್ನಿ ಬನ್ನಿ, ಕೊಟ್ಟಿಗೆಗೆ ಹೋಗುವಾ! ಎಂದರು. ನನ್ನ ಕೈಹಿಡಿದು ಅವರು ಹೊರಕ್ಕೆ ಕರೆದೊಯ್ದರು, ತೋಟದಲ್ಲಿ ಅವರ ತಂದೆ ಪೋಷಿಸುತ್ತಿದ್ದ ಕರಡಿಯೊಂದರ ಪರಿಚಯ ಮಾಡಿಸುವುದಕ್ಕೆ.

ಹಿಂಗಾಲಿನಲ್ಲಿ ನೆಟ್ಟಗೆ ನಿಂತಿದ್ದ ಆ ಕರಡಿಯನ್ನು ಕಂಡು ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ, ಅದರ ಬೆನ್ನು ಅದನ್ನು ಕಟ್ಟಿಹಾಕಿದ ಗೂಟಕ್ಕೆ ಒತ್ತಿಕೊಂಡಿತ್ತು, ಬಲ ಪಾಂಜ ಯುದ್ಧಕ್ಕೆ ಸನ್ನದ್ಧವಾದಂತೆ ಎತ್ತಿಕೊಂಡು. ಅದು ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿತು. ಇದು ಅದರ ಹೋರಾಟದ ಭಂಗಿಯಾಗಿತ್ತು. ಇಂಥದೊಂದು ಪ್ರತಿದ್ವಂದ್ವಿಯನ್ನು ಕಂಡು ನಾನು ಕನಸು ಕಾಣುತ್ತಿದ್ದೇನೋ ಎನ್ನುವುದು ಸ್ಪಷ್ಟವಾಗಲಿಲ್ಲ. ಆಕ್ರಮಿಸುವಂತೆ ಅವರು ನನ್ನನ್ನು ಹುರಿದುಂಬಿಸಿದರು. ಅದಕ್ಕೆ ಹೊಡೆಯುವುದು ಸಾಧ್ಯವಿಲ್ಲವೋ ಪ್ರಯತ್ನಿಸಿ! ಎಂದು ಬೊಬ್ಬಿಟ್ಟರು. ಈಗ ನಾನು ನನ್ನ ದಿಗಿಲಿನಿಂದ ತುಸು ಚೇತರಿಸಿಕೊಂಡಿರುತ್ತ, ನಾನು ಅದರತ್ತ ನನ್ನ ಕರವಾಳ ಬೀಸಿದೆ. ಕರಡಿ ತನ್ನ ಪಾಂಜದಿಂದ ಸ್ವಲ್ಪವೇ ಚಲನೆ ಮಾಡಿ ನನ್ನ ಇರಿತವನ್ನು ತಪ್ಪಿಸಿತು. ಇರಿಯುವಂತೆ ನಾನು ನಟಿಸಿದೆ, ಅದನ್ನು ವಂಚಿಸುವ ಉದ್ದೇಶದಿಂದ. ಕರಡಿ ಚಲಿಸಲಿಲ್ಲ. ನಾನು ಪುನಃ ಆಕ್ರಮಿಸಿದೆ, ಈ ಸಲ ನನ್ನೆಲ್ಲಾ ಕೌಶಲ್ಯವನ್ನು ಒಂದುಗೂಡಿಸಿ. ಒಂದು ಮಾನವನ ಎದೆಗಾಗಿದ್ದರೆ ನಾನು ತೂತು ಮಾಡುತ್ತಿದ್ದೆ, ಆದರೆ ಕರಡಿ ತನ್ನ ಪಾಂಜವನ್ನು ತುಸುವೇ ಚಲಿಸಿ ನನ್ನ ಇರಿತವನ್ನು ತಪ್ಪಿಸಿಕೊಂಡಿತು. ಈಗ ನಾನು ಆ ಹಿರಿಯ ಸೋದರನಿದ್ದಿದ್ದ ಆ ಅದೇ ಸ್ಥಿತಿಯಲ್ಲಿದ್ದೆ: ಕರಡಿಯ ಪೂರ್ತಾ ಗಾಂಭೀರ್ಯ ನನ್ನ ಸ್ತಿಮಿತವನ್ನು ನಷ್ಟಗೊಳಿಸಿತು. ಆಮೇಲೆ ವರಸೆ ಮತ್ತು ನಟನೆ ತೀವ್ರ ಗತಿಯಲ್ಲಿ ಒಂದನ್ನೊಂದು ಹಿಂಬಾಲಿಸಿದುವು, ಬೆವರು ನನ್ನಿಂದ ಧಾರಾಕಾರ ಸುರಿಯಿತು, ಆದರೆ ಒಂದೂ ಉಪಯೋಗಕ್ಕೆ ಬರಲಿಲ್ಲ. ಅದು ಜಗತ್ತಿನ ಅತ್ಯುತ್ತಮ ಕತ್ತಿಕಾಳಗದವನಂತೆ ನನ್ನ ವರಸೆಗಳನ್ನು ತಪ್ಪಿಸಿಕೊಂಡುದಷ್ಟೇ ಅಲ್ಲ; ಅದನ್ನು ವಂಚಿಸಲು ನಾನು ಇರಿಯುವ ನಟನೆ ಮಾಡಿದಾಗ ಅದು ಯಾವ ಚಲನೆಯನ್ನೂ ತೋರಿಸಲಿಲ್ಲ. ಈ ವಿಷಯದಲ್ಲಿ ಯಾವನೇ ಮಾನವ ವರಸೆಗಾರ ಅದಕ್ಕೆ ಸಮನಾಗುವುದು ಸಾಧ್ಯವಿರಲಿಲ್ಲ. ಅದು ನೆಟ್ಟಗೆ ನಿಂತಿತ್ತು, ಕಾಳಗಕ್ಕೆ ಸಿದ್ಧವಾದಂತೆ ತನ್ನ ಪಾಂಜವನ್ನು ಎತ್ತಿಕೊಂಡು, ಅದರ ಕಣ್ಣು ನನ್ನ ಕಣ್ಣಿನಲ್ಲಿ ನಟ್ಟು, ಅಲ್ಲಿ ನನ್ನ ಆತ್ಮವನ್ನು ಅದು ಓದಬಲ್ಲಂತೆ, ಮತ್ತು ನನ್ನ ಇರಿತಗಳು ನಿಜವಲ್ಲ ಎಂದಾಗ ಅದು ಚಲಿಸುತ್ತಿರಲಿಲ್ಲ. ಈ ಕತೆಯನ್ನು ನೀನು ನಂಬುವಿಯಾ?

ನಾನು ರಷ್ಯಾಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ಒಬ್ಬ ಬಾಲ್ಟಿಕ್ ಮಹಾಶಯನ ಮಹಲಿನಲ್ಲಿ ತಂಗಿದೆ; ಅವನ ಮಕ್ಕಳಿಗೆ ಕತ್ತಿ ವರಸೆಯಲ್ಲಿ ತುಂಬಾ ಆಸಕ್ತಿಯಿತ್ತು. ವಿಶೇಷವಾಗಿಯೂ, ದೊಡ್ಡ ಹುಡುಗ, ಆಗ ತಾನೆ ಯುನಿವರ್ಸಿಟಿಯಿಂದ ಬಂದವ, ತಾನೊಂದು ಚೂರು ಪರಿಣತನೆಂದು ತಿಳಿದುಕೊಂಡಿದ್ದ. ಒಂದು ಮುಂಜಾನೆ, ನಾನವನ ಕೋಣೆಯಲ್ಲಿದ್ದಾಗ, ಅವನು ನನ್ನ ಕೈಯಲ್ಲೊಂದು ಕರವಾಳವನ್ನಿರಿಸಿದ. ನಾನವನ ಆಹ್ವಾನವನ್ನು ಸ್ವೀಕರಿಸಿದೆ, ಆದರೆ ಅದೇಕೋ ನನ್ನದೇ ಮೇಲುಗೈಯಾಯಿತು. ಅದರಿಂದ ಅವನಿಗೆ ಸಿಟ್ಟು ಬಂತು, ಮತ್ತು ಅವನ ಗೊಂದಲ ಇನ್ನಷ್ಟು ಹೆಚ್ಚಿತು. ನನ್ನ ವರಸೆಗಳಲ್ಲಿ ಎಕದೇಶ ಎಲ್ಲವೂ ಗುರಿ ಸೇರುವ ಹಾಗಾಯಿತು. ಕೊನೆಯಲ್ಲಿ ಅವನ ಕರವಾಳ ಕೋಣೆಯ ಮೂಲೆಗೆ ಹೋಗಿ ಬಿತ್ತು. ಅದನ್ನವನು ಎತ್ತಿಕೊಳ್ಳುತ್ತಿದ್ದಂತೆ, ಅವನೆಂದ, ಅರ್ಧ ಸಿಟ್ಟಿನಲ್ಲಿ, ಅರ್ಧ ತಮಾಷೆಯಲ್ಲಿ, ತನಗೆ ಸರಿಯಾದ ಗುರು ಸಿಕ್ಕಿದ ಹಾಗಾಯಿತು, ಆದರೆ ಪ್ರತಿಯೊಬ್ಬನಿಗೂ ಪ್ರತಿಯೊಂದಕ್ಕೂ ಒಬ್ಬ ಗುರು ಇದ್ದೇ ಇರುತ್ತಾನೆ, ಹಾಗೂ ಈಗ ನನಗೆ ನನ್ನ ಗುರುವಿನ ಭೇಟಿ ಮಾಡಿಸುತ್ತೇನೆ ಎಂಬುದಾಗಿ.

ಖಂಡಿತಕ್ಕೂ, ಎಂದೆ ನಾನು ಸಂತೋಷ ಸಮ್ಮತಿಯಿಂದ. ಅಪರಿಚಿತನ ಬಾಯಿಂದ ಬಂದಿದ್ದರೂ ನಾನದನ್ನು ನಂಬುತ್ತಿದ್ದೆ, ಯಾಕೆಂದರೆ ಅದು ಅಷ್ಟೊಂದು ಸಂಭಾವ್ಯವಾಗಿದೆ. ಇನ್ನು ನಿನ್ನಿಂದ ಯಾಕಿಲ್ಲ?

‘ಹಾಗಿದ್ದರೆ, ಸನ್ಮಾನ್ಯ ಮಿತ್ರನೇ, ನನ್ನ ಒಡನಾಡಿ ಎಂದ, ನನ್ನ ವಾದವನ್ನು ಅನುಸರಿಸಲು ಬೇಕಾದ ಎಲ್ಲ ವಿವರಗಳೂ ನಿನ್ನ ಬಳಿ ಇವೆ. ಸಾವಯವ ಜಗತ್ತಿನಲ್ಲಿ, ಯೋಚನೆ ಕುಂದುತ್ತಲೂ ಕ್ಷೀಣಿಸುತ್ತಲೂ ಇರುತ್ತ, ಸೌಂದರ್ಯ ಎನ್ನುವುದು ಹೆಚ್ಚು ಉಜ್ವಲವೂ ನಿಶ್ಚಿತವೂ ಆಗಿ ಮೂಡಿಬರುತ್ತದೆ. ಅದರೆ ಎರಡು ಗೆರೆಗಳ ನಡುವೆ ಎಳೆದ ಒಂದು ಬರೆ ಹೇಗೆ ಅನಂತತೆಯನ್ನು ಹಾದು ಆಚೆ ಬದಿಯಲ್ಲಿ ಥಟ್ಟನೆ ಕಾಣಿಸಿಕೊಳ್ಳುವುದೋ, ಅಥವಾ ಅವತಳ ಕನ್ನಡಿಯಲ್ಲಿ ಬಿದ್ದ ಬಿಂಬವೊಂದು ಹೇಗೆ ಅತಿದೂರದಲ್ಲಿ ಕರಗಿ ಮತ್ತೆ ನಮ್ಮೆದುರು ಎದ್ದು ಬರುವುದೋ, ಹಾಗೆಯೇ ಜ್ಞಾನವೆನ್ನುವುದು ಅನಂತತೆಯನ್ನು ಹಾದು ಹೋದ ಮೇಲೆ ಸೌಂದರ್ಯವೂ ಮರಳುತ್ತದೆ. ಸೌಂದರ್ಯವು ಒಂದೋ ಪ್ರಜ್ಞೆಯೇ ಇಲ್ಲದ, ಅಥವಾ ಅನಂತ ಪ್ರಜ್ಞೆ ಇರುವ, ಮನುಷ್ಯ ರೂಪದಲ್ಲಿ ಅತ್ಯಂತ ಪರಿಶುದ್ಧವಾಗಿ ಪ್ರತ್ಯಕ್ಷವಾಗುತ್ತದೆ. ಎಂದರೆ, ಗೊಂಬೆಯಲ್ಲಿ ಅಥವಾ ದೇವರಲ್ಲಿ.

ಆಶ್ಚರ್ಯಚಕಿತನಾಗಿ ನಾನಂದೆ: ಎಂದರೆ ನಾವು ಪುನಃ ಜ್ಞಾನ ವೃಕ್ಷದ ಹಣ್ಣನ್ನು ತಿನ್ನಬೇಕೇ, ಮುಗ್ಧತೆಯ ಸ್ಥಿತಿಗೆ ಮರಳುವುದಕ್ಕೆ? ಖಂಡಿತವಾಗಿಯೂ, ಎಂದ ಅವನು, ಆದರೆ ಅದು ಜಗತ್ತಿನ ಚರಿತ್ರೆಯ ಅಂತಿಮ ಅಧ್ಯಾಯ.

(ಹೈನ್ರಿಕ್ ವಾನ್ ಕ್ಲೈಸ್ಟ್ (Heinrich von Kleist, 1777—1811) ಜರ್ಮನಿಯ ಒಬ್ಬ ಹೆಸರಾಂತ ನಾಟಕಕಾರ, ಕವಿ, ಕತೆಗಾರ. ಅವನ Uber das Marionettentheatre  ‘On the Marionette Theatre’ ಕಥನ ರೂಪದ ಒಂದು ಸುಪ್ರಸಿದ್ಧ ಲೇಖನ. ಅದನ್ನು ಇದ್ರಿಸ್ ಪೆರಿಯ ಇಂಗ್ಲಿಷ್ ಭಾಷಾಂತರದಿಂದ ಇಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ)