Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಅವಳಿಗೇನೂ ಗೊತ್ತಿಲ್ಲ

ಹದಿನೆಂಟಾಗಿ ಅರೆತಿಂಗಳಾಗಿದೆ
ಆದಷ್ಟು ಬೇಗ
ಕೈ ದಾಟಿಸಿ
ಕೈ ತೊಳೆದುಕೊಳ್ಳುತ್ತೇನೆ
ಎಂದು ಮೊನ್ನೆ
ಅವಳಪ್ಪ ಹೇಳಿದ್ದಕ್ಕೆ
ಅವಳಿತ್ತ ಉತ್ತರ
ನನ್ನೆದೆಯ ತಿಳಿನೀಲಿ
ಆಗಸದಲ್ಲಿ ಬೆಳಗುತ್ತಿರುವ
ಹೊಂಗನಸ ನಕ್ಷತ್ರಗಳನ್ನು
ಸಂಪ್ರದಾಯದ ಕಪಿಮುಷ್ಠಿಯಲ್ಲಿ
ಹೊಸಕಿಹಾಕಬೇಡಿ
ತಕ್ಷಣವೇ ಅವಳಪ್ಪ ಆರ್ಭಟಿಸಿದ
ಅವಳಿಗೇನೂ ಗೊತ್ತಿಲ್ಲ

ಅಳುವುದಿಲ್ಲ ಎನ್ನುವುದು
ನಿಷೇಧಾರ್ಥಕವಲ್ಲ
ಸಕಾರಾತ್ಮಕವಾದುದು ಎಂದು
ಹೈಸ್ಕೂಲ್ ಓದುತ್ತಿದ್ದ
ವ್ಯಾಕರಣ ಮೇಧಾವಿ
ಬುದ್ಧಿವಂತ ಹುಡುಗನ ಜೊತೆಗೆ
ನಿನ್ನೆ ಜಿದ್ದಿಗೆ ಬಿದ್ದಿದ್ದಳು
ನೊಂದಿರುವ ಹೆಂಗರುಳುಗಳು
ಯಾವತ್ತೂ ಅಳುವುದಿಲ್ಲ
ಧೈರ್ಯದಿಂದ ಎದುರಿಸಿ ಗೆಲ್ಲುತ್ತಾರೆ
ಅವಳ ಮಾತನ್ನು
ಅರ್ಥೈಸಿಕೊಳ್ಳಲಾರದ ಹುಡುಗ
ನಗುತ್ತಾ ತನ್ನ ಗೆಳೆಯನಲ್ಲಿ ಹೇಳಿದ
ಅವಳಿಗೇನೂ ಗೊತ್ತಿಲ್ಲ

ವರದಕ್ಷಿಣೆ ತೆತ್ತು ಮದುವೆಯಾದ
ಗೆಳತಿಯ ಕಿವಿಯಲ್ಲಿ ಉಸುರಿದ್ದಾಳೆ
ವಿಟಪುರುಷನೊಂದಿಗಿನ ನಿನ್ನ
ಸಂಸಾರ ಸುಖಮಯವಾಗಿರಲಿ!
ಮಗುವಾದ ತಕ್ಷಣ
ಕೆಲಸಕ್ಕೆ ರಾಜೀನಾಮೆಯಿತ್ತ
ಪ್ರಾಣಸ್ನೇಹಿತೆಗೆ ಕಳುಹಿಸಿದ್ದಾಳೆ
ಎಚ್ಚರಿಕೆ ಪತ್ರವೊಂದನ್ನು
ತೊಟ್ಟಿಲ ಭಾರಕ್ಕೆ
ನಿನ್ನೆದೆಯ ಕನಸಿನ ತಕ್ಕಡಿಯ
ಮುಳ್ಳು ವಾಲಿದೆ
ನಿಗಾ ಇರಲಿ

ಪ್ರತೀದಿನ ಸಂಜೆ
ರಸ್ತೆ ಪಕ್ಕದ
ಗಾಂಧೀ ಪ್ರತಿಮೆಯ
ಮುಂದೆ ನಿಂತು
ನಿನ್ನ ಕನ್ನಡಕದ ಗಾಜು
ಮಬ್ಬಾಗಿದೆಯೋ ತಾತ
ಚಣವೊತ್ತು ಕಳೆದರೆ
ಮನೆ ಸೇರುವ ಗ್ಯಾರಂಟಿಯಿಲ್ಲ
ಹೋಗಿ
ಬರುತ್ತೇನೆ
ಎಂದು ವಿಷಾದಿಸಿ
ಹೊರಟುಬರುತ್ತಾಳೆ

ಇದನ್ನೆಲ್ಲಾ ಕಂಡ
ಜನರು ಹೇಳುತ್ತಾರೆ
ಅವಳಿಗೇನೂ ಗೊತ್ತಿಲ್ಲ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ