ಹಾನಗಲ್ಲಿನ ತಾರಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ನಡುಮಂಟಪದ ಒಳಛಾವಣಿಯಂತೂ ಅತ್ಯಾಕರ್ಷಕ. ನೀವು ನೋಡಿರಬಹುದಾದ ಭುವನೇಶ್ವರಿಯ ಮಾದರಿಗಳಲ್ಲೇ ದೊಡ್ಡದೆನಿಸುವ ಈ ಒಳಛಾವಣಿಯನ್ನು ತಾವರೆಯ ಹೂವಿನ ಮಾದರಿಯಲ್ಲಿ ಬಿಡಿಸಿ ಅಲಂಕರಿಸಿರುವ ಬಗೆಯನ್ನು ವರ್ಣಿಸಲು ಈ ಮಾತುಗಳು ಸಾಲವು. ಸೂಕ್ಷ್ಮ ಕೆತ್ತನೆಗೆ ಹೆಸರಾದ ಪ್ರಸಿದ್ಧ ಹೊಯ್ಸಳ ಗುಡಿಗಳನ್ನೂ ಮೀರಿಸಿದ ಕಲೆಯ ಬೆಡಗನ್ನು ಇಲ್ಲಿನ ಒಳಛಾವಣಿಯ ವಿನ್ಯಾಸಗಳು..”
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು: ಶ್ರೀದೇವಿ ಕೆರೆಮನೆ ಅಂಕಣ
“ಕರಾವಳಿ ಜಿಲ್ಲೆಗಳು ಎಂದು ಸರಕಾರದ ಮಟ್ಟದಲ್ಲಿ ಹೇಳುವಾಗ ಕೇವಲ ಉಡುಪಿ, ಮಂಗಳೂರು ಎಂಬ ಎರಡು ಜಿಲ್ಲೆಗಳನ್ನು ಮಾತ್ರ ಹೆಸರಿಸುತ್ತಾರೆಯೇ ಹೊರತೂ ಉತ್ತರಕನ್ನಡವೂ ಕರಾವಳಿ ಜಿಲ್ಲೆಯೆಂದು ಎಂದೂ ಪರಿಗಣಿಸಲ್ಪಡುವುದಿಲ್ಲ. ಮಲೆನಾಡಿನ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆ ಇಲ್ಲವೇ ಇಲ್ಲ, ಬಯಲು ಸೀಮೆಯ ಪ್ರದೇಶ ಆಗುವುದೇ ಇಲ್ಲ.”
ಗುಂಡ್ಲುಪೇಟೆಯ ವಿಜಯ ನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ವಿಜಯನಾರಾಯಣ ದೇಗುಲವು ಹನ್ನೆರಡನೆಯ ಶತಮಾನದಷ್ಟು ಹಳೆಯದು. ಗರ್ಭಗೃಹ, ಅದರ ಮುಂದಿನ ಅಂತರಾಳ ಹಾಗೂ ನಡುವಣ ನವರಂಗಮಂಟಪಗಳು ಹೊಯ್ಸಳಕಾಲದ ರಚನೆಗಳೇ. ಮುಂದಿನ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ವಿಜಯನಗರದ ಕಾಲದಲ್ಲಿ ಸೇರ್ಪಡೆ ಮಾಡಲಾಗಿದೆ.”
ಹುಲ್ಲಹಳ್ಳಿಯ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹುಲ್ಲಹಳ್ಳಿ ಗ್ರಾಮದ ಒಂದು ಅಂಚಿನಲ್ಲಿರುವ ವರದರಾಜ ದೇಗುಲ ಸಾಕಷ್ಟು ವಿಶಾಲವಾದ ಆವರಣವನ್ನು ಹೊಂದಿದೆ. ಆವರಣದೊಳಕ್ಕೆ ಕಾಲಿಡುತ್ತಿದ್ದಂತೆ ಎಡಭಾಗದಲ್ಲಿ ಶಿಲಾಮಂಟಪವೊಂದು ಗೋಚರಿಸುತ್ತದೆ. ವಿಜಯನಗರ ಕಾಲದಲ್ಲಿ ಕಟ್ಟಿರಬಹುದಾದ ಈ ಸೊಗಸಾದ ಉತ್ಸವ ಮಂಟಪವು..”
ಚಾಮರಾಜನಗರದ ಚಾಮರಾಜೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಂಟಪದ ಮೇಲಂಚಿನ ಕೋಷ್ಠಗಳೂ ಗಾರೆಶಿಲ್ಪಗಳೂ ಭಗ್ನವಾಗಿದ್ದರೂ ಈ ಮಾದರಿಯ ಉತ್ತಮಶಿಲ್ಪಗಳನ್ನು ಪ್ರತಿನಿಧಿಸುತ್ತವೆ. ಶಿವನ ಲೀಲಾಮೂರ್ತಿಗಳನ್ನೂ ದೇವಿಯ ವಿವಿಧ ರೂಪಗಳನ್ನೂ ಈ ಗಾರೆಶಿಲ್ಪಗಳಲ್ಲಿ ಕಾಣುತ್ತೀರಿ. ಶಿವನ ಗುಡಿಗೆ ಅಭಿಮುಖವಾಗಿ ನಂದಿಮಂಟಪ, ಗುಡಿಯನ್ನು ನವೀಕರಿಸುವ ಜನೋತ್ಸಾಹದ ಫಲವಾಗಿ ವಿಚಿತ್ರಬಣ್ಣ ಬಳಿದುಕೊಂಡ ದೊಡ್ಡನಂದಿಯಿದೆ…”
ಶೆಟ್ಟಿಕೆರೆಯ ಯೋಗಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಖ್ಯಗರ್ಭಗುಡಿಯಲ್ಲಿರುವ ಯೋಗಮಾಧವನ ವಿಗ್ರಹವು ಹೊಯ್ಸಳ ಶಿಲ್ಪಗಳಲ್ಲಿ ಬಹು ಅಪೂರ್ವಮಾದರಿಯ ವಿಗ್ರಹವೆಂದು ಹೇಳಬಹುದು. ಪೀಠದಿಂದ ಅಂದಾಜು ಎಂಟು ಅಡಿಗಳಷ್ಟು ಎತ್ತರವಿರುವ ಈ ವಿಗ್ರಹದ ಸೊಬಗು ಬೆರಗುಮೂಡಿಸುವಂಥದು. ತಾವರೆಯಂತಹ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಾಧವ. ಮೇಲುಗೈಗಳಲ್ಲಿ ಚಕ್ರಶಂಖಗಳಿವೆ….”
ಡಂಬಳದ ದೊಡ್ಡಬಸವೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಈ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ…”
ಲಕ್ಷ್ಮೇಶ್ವರದ ಸೋಮನಾಥ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ…”
ಹುಂಚದ ಪಂಚಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಸದಿಯ ಎದುರಿಗೆ ಇರುವ ಭವ್ಯವಾದ ಮಾನಸ್ತಂಭ ಈ ಬಸದಿಯ ವಿಶೇಷ ಆಕರ್ಷಣೆ. ನಲವತ್ತು ಅಡಿಗಳಷ್ಟು ಎತ್ತರವಾದ ಈ ಸ್ತಂಭವನ್ನು ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಮಾದರಿಯ ಮಾನಸ್ತಂಭ ಇಡಿಯ ದೇಶದಲ್ಲೇ ಅಪೂರ್ವವೆಂದು ಅಭಿಪ್ರಾಯಪಡಲಾಗಿದೆ. ವೇದಿಕೆಯ ಸುತ್ತಲಿನ ಕೆತ್ತನೆ ಆಕರ್ಷಕವಾಗಿದೆ..”









